ಬುಧವು ಸೌರವ್ಯೂಹದ ಅತ್ಯಂತ ಚಿಕ್ಕ ಗ್ರಹವಾಗಿದೆ. ಇದು ಸೂರ್ಯನಿಗೆ ಅತ್ಯಂತ ಹತ್ತಿರದ ಗ್ರಹವಾಗಿದೆ. ಬುಧವು ಪುರಾಣಗಳಲ್ಲಿ ದೇವತೆಗಳ ಸಂದೇಶವಾಹಕವಾಗಿದೆ. ಇದು ದಿನನಿತ್ಯದ ಅಭಿವ್ಯಕ್ತಿ ಮತ್ತು ಸಂಬಂಧಗಳ ಗ್ರಹವಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ತ್ವರಿತ ಬುದ್ಧಿ, ತ್ವರಿತ ಚಿಂತನೆ, ಸಾಧ್ಯತೆಗಳು, ಅಭಿಪ್ರಾಯಗಳು, ತಾರ್ಕಿಕತೆ ಮತ್ತು ವಿಷಯಗಳನ್ನು ತರ್ಕಬದ್ಧಗೊಳಿಸುವ ಸಾಮರ್ಥ್ಯದ ಬಗ್ಗೆ ಬುಧದ ಶಕ್ತಿಯು ಒಳ್ಳೆಯದು ಅಥವಾ ಕೆಟ್ಟದ್ದಾಗಿರಬಹುದು, ಆದರೆ ಅದು ಖಂಡಿತವಾಗಿಯೂ ಶಕ್ತಿಯನ್ನು ನೀಡುತ್ತದೆ! ಈ ಗ್ರಹವು ಒಂದು ವಿಷಯದಿಂದ ಇನ್ನೊಂದಕ್ಕೆ ಚಲಿಸಲು ಮತ್ತು ದೈಹಿಕ ಮತ್ತು ಮಾನಸಿಕ ಮಟ್ಟದಲ್ಲಿ ಉತ್ತರಗಳನ್ನು ಪಡೆಯಲು ನಮ್ಮನ್ನು ಪ್ರೇರೇಪಿಸುತ್ತದೆ.
ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧವು ಆರನೇ, ಎಂಟನೇ ಮತ್ತು ಹನ್ನೆರಡನೇ ಮನೆಯಲ್ಲಿ ನೆಲೆಗೊಂಡಿದ್ದರೆ ಪ್ರತಿಕೂಲ ಫಲಿತಾಂಶಗಳನ್ನು ನೀಡುವ ಕೆಲಸ ಮಾಡುತ್ತದೆ. ಮತ್ತೊಂದೆಡೆ ವ್ಯಕ್ತಿಯ ಜಾತಕದಲ್ಲಿ ಬುಧವು ಬಲವಾದ ಸ್ಥಿತಿಯಲ್ಲಿ ನೆಲೆಗೊಂಡಿದ್ದರೆ, ಆ ವ್ಯಕ್ತಿಯು ತನ್ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಅಪಾರ ಯಶಸ್ಸನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇರುತ್ತದೆ.
ಮೇಷ ರಾಶಿಯಲ್ಲಿ ಬುಧ ಸಂಕ್ರಮಣದ ಸಮಯ
ವೈದಿಕ ಜ್ಯೋತಿಷ್ಯದ ಪ್ರಕಾರ, ಇತರ ಗ್ರಹಗಳಿಗೆ ಹೋಲಿಸಿದರೆ ಬುಧ ಗ್ರಹವು ಅತ್ಯಂತ ವೇಗವಾಗಿ ಚಲಿಸುವ ಗ್ರಹವಾಗಿದೆ. ಆದ್ದರಿಂದ, ಇತರ ಗ್ರಹಗಳಿಗೆ ಹೋಲಿಸಿದರೆ ಅದರ ಸಾಗಣೆಯ ಅವಧಿಯು ಚಿಕ್ಕದಾಗಿದೆ. ಇದರಿಂದಾಗಿ ಪ್ರತಿಯೊಂದು ರಾಶಿಯಲ್ಲಿ ಇದು ಹದಿನಾಲ್ಕು ದಿನಗಳ ವರೆಗೆ ಇರುತ್ತದೆ. ಬುಧ ದೇವ 08 ಏಪ್ರಿಲ್, 2022 ಶುಕ್ರವಾರರಂದು 11:50 ಗಂಟೆಗೆ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತದೆ.
ನಡೆಯಿರಿ ಬುಧದ ಈ ಸಂಚಾರವು ಎಲ್ಲಾ ಹನ್ನೆರಡು ರಾಶಿಗಳ ಏನು ಪರಿಣಾಮ ಬೀರುತ್ತದೆ ಎಂಬುದನ್ನು ವಿವರವಾಗಿ ತಿಳಿಯೋಣ
ಬುಧ ಗ್ರಹವು ಮೇಷ ರಾಶಿಚಕ್ರದ ಮೂರನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ಮೇಷ ರಾಶಿಚಕ್ರದ ಲಗ್ನದ ಅಂದರೆ ಮೊದಲನೇ ಮನೆಗೆ ಗೋಚರಿಸುತ್ತದೆ. ಜಾತಕದಲ್ಲಿ ಮೊದಲನೇ ಮನೆಯ ಮೂಲಕ ಜನ್ಮ ಮತ್ತು ನಡವಳಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ. ಬುಧ ಸಂಚಾರದ ಪರಿಣಾಮದಿಂದಾಗಿ ನಿಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ಮತ್ತು ಧೈರ್ಯವನ್ನು ನೀವು ಹೊಂದುವಿರಿ.
ಇದರ ಪರಿಣಾಮದಿಂದಾಗಿ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೀವು ಸಮರ್ಥರಾಗುವಿರಿ. ಇದರ ನೇರವಾದ ಪರಿಣಾಮವು ನಿಮ್ಮ ಭವಿಷ್ಯದ ಮೇಲೆ ಬೀಳುತ್ತದೆ. ಇದರ ಹೊರತಾಗಿಯೂ, ನಿಮ್ಮ ಕಠೋರ ಪದಗಳು ಮತ್ತು ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ಕೆಲಸದ ಸ್ಥಳದಲ್ಲಿ ಯಾರೊಂದಿಗಾದರೂ ನಿಮ್ಮ ಜಗಳವಾಗುವ ಸಾಧ್ಯತೆ ಇದೆ.
ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನೀವು ಹೂಡಿಕೆ ಮತ್ತು ಆದಾಯದ ಮೂಲಗಳನ್ನು ಹೆಚ್ಚಿಸಬಹುದು. ಏಕೆಂದರೆ ಇದು ನಿಮಗೆ ಸಾಕಷ್ಟು ಅನುಕೂಲಕರವಾಗಿರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮ ಆಪ್ತರಿಂದ ನೀವು ಸರಿಯಾದ ಬೆಂಬಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಸಂಬಂಧಗಳನ್ನು ಬಲಪಡಿಸಲು ನಿಮ್ಮ ಆಪ್ತರು, ಸಂಬಂಧಿಕರು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಎಲ್ಲಾದರೂ ಹೊರಗೆ ಹೋಗಲು ಯೋಜಿಸಿಬೇಕು ಮತ್ತು ಅವರೊಂದಿಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಲು ಪ್ರಯತ್ನಿಸಬೇಕು. ಇದರಿಂದ ನೀವು ಸಂತೋಷ ಮತ್ತು ನೆಮ್ಮದಿಯನ್ನು ಅನುಭವಿಸುವಿರಿ.
ನಿಮ್ಮ ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಇದಕ್ಕಾಗಿ ವ್ಯಾಯಾಮ, ಯೋಗ ಮತ್ತು ಧ್ಯಾನವನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದು ಮತ್ತು ಉತ್ತಮ ಆಹಾರವನ್ನು ಸೇವಿಸುವುದು ನಿಮಗೆ ಉತ್ತಮ.
ಪರಿಹಾರ – ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಬುಧ ಬೀಜ ಮಂತ್ರವನ್ನು ಜಪಿಸುವುದು ನಿಮಗೆ ಉತ್ತಮ.
ಬುಧ ಗ್ರಹವು ವೃಷಭ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಅಧಿಪತಿ ಮತ್ತು ಸಾಚಾರದ ಈ ಸಮಯದಲ್ಲಿ ಇದು ವೃಷಭ ರಾಶಿಚಕ್ರದ ಹನ್ನೆರಡನೇ ಮನೆಗೆ ಗೋಚರಿಸುತ್ತದೆ. ಇದರಿಂದಾಗಿ ಈ ಸಮಯವು ನಿಮಗೆ ಸಾಮಾನ್ಯಕ್ಕಿಂತ ಹೆಚ್ಚು ಅನುಕೂಲಕರವಾಗಿರಲಿದೆ.
ವಿಶೇಷವಾಗಿ ವಿದೇಶದಲ್ಲಿ ವ್ಯಾಪಾರದಲ್ಲಿ ತೊಡಗಿರುವವರು ಅಥವಾ ವಿದೇಶದಲ್ಲಿ ಶಿಕ್ಷಣ ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಈ ಸಮಯದಲ್ಲಿ ನಿಮ್ಮ ಖ್ಯಾತಿ ಮತ್ತು ಗೌರವ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳನ್ನು ನಿಮ್ಮ ಪರವಾಗಿ ಮಾಡಿಕೊಳ್ಳುವಲ್ಲಿ ಸಹ ನೀವು ಯಾಹ್ಯಾಸ್ವಿಯಾಗುತ್ತೀರಿ. ಇದರಿಂದಾಗಿ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆದಾಗ್ಯೂ, ಆರ್ಥಿಕವಾಗಿ ಈ ಅವಧಿಯಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ವ್ಯಾಪಾರಸ್ಥರು ಸಹ ಈ ಸಂಚಾರದ ಸಮಯದಲ್ಲಿ ಯಾವುದೇ ಹೂಡಿಕೆಯನ್ನು ಮಾಡುವ ಮೂಲಕ ಯಾವುದೇ ರೀತಿಯ ಅಪಾಯವನ್ನು ಕೈಗೊಳ್ಳಬಹುದು
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಇನ್ನೂ ಒಂಟಿಯಾಗಿರುವ ವೃಷಭ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಮಯದಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಈಗಾಗಲೇ ಯಾವುದೇ ಸಮಬಂಧದಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಎಲ್ಲಾದರೂ ಸುತ್ತಾಡಲು ಹೋಗಲು ಯೋಜಿಸಬಹುದು ಮತ್ತು ಆ ಪ್ರಯಾಣವನ್ನು ತಮ್ಮ ಪ್ರೀತಿ, ಪ್ರಣಯ ಮತ್ತು ಸ್ನೇಹದಿಂದ ಸಂಪೂರ್ಣವಾಗಿ ಆನಂದಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯವು ದುರ್ಬಲವಾಗಿರಬಹುದು. ಇದರಿಂದಾಗಿ ಸಣ್ಣ ಪುಟ್ಟ ಅರೋಗ್ಯ ಸಮಬಂಧಿತ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು ಆದ್ದರಿಂದ ಉತ್ತಮ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ಸಾಧ್ಯವಾದಷ್ಟು ಹೊರಗಿನ ಹುರಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಇದರೊಂದಿಗೆ ನಿಮ್ಮ ದಿನಚರಿಯಲ್ಲಿ ಧ್ಯಾನ, ಯೋಗ ಮತ್ತು ವ್ಯಾಯಾಮವನ್ನು ಸೇರಿಸಿ.
ಪರಿಹಾರ – ಪ್ರತಿ ಬುಧವಾರದಂದು ಗಣೇಶ ದೇವರಿಗೆ ದುರ್ವವನ್ನು ಅರ್ಪಿಸಿ.
ಬುಧ ಗ್ರಹವು ಮಿಥುನ ರಾಶಿಚಕ್ರದ ಮೊದಲನೇ ಮನೆಯ ಅಧಿಪತಿ ಸಂಚಾರದ ಸಮಯದಲ್ಲಿ ಇದು ನಿಮ್ಮ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. ಹನ್ನೊಂದನೇ ಮನೆಯನ್ನು ಒಬ್ಬ ವ್ಯಕ್ತಿಯ ಆದಾಯ ಮತ್ತು ಗಳಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ.
ಅಂತಹ ಸಂದರ್ಭದಲ್ಲಿ ಸ್ಥಳೀಯನು ಜೀವನದಲ್ಲಿ ಯಾವುದೇ ರೀತಿಯ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಇದು ನಿಮ್ಮ ಸೃಜನಶೀಲ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಸಂವಹನ ಕೌಶಲ್ಯವು ಸುಧಾರಿಸುತ್ತದೆ. ಪರಿಣಾಮವಾಗಿ ಕೆಲಸದ ಸ್ಥಳದಲ್ಲಿ ನಿಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಉತ್ತಮ ಪ್ರದರ್ಶನ ಮಾಡುವಲ್ಲಿ ನೀವು ಸಮರ್ಥರಾಗುವಿರಿ. ನೀವು ವ್ಯಾಪಾರದಲ್ಲಿ ತೊಡಗಿದ್ದರೆ, ನಿಮ್ಮ ಸಮಾಲೋಚನಾ ಕೌಶಲ್ಯಗಳು ಅನೇಕ ಉತ್ತಮ ವ್ಯವಹಾರಗಳನ್ನು ನಿಮ್ಮ ಕಡೆಗೆ ಆಕರ್ಷಿಸಲು ನಿಮಗೆ ಸಹಾಯ ಮಾಡುತ್ತದೆ. ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಹಣಕಾಸಿನ ವಿಷಯವು ಸುಧಾರಿಸುತ್ತದೆ. ಈ ಅವಧಿಯಲ್ಲಿ ವಿಶೇಷವಾಗಿ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವ ಸ್ಥಳೀಯರು ಈ ಸಂಚಾರದಿಂದ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆ ಇದೆ.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಪ್ರೀತಿಯ ಸಂಬಂಧದಲ್ಲಿರುವ ಮಿಥುನ ರಾಶಿಚಕ್ರದ ಸ್ಥಳೀಯರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಇದರಿಂದಾಗಿ ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಕಷ್ಟು ಅವಕಾಶವನ್ನು ನೀವು ಪಡೆಯುತ್ತೀರಿ . ಈ ಸಮಯದಲ್ಲಿ ಅವರೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತೀರಿ ಮತ್ತು ಪರಸ್ಪರರೊಂದಿಗೆ ಉತ್ತಮ ತಿಳಿವಳಿಕೆಯನ್ನು ಹೊಂದಿರುತ್ತೀರಿ. ವಿವಾಹಿತ ಜನರು ತಮ್ಮ ಜೀವನ ಸಂಗಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ.
ಈ ಸಮಯದಲ್ಲಿ ಸಾಮಾಜಿಕವಾಗಿ ನೀವು ಸಕ್ರಿಯರಾಗಿರುತ್ತೀರಿ ಮತ್ತು ಇದರೊಂದಿಗೆ ನಿಮ್ಮ ಸಾಮಾಜಿಕ ವಲಯವು ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಯಾವುದೇ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಈ ಸಮಯದಲ್ಲಿ ನೀವು ಮೊದಲಿಗಿಂತ ಹೆಚ್ಚು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುತ್ತೀರಿ.
ಪರಿಹಾರ – ಅದೃಷ್ಟಕ್ಕಾಗಿ ನಿಮ್ಮ ಮೇಜಿನ ಬಳಿ ನಿಮ್ಮ ಹಸಿರು ಅವೆಂಚುರಿನ್ ಸ್ಫಟಿಕ ಸಸ್ಯವನ್ನು ಹೊಂದಿರಿ.
ಬುಧ ಗ್ರಹವು ಕರ್ಕ ರಾಶಿಚಕ್ರದ ಹನ್ನೆರಡನೇ ಮತ್ತು ಮೂರನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಹತ್ತನೇ ಮನೆಗೆ ಪ್ರವೇಶಿಸುತ್ತದೆ. ಹತ್ತನೇ ಮನೆಯ ಮೂಲಕ ಕರ್ಮ ಮತ್ತು ವೃತ್ತಿಯ ಬಗ್ಗೆ ಪರಿಗಣಿಸಲಾಗುತ್ತದೆ.
ಬುಧ ಸಂಚಾರದ ಪರಿಣಾಮದಿಂದಾಗಿ ಈ ಸಂಚಾರದ ಅವಧಿಯಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ನಿಮ್ಮ ಕೆಲಸದ ಸ್ಥಳದಲ್ಲೂ ನೀವು ಗೊಂದಲಕ್ಕೆ ಒಳಗಾಗಬಹುದು.
ಆದಾಗ್ಯೂ, ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮ ಮತ್ತು ಉತ್ತಮವಾಗಿ ಪ್ರಯತ್ನಿಸಿದರೆ, ಈ ಸಂಚಾರವು ಯಶಸ್ಸು ಮತ್ತು ನಿಮ್ಮ ವೃತ್ತಿ ಜೀವನದಲ್ಲಿ ಬರುತ್ತಿರುವ ಅಡೆತಡೆಗಳನ್ನು ತೊಡೆದುಹಾಕಲು ನಿಮಗೆ ಅವಕಾಶವನ್ನು ನೀಡುತ್ತದೆ. ಈ ಸಮಯದಲ್ಲಿ ಉದ್ಯೋಗಪರರು ವರ್ಗಾವಣೆಯನ್ನು ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಈ ಸಮಯದಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಯೊಂದು ಕೆಲಸವನ್ನು ನೀವು ಹೆಚ್ಚು ಗಮನದೊಂದಿಗೆ ಮಾಡಬೇಕು. ಇದರೊಂದಿಗೆ ಎಲ್ಲವನ್ನೂ ಸಾಧ್ಯವಾದಷ್ಟು ಜಾಗರೂಕತೆಯೊಂದಿಗೆ ಮತ್ತು ಶಾಂತವಾಗಿ ಮಾಡಿ ಎಂದು ನಿಮಗೆ ನೀಡಲಾಗುತ್ತದೆ. ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಕೂಡ ಈ ಅವಧಿಯು ಸಾಕಷ್ಟು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ಉತ್ತಮ ವ್ಯವಹಾರಗಳನ್ನು ಪಡೆಯಬಹುದು.
ಆರ್ಥಿಕ ಭಾವಗದ ಬಗ್ಗೆ ಮಾತನಾಡಿದರೆ, ಈ ಸಾಚಾರದ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಕೆಲವರು ತಮ್ಮ ಐಷಾರಾಮಿಗಾಗಿ ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಅನೇಕ ಸ್ಥಳೀಯರು ಈ ಸಮಯದಲ್ಲಿ ತಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಲು ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ. ಇದರ ಋಣಾತ್ಮಕ ಪರಿಣಾಮವು ನಿಮ್ಮ ಆರ್ಥಿಕ ಸ್ಥಿತಿಯನ್ನು ನೇರವಾಗಿ ಪರಿಣಾಮ ಬೀರುತ್ತದೆ.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ. ಈ ಅವಧಿಯಲ್ಲಿ ಕಿರಿಯ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದಾಗ್ಯೂ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಪ್ರೀತಿಯ ಸಂಬಂಧದಲ್ಲಿ ನಿಮ್ಮ ಪ್ರೀತಿಪಾತ್ರರ ಪ್ರೀತಿಯನ್ನು ನೀವು ಪಡೆಯುವಿರಿ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ನಿಮ್ಮ ಪೋಷಕರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಸಂಚಾರದ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಎಂದು ಸೂಚಿಸಲಾಗುತ್ತದೆ.
ಪರಿಹಾರ – ಬುಧವಾರದಂದು ಹಿಂದುಳಿದ ಹುಡುಗಿಯರಿಗೆ ಹಸಿರು ಬಟ್ಟೆಗಳನ್ನು ದಾನ ಮಾಡಿ.
ಬುಧ ಗ್ರಹವು ಸಿಂಹ ರಾಶಿಚಕ್ರದ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಈ ಸಮಯದಲ್ಲಿ ಇದು ಸಿಂಹ ರಾಶಿಚಕ್ರದ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ. ಜಾತಕದಲ್ಲಿ ಒಂಬತ್ತನೇ ಮನೆಯ ಮೂಲಕ ಪ್ರಯಾಣ ಮತ್ತು ಅದೃಷ್ಟವನ್ನು ಪರಿಗಣಿಸಲಾಗುತ್ತದೆ.
ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ನೀವು ಅಪಾರ ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಉತ್ತಮ ನಿರ್ವಹಣೆ ಕೌಶಲ್ಯಗಳನ್ನು ಹೊಂದಿರುತ್ತೀರಿ. ಇದರಿಂದಾಗಿ ನಿಮ್ಮ ವೃತ್ತಿ ಜೀವನದಲ್ಲಿ ಮುಂದುವರಿಯಲು ನಿಮಗೆ ಸಾಕಷ್ಟು ಸಹಾಯವಾಗುತ್ತದೆ. ನಿಮ್ಮ ಹೆಸರು, ಮನ್ನಣೆ ಮತ್ತು ಖ್ಯಾತಿಯನ್ನು ಪಡೆಯಲು ಮೊದಲಿನಿಂದಲೂ ತುಂಬಾ ಆಕ್ರಮಣಕಾರಿಯಾಗಿ ಕೆಲಸ ಮಾಡುವಾಗ ನೀವು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಹಿಂಜರಿಯದಿರುವ ಸಮಯ ಇದು .
ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವು ನಿಮ್ಮ ಹಣಕಾಸಿನ ಭಾಗದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಮತ್ತು ನೀವು ಉತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ಈ ಸಮಯದಲ್ಲಿ ಹಣವನ್ನು ಸಂಗ್ರಹಿಸಲು ಮತ್ತು ಉಳಿಸಲು ಸಹ ನಿಮಗೆ ಸಾಧ್ಯವಾಗುತ್ತದೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ. ಈ ಸಮಯದಲ್ಲಿ ನಿಮ್ಮ ಆಪ್ತರೊಂದಿಗೆ ವಿಶೇಷವಾಗಿ ನಿಮ್ಮ ಸಹೋದರ ಸಹೋದರಿಯರೊಂದಿಗೆ ಉತ್ತಮ ಮತ್ತು ಸಂತೋಷವಾದ ಸಮಯವನ್ನು ಕಳೆಯುವಿರಿ. ಇದರೊಂದಿಗೆ ಈ ಅವಧಿಯಲ್ಲಿ ನಿಮ್ಮ ಅರೋಗ್ಯ ಜೀವನವು ಸಹ ಉತ್ತಮವಾಗಿರುತ್ತದೆ. ಆದರೂ ಇದರ ಹೊರತಾಗಿಯೂ ನಿಮ್ಮ ಆರೋಗ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ನಿಮ್ಮ ದಿನಚರಿಯಲ್ಲಿ ಸಮತೋಲಿತ ಆಹಾರ, ವ್ಯಾಯಾಮ, ಧ್ಯಾನ ಇತ್ಯಾದಿಯನ್ನು ಸೇರಿಸಲು ನಿಮಗೆ ಸಲಹೆ ನೀಡಲಾಗುತ್ತದೆ.
ಪರಿಹಾರ – ಬುಧವಾರದಂದು ಗಣೇಶ ದೇವರಿಗೆ ಲಡ್ಡುಗಳನ್ನು ಅರ್ಪಿಸಿ.
ಬುಧ ಗ್ರಹವು ಕನ್ಯಾ ರಾಶಿಚಕ್ರದ ಲಗ್ನದ ಮನೆ ಅಂದರೆ ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಕನ್ಯಾ ರಾಶಿಚಕ್ರದ ಎಂಟನೇ ಮನೆಗೆ ಸಾಗುತ್ತದೆ. ಜಾತಕದಲ್ಲಿ ಎಂಟನೇ ಮನೆಯ ಮೂಲಕ ವಯಸ್ಸು, ಅಪಾಯ ಮತ್ತು ಅಪಘಾತದ ಬಗ್ಗೆ ಪರಿಗಣಿಸಲಾಗುತ್ತದೆ .
ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರವು ನಿಮ್ಮ ವೃತ್ತಿ ಜೀವನದಲ್ಲಿ ಇದ್ದಕ್ಕಿದ್ದಂತೆ ಅನೇಕ ಬದಲಾವಣೆಗಳನ್ನು ತರಲಿದೆ. ಇದಕ್ಕಾಗಿ ನೀವು ಮೊದಲಿನಿಂದಲೇ ಸಿದ್ಧರಾಗಿರುತ್ತೀರಿ. ಈ ಅವಧಿಯಲ್ಲಿ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಯತ್ನಗಳ ಫಲಿತಾಂಶಗಳನ್ನು ನೀವು ಪಡೆಯಲಾಗುವುದಿಲ್ಲ. ಇದರಿಂದಾಗಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಅಂತಹ ಸಂದರ್ಭದಲ್ಲಿ ಧೈರ್ಯದಿಂದಿರಿ ಮತ್ತು ತಾಳ್ಮೆಯನ್ನು ಹೊಂದಿರಿ ಎಂದು ಸಲಹೆ ನೀಡಲಾಗುತ್ತದೆ.
ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಅನೇಕ ಸ್ಥಳೀಯರು ಕೆಲವು ಗುಪ್ತ ಮೂಲಗಳಿಂದಲೂ ಲಾಭವನ್ನು ಗಳಿಸಬಹುದು. ಕನ್ಯಾ ರಾಶಿಚಕ್ರದ ಕೆಲವರು ಹಿಂದೆ ಮಾಡಿದ ಹೂಡಿಕೆಯಿಂದ ಲಾಭದಾಯಕ ಫಲಿತಾಂಶಗಳನ್ನು ಪಡೆಯುತ್ತಾರೆ. ಇದಲ್ಲದೆ ನಿಮ್ಮ ಬಾಕಿ ಇರುವ ಲೋನ್ ಅಥವಾ ಸಾಲಗಳನ್ನು ಈ ಅವಧಿಯಲ್ಲಿ ಮರುಪಾವತಿಸಲು ಸಹ ನಿಮಗೆ ಸಾಧ್ಯವಾಗುತ್ತದೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಕನ್ಯಾ ರಾಶಿಚಕ್ರದ ವಿವಾಹಿತ ಜನರು ಈ ಸಮಯದಲ್ಲಿ ತಮ್ಮ ಪ್ರತಿಯೊಂದು ಕೆಲಸದಲ್ಲಿ ಜೀವನ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವುದರಿಂದಾಗಿ ಮನೆಯ ವಾತಾವರಣದಲ್ಲಿ ಧನಾತ್ಮಕತೆಯನ್ನು ಹೊಂದಿರುವಿರಿ. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ತಂದೆಯ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಇದರೊಂದಿಗೆ ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಸರಿಯಾಗಿ ಕಾಳಜಿ ವಹಿಸಬೇಕು ಎಂದು ನಿಮಗೆ ಸೂಚಿಸಲಾಗುತ್ತದೆ.
ಪರಿಹಾರ – ನೀರು ಕುಡಿಯಲು ಬೆಳ್ಳಿ ಲೋಟವನ್ನು ಬಳಸುವುದು ನಿಮಗೆ ಉತ್ತಮ.
ತುಲಾ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಇದನ್ನು ತುಲಾ ರಾಶಿಯ ಅಧಿಪತಿ ಶುಕ್ರನ ಸ್ನೇಹಿತನೆಂದು ಸಹ ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ಇದು ತುಲಾ ರಾಶಿಚಕ್ರದ ಏಳನೇ ಮನೆಗೆ ಪ್ರವೇಶಿಸುತ್ತದೆ. ಈ ಮನೆಯ ಮೂಲಕ ಒಬ್ಬ ವ್ಯಕ್ತಿಯ ಮದುವೆ, ಜೀವನ ಸಂಗಾತಿಯ ಬಗ್ಗೆ ಪರಿಗಣಿಸಲಾಗುತ್ತದೆ. ಇದರಿಂದಾಗಿ ನೀವು ವಿವಿಧ ರೀತಿಯ ಫಲಿತಾಂಶಗಳನ್ನು ಪಡೆಯುವಿರಿ.
ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ವಿಶೇಷವಾಗಿ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಂಚಾರವು ಉತ್ತಮ ಲಾಭವನ್ನು ನೀಡುತ್ತದೆ. ಪರಿಣಾಮವಾಗಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುತ್ತಿರುವವರಿಗೆ ಈ ಸಮಯವೂ ಅತ್ಯಂತ ಅನುಕೂಲಕರವಾಗಿರುತ್ತದೆ. ಇದರಿಂದಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಮತ್ತೊಂದೆಡೆ ಉದ್ಯೋಗಪರರು ಸಹ ಅನೇಕ ಉತ್ತಮ ಅವಕಾಶಗಳನ್ನು ಪಡೆಯಬಹುದು. ವಿದೇಶ ಪಾಲುದಾರಿಕೆ ಅಥವಾ ವಿದೇಶಕ್ಕೆ ಸಂಬಂಧಿಸಿದ ವ್ಯಾಪದಲ್ಲಿ ತೊಡಗಿರುವ ಜನರು ಈ ಅವಧಿಯಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ.
ಆರ್ಥಿಕವಾಗಿ, ಈ ಅವಧಿಯು ನಿಮ್ಮ ಜೀವನದಲ್ಲಿ ಹಠಾತ್ ವೆಚ್ಚಗಳನ್ನು ಹೆಚ್ಚಿಸುತ್ತದೆ. ಇದು ನೇರವಾಗಿ ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇದರ ಹೊರತಾಗಿಯೂ ಈ ಸಮಯದಲ್ಲಿ ಹಣಕಾಸು ಗಳಿಸಲು ಅನೇಕ ಅವಕಾಶಗಳನ್ನು ನೀವು ಪಡೆಯುವಿರಿ. ವೈಯಕ್ತಿಕ ಜೀವನದಲ್ಲಿ, ಪ್ರೀತಿಯ ಸಂಬಂಧವನ್ನು ಹೊಂದಿರುವ ತುಲಾ ರಾಶಿಚಕ್ರದ ಜನರು ತಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ಸ್ವಲ್ಪ ಮಂದತೆಯನ್ನು ಅನುಭವಿಸಬಹುದು. ಮತ್ತೊಂದೆಡೆ ವಿವಾಹಿತರ ದಾಂಪತ್ಯ ಜೀವನವು ಸಾಮಾನ್ಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ನೀವು ಹೆಚ್ಚು ಫಿಟ್ ಮತ್ತು ಆರೋಗ್ಯಕರವಾಗಿರುತ್ತೀರಿ, ಏಕೆಂದರೆ ಈ ಸಮಯದಲ್ಲಿ ನೀವು ಶಕ್ತಿಯಿಂದ ತುಂಬಿರುತ್ತೀರಿ.
ಪರಿಹಾರ – ಬುಧ ದೇವರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು ಬುಧವಾರದಂದು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸುವುದು ನಿಮಗೆ ಉತ್ತಮ.
ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಆರನೇ ಮನೆಗೆ ಗೋಚರಿಸುತ್ತದೆ. ಆರನೇ ಮನೆಯ ಮೂಲಕ ಸವಾಲುಗಳು, ಅಡೆತಡೆಗಳು ಮತ್ತು ರೋಗಗಳ ಬಗ್ಗೆ ಪರಿಗಣಿಸಲಾಗುತ್ತದೆ.
ಆರನೇ ಮನೆಯಲ್ಲಿ ಬುಧ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ನೀವು ಎದುರಿಸುವಿರಿ. ಕೆಲಸದ ಸ್ಥಳದಲ್ಲಿ ನೀವು ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು. ಏಕೆಂದರೆ ಈ ಅವಧಿಯಲ್ಲಿ ನಿಮ್ಮ ಧ್ವನಿಯಲ್ಲಿ ಸ್ವಲ್ಪ ಕಹಿ ಉಂಟಾಗಬಹುದು. ಇದರಿಂದಾಗಿ ನೀವು ಬಯಸದಿದ್ದರೂ ಇತರರ ಭಾವನೆಗಳನ್ನು ನೋಯಿಸಬಹುದು. ಕೆಲಸದ ಸ್ಥಳದಲ್ಲಿ ಯಾವುದೇ ಸಹೋದ್ಯೋಗಿಯೊಂದಿಗೆ ನಿಮ್ಮ ಜಗಳವಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಯಾವುದೇ ವಿವಾದವನ್ನು ತಪ್ಪಿಸಿ ಮತ್ತು ನಿಮ್ಮ ಧ್ವನಿಯನ್ನು ನಿಯಂತ್ರಿಸಿ ಎಂದು ನಿಮಗೆ ಸಲಹೆ ನೀಡಲಾಗುತ್ತದೆ
ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ವೆಚ್ಚಗಳನ್ನು ನೀವು ನಿಯಂತ್ರಿಸಬೇಕು ಇಲ್ಲದಿದ್ದರೆ ನಿಮ್ಮ ವೆಚ್ಚಗಳಿಂದಾಗಿ ನೀವು ಹಣಕಾಸಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರಿಂದ ನೀವು ಆರ್ಥಿಕ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಈ ಅವಧಿಯಲ್ಲಿ ನೀವು ಯಾವುದೇ ಸಂಸ್ಥೆ ಅಥವಾ ಬ್ಯಾಂಕ್ ಮೂಲಕ ಲೋನ್ ತೆಗೆದುಕೊಳ್ಳಲು ಸಹ ಯೋಜಿಸಬಹುದು. ಇದಲ್ಲದೆ ಈ ಸಮಯದಲ್ಲಿ ಕೆಲವರು ತಮ್ಮ ಹಿಂದಿನ ಸಾಲ ಅಥವಾ ಲೋನ್ ಅನ್ನು ಮರುಪಾವತಿಸುವಲ್ಲಿ ಯಶಸ್ವಿಯಾಗಬಹುದು.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಇದು ಅವರೊಂದಿಗಿನ ಸಂಬಂಧದಲ್ಲಿ ಉತ್ತಮ ತಿಳುವಳಿಕೆ ಮತ್ತು ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಕಳಪೆ ಮತ್ತು ದುರ್ಬಲವಾಗಿರುವ ಸಾಧ್ಯತೆ ಇದೆ. ಏಕೆಂದರೆ ಈ ಸಂಚಾರದ ಸಮಯದಲ್ಲಿ ನೀವು ಹಾರ್ಮೋನ್, ಚರ್ಮ ಅಥವಾ ಯಾವುದೇ ರೀತಿಯ ಅಲರ್ಜಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮತ್ತು ಕಳಪೆ ಆಹಾರ ಪದ್ದತಿಯನ್ನು ಸುಧಾರಿಸಿ.
ಪರಿಹಾರ – ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ “ಓಂ ಭೂಮ್ ಬುಧಾಯ ನಮಃ” ಮಂತ್ರವನ್ನು 108 ಬಾರಿ ಜಪಿಸಿ.
ಬುಧ ಗ್ರಹವು ಧನು ರಾಶಿಚಕ್ರದ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಧನು ರಾಶಿಚಕ್ರದ ಐದನೇ ಮನೆಗೆ ಗೋಚರಿಸುತ್ತದೆ. ಈ ಮನೆಯ ಮೂಲಕ ಪ್ರೀತಿಯ ಸಂಬಂಧ, ಮಕ್ಕಳು ಮತ್ತು ಪ್ರಣಯದ ಬಗ್ಗೆ ಪರಿಗಣಿಸಲಾಗುತ್ತದೆ.
ಧನು ರಾಶಿಚಕ್ರದ ಸ್ಥಳೀಯರ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ನಿಮ್ಮ ಅನುಭವ ಮತ್ತು ಜ್ಞಾನದ ಸರಿಯಾದ ಬಳಕೆಯ ಮೂಲಕ ನೀವು ಅಪಾರ ಯಶಸ್ಸು ಮತ್ತು ಪ್ರಗತಿಯನ್ನು ಗಳಿಸುವಿರಿ. ವ್ಯಾಪಾರದಲ್ಲಿ ತೊಡಗಿರುವ ಜನರು ಉತ್ತಮ ಲಾಭದ ಮೂಲಕ ವೃತ್ತಿ ಜೀವನದಲ್ಲಿ ಬೆಳವಣಿಗೆಯನ್ನು ಪಡೆಯುತ್ತಾರೆ. ಇದಲ್ಲದೆ ನಿಮ್ಮ ಜೀವನ ಸಂಗಾತಿಯು ಸಹ ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಪ್ರತಿಯೊಂದು ಕೆಲಸವನ್ನು ನೀವು ಅತ್ಯಂತ ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಒಟ್ಟಾರೆಯಾಗಿ ಈ ಸಮಯವೂ ನಿಮಗೆ ಸಾಕಷ್ಟು ಅನುಕೂಲಕರವಾಗಿರುತ್ತದೆ.
ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಹಣಕಾಸಿಗೆ ಸಂಬಂಧಿಸಿದ ಯಾವುದೇ ವಿಷಯದ ನಿರ್ಧಾರವನ್ನು ನೀವು ಆತುರದಲ್ಲಿ ತೆಗೆದುಕೊಳ್ಳಬಾರದು. ಸರಿಯಾದ ಸಂಶೋಧನೆ ಮತ್ತು ವಿಶ್ಲೇಷಣೆಯ ನಂತರವೇ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ನಿಮಗೆ ಸೂಚಿಸಲಾಗುತ್ತದೆ. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ದೇಶೀಯ ವೆಚ್ಚಗಳು ಸಹ ಸಾಕಷ್ಟು ಹೆಚ್ಚಾಗಲಿವೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ ನಿಮ್ಮ ವೈವಾಹಿಕ ಮತ್ತು ಕುಟುಂಬ ಜೀವನಕ್ಕೆ ಸಂಬಂಧಿಸಿದ ಕೆಲವು ಮಿಶ್ರ ಫಲಿತಾಂಶಗಳನ್ನು ನೀವು ಪಡೆಯಲಿದ್ದೀರಿ. ಈ ಸಮಯದಲ್ಲಿ ಧನು ರಾಶಿಚಕ್ರದ ಕೆಲವು ಸ್ಥಳೀಯರು ತಂದೆಯೊಂದಿಗಿನ ತಮ್ಮ ಸಂಬಂಧವನ್ನು ಸುಧಾರಿಸುತ್ತಾರೆ.
ಈ ಸಮಯದಲ್ಲಿ ಧನು ರಾಶಿಚಕ್ರದ ಸ್ಥಳೀಯರ ಮಕ್ಕಳು ತಮ್ಮ ಶಿಕ್ಷಣದಲ್ಲಿ ಉತಾಮ್ ಪ್ರದರ್ಶನ ಮಾಡುತ್ತಾರೆ ಮತ್ತು ಪ್ರಗತಿ ಹೊಂದುತ್ತಾರೆ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಬಹುದು. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುವ ಕೆಲಸ ಮಾಡುತ್ತದೆ. ಆದ್ದರಿಂದ ತಾಳ್ಮೆಯಿಂದಿರಿ ಎಂದು ನಿಮಗೆ ಸಲಹೆ ನೀಡಲಾಗುತ್ತದೆ.
ಪರಿಹಾರ – ಬುಧವಾರದಂದು ಉಪವಾಸ ಮಾಡುವುದು ನಿಮಗೆ ಪ್ರಯೋಜನಕಾರಿ.
ಬುಧ ಗ್ರಹವು ಮಕರ ರಾಶಿಚಕ್ರದ ಒಂಬತ್ತನೇ ಮತ್ತು ಆರನೇ ಮನೆಯ ಅಧಿಪತಿ ಮತ್ತು ತನ್ನ ಸಂಚಾರದ ಸಮಯದಲ್ಲಿ ಇದು ನಿಮ್ಮ ನಾಲ್ಕನೇ ಮನೆಗೆ ಪವೇಶಿಸುತ್ತದೆ. ಆರನೇ ಮನೆಯ ಮೂಲಕ ತಾಯಿ, ಭೂಮಿ ಮತ್ತು ಸಂತೋಷವನ್ನು ಪರಿಗಣಿಸಲಾಗುತ್ತದೆ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ಬುಧ ಸಂಚಾರದ ಪರಿಣಾಮದಿಂದಾಗಿ ನಿಮ್ಮ ವೃತ್ತಿಪರ ಜೀವನದಲ್ಲಿ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಗುರುತು ಉತ್ತಮ ಸ್ಥಾನಮಾನವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕವಾಗಿ ಈ ಸಮಯದಲ್ಲಿ ನಿಮ್ಮ ಹಣಕಾಸಿನ ದೊಡ್ಡ ಭಾಗವನ್ನು ನೀವು ಖರ್ಚು ಮಾಡುವಿರಿ. ಏಕೆಂದರೆ ಈ ಅವಧಿಯಲ್ಲಿ ನೀವು ಹೊಸ ವಾಹನ ಅಥವಾ ಸಂಪತ್ತನ್ನು ಖರೀದಿಸಬಹುದು. ಇದರ ಹೊರತಾಗಿಯೂ ನೀವು ಉತ್ತಮ ಆದಾಯವನ್ನು ಗಳಿಸುವಿರಿ.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ಇದಲ್ಲದೆ ನಿಮ್ಮ ಪೋಷಕರ ಆರೋಗ್ಯವು ಸಹ ಈ ಸಮಯದಲ್ಲಿ ಸುಧಾರಿಸುತ್ತದೆ. ಕೆಲವರು ತಮ್ಮ ಸಂಬಂಧಿಕರು ಮತ್ತು ಆಪ್ತರನ್ನು ಭೇಟಿ ಮಾಡಲು ಯಾವುದೇ ಸಣ್ಣ ಕಾರ್ಯವನ್ನು ಸಹ ಆಯೋಜಿಸಬಹುದು.
ಮಕರ ರಾಶಿಚಕ್ರದ ಕೆಲವರು ಕುಟುಂಬದಲ್ಲಿ ಯಾವುದೇ ಸಂಪತ್ತಿನ ಬಗ್ಗೆ ಕೆಲವು ವಿವಾದಗಳಿಗೆ ಒಳಗಾಗಬಹುದು. ಇದನ್ನು ನೀವು ಸಾಧ್ಯವಾದಷ್ಟು ಬೇಗ ಪರಿಹರಿಸಬೇಕು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಕೆಮ್ಮು, ಶೀತ ಮತ್ತು ಎದೆ ನೋವಿನಂತಹ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ನೀವು ಕೆಲಸ ಮಾಡಬೇಕಾಗುತ್ತದೆ.
ಪರಿಹಾರ – ಬ್ರಾಹ್ಮಣವು ಮತ್ತು ದೇವಸ್ಥಾನದಲ್ಲಿ ಹಸಿರು ಎಳೆಗಳ ಸೊಪ್ಪನ್ನು ದಾನ ಮಾಡುವುದು ಉತ್ತಮ.
ಬುಧ ಗ್ರಹವು ಕುಂಭ ರಾಶಿಚಕ್ರದ ಐದನೇ ಮತ್ತು ಎಂಟನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮೂರನೇ ಮನೆಗೆ ಸಾಗುತ್ತದೆ.
ನಿಮ್ಮ ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ನೀವು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯುತ್ತೀರಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಸೃಜನಶೀಲ ಸಾಮರ್ಥ್ಯವು ಹೆಚ್ಚಾಗುವ ಮೂಲಕ ನಿಮ್ಮ ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಮೂಲಕ ಮಾಡಲಾಗುವ ಪ್ರತಿಯೊಂದು ಪ್ರಯತ್ನಗಳೊಂದಿಗೆ ನಿಮ್ಮ ವೃತ್ತಿ ಜೀವನದಲ್ಲಿ ನೀವು ಮುಂದುವರಿಯುತ್ತಿರಿ. ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಹಣಕಾಸಿನ ವಿಷಯದಲ್ಲಿ ಈ ಸಮಯವು ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಇದರೊಂದಿಗೆ ಸಣ್ಣ ಪುಟ್ಟ ಪ್ರವಾಸಗಳಲ್ಲಿ ಸಹ ನೀವು ನಿಮ್ಮ ಹಣವನ್ನು ಖರ್ಚು ಮಾಡಬಹುದು.
ಆದ್ದರಿಂದ ನಿಮ್ಮ ವೆಚ್ಚಗಳ ಬಗ್ಗೆ ನೀವು ಸ್ವಲ್ಪ ಜಾಗರೂಕರಾಗಿರಬೇಕು ಮತ್ತು ನಿಮ್ಮ ವೆಚ್ಚಗಳನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಯಬೇಕಾಗಬಹುದು. ವೈಯಕ್ತಿಕ ಜೀವನದಲ್ಲಿ, ನೀವು ಕೆಲವು ಜನರೊಂದಿಗೆ ಹೊಸ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಹೊಂದಲು ಸಾಧ್ಯವಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರು ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಅನೇಕ ಅವಕಾಶಗಳನ್ನು ಪಡೆಯುವಿರಿ.
ವಿವಾಹಿತ ಜನರು ತಮ್ಮ ಕುಟುಂಬವನ್ನು ಹೆಚ್ಚಿಸಲು ಯೋಜಿಸಬಹುದು. ಈ ಅವಧಿಯಲ್ಲಿ ಮಕರ ರಾಶಿಚಕ್ರದ ಜನರು ತಮ್ಮ ಮಕ್ಕಳ ಬದಿಯಿಂದ ಯಾವುದೇ ಸಂತೋಷದ ಸುದ್ಧಿಯನ್ನು ಪಡೆಯಬಹುದು. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ, ನೀವು ಶಕ್ತಿಯಿಂದ ತುಂಬಿರುವ ಮೂಲಕ ಮಾನಸಿಕವಾಗಿ ತುಂಬಾ ಆರೋಗ್ಯಕರವಾಗಿರುತ್ತೀರಿ.
ಪರಿಹಾರ – ಬುಧ ಸಂಕ್ರಮಣದ ದುಷ್ಪರಿಣಾಮಗಳನ್ನು ತಡೆಯಲು ಬುಧವಾರದ ಉಪವಾಸವು ಉತ್ತಮ ಮಾರ್ಗವಾಗಿದೆ.
ಬುಧ ಗ್ರಹವು ಮೀನ ರಾಶಿಚಕ್ರದ ಏಳನೇ ಮತ್ತು ನಾಲ್ಕನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಮೀನ ರಾಶಿಚಕ್ರದ ಸ್ಥಳೀಯರ ಎರಡನೇ ಮನೆಗೆ ಪ್ರವೇಶಿಸುತ್ತದೆ. ಎರಡನೇ ಮನೆಯ ಮೂಲಕ ಹಣ, ಕುಟುಂಬ ಧ್ವನಿ ಇತ್ಯಾದಿಯ ಬಗ್ಗೆ ಪರಿಗಣಿಸಲಾಗುತ್ತದೆ. ಪರಿಣಾಮವಾಗಿ ನಿಮ್ಮ ಯಾವುದೇ ಚರ ಮತ್ತು ಸ್ಥಿರ ಸಂಪತ್ತಿಗೆ ಸಂಬಂಧಿಸಿದ ವಿಷಯವು ಸಿಲುಕಿಕೊಂಡಿದ್ದರೆ, ಈ ಸಂಚಾರದ ಸಮಯದ ನಂತರವೂ ಸಿಲುಕಿಕೊಂಡಿರುತ್ತದೆ.
ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ಸ್ಥಿರವಾಗಿರುತ್ತವೆ ಮತ್ತು ಆರ್ಥಿಕವಾಗಿ ಈ ಸಮಯವು ಹಣಕಾಸಿನ ವಿಷಯದಲ್ಲಿ ಸಮೃದ್ಧಿಯನ್ನು ತರುತ್ತದೆ. ಇದರ ಹೊರತಾಗಿ ವ್ಯಾಪಾರಕ್ಕೆ ಸಂಬಂಧಿಸಿದ ಜನರು ತಮ್ಮ ಕೆಲಸದ ಸ್ಥಳದಲ್ಲಿ ಮುಂದುವರಿಯಲು ಮತ್ತು ಉತ್ತಮ ಲಾಭವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಮತ್ತೊಂದೆಡೆ ಉದ್ಯೋಗಪರರು ತಮ್ಮ ಕೆಲಸದ ಸ್ಥಳದಲ್ಲಿ ಪ್ರಗತಿ ಪಡೆಯುವ ಅವಕಾಶವನ್ನು ಸಹ ಪಡೆಯುತ್ತಾರೆ.
ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಉಳಿದಿರುತ್ತದೆ. ಇದಲ್ಲದೆ ಕುಟುಂಬದ ಸದಸ್ಯರೊಂದಿಗೆ ನೀವು ಉತ್ತಮ ಸಮಯವನ್ನು ಸಹ ಕಳೆಯುವಿರಿ. ಈ ಸಮಯವು ನಿಮ್ಮ ಪೋಷಕರ ಆರೋಗ್ಯದಲ್ಲಿ ಸ್ವಲ್ಪ ಸ್ಥಿರತೆಯನ್ನು ತರುತ್ತದೆ. ಅವರು ನಿಮ್ಮ ಉತ್ತಮ ಕೆಲಸದಿಂದ ಸಂತೋಷಪಟ್ಟು ನಿಮ್ಮನ್ನು ಹೊಗಳುತ್ತಾರೆ. ಈ ಅವಧಿಯಲ್ಲಿ ನಿಮ್ಮ ಪ್ರೀತಿಯ ಜೀವನವು ಸಹ ಆಹ್ಲಾದಕರವಾಗಿರುತ್ತದೆ.
ಇನ್ನೂ ಒಂಟಿಯಾಗಿರುವ ಜನರು ಒಬ್ಬ ವಿಶೇಷ ವ್ಯಕ್ತಿಯೊಂದಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಇದು ಉತ್ತಮ ಸಮಯ. ಅರೋಗ್ಯ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ, ಈ ಸಾಗಣೆಯ ಸಮಯದಲ್ಲಿ ನಿಮ್ಮ ಬಾಯಿ ಮತ್ತು ಹಲ್ಲುಗಳಲ್ಲಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ನಿಮಗೆ ಅತ್ಯಂತ ಮುಖ್ಯವಾದ ವಿಷಯವಾಗಿದೆ.
ಪರಿಹಾರ – ಬುಧದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ನಾಲ್ಕು ಮುಖಿ ರುದ್ರಾಕ್ಷವನ್ನು ಧರಿಸುವುದು ನಿಮಗೆ ಉತ್ತಮ.
1,491