Planetary Transit

ಮೀನ ರಾಶಿಯಲ್ಲಿ ಬುಧ ಸಂಕ್ರಮಣ – Mercury Transit in Pisces on 24th March in Kannada

ಸೌರ ಮಂಡಲದಲ್ಲಿ ಬುಧ ಗ್ರಹವನ್ನು ಚಿಕ್ಕ ಗ್ರಹವೆಂದು ಮತ್ತು ಅತ್ಯಂತ ಪ್ರಭಾವಶಾಲಿ ಗ್ರಹವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಇದು ಸೂರ್ಯನಿಗೆ ಅತ್ಯಂತ ನಿಕಟವಾಗಿದೆ. ಹನ್ನೆರಡು ರಾಶಿಚಕ್ರ ಚಿಹ್ನೆಗಳ ಮೂಲಕ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು, ಬುಧ ಗ್ರಹವು ಸುಮಾರು ಒಂದು ವರ್ಷದ ಸಮಯವನ್ನು ತೆಗೆದುಕೊಳ್ಳುತ್ತದೆ. ಇದರೊಂದಿಗೆ ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧನಿಗೆ ಎಲ್ಲಾ ಒಂಬತ್ತು ಗ್ರಹಗಳಲ್ಲಿ ರಾಕುಮಾರನ ಸ್ಥಾನಮಾನವನ್ನು ನೀಡಲಾಗಿದೆ. ಬುಧ ಗ್ರಹದ ಮೂಲಕ ಸಂವಹನ, ಬುದ್ಧಿವಂತಿಕೆ, ಪ್ರತಿಧ್ವನಿಸುವ ಶಕ್ತಿ ಮತ್ತು ತಾರ್ಕಿಕ ಚಿಂತನೆಯನ್ನು ಪರಿಗಣಿಸಲಾಗುತ್ತದೆ. ಬುಧ ಗ್ರಹವು 24 ಮಾರ್ಚ್, 2022  ರಂದು ಬೆಳಿಗ್ಗೆ 11 ಗಂಟೆ 05 ನಿಮಿಷಕ್ಕೆ ಮೀನ ರಾಶಿಗೆ ಪ್ರವೇಶಿಸುತ್ತದೆ ಮತ್ತು 8 ಏಪ್ರಿಲ್, 2022 ರ ಮಧ್ಯಾಹ್ನ 12 ಗಂಟೆ 06 ನಿಮಿಷದ ವರೆಗೆ ಇದು ಮೀನ ರಾಶಿಯಲ್ಲೇ ನೆಲೆಗೊಂಡಿರುತ್ತದೆ. 

 ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ಉತ್ತಮ ಸ್ಥಾನದಲ್ಲಿದ್ದರೆ,  ವ್ಯಕ್ತಿಯು ತುಂಬಾ ಬುದ್ಧಿವಂತರಾಗಿರುತ್ತಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಗ್ರಹವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಏಕಂದರೆ ಇದು ಸಂವಹನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಒಬ್ಬ ವ್ಯಕ್ತಿಯ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದರೆ, ವ್ಯಕ್ತಿಯು ಸ್ವಭಾವತಃ ಅಸ್ಥಿರತೆ ಮತ್ತು ಸಾಮರ್ಥ್ಯದಲ್ಲಿ ಕುಸಿತವನ್ನು ಹೊಂದಿರುತ್ತಾರೆ.

ಈ ರೀತಿಯಾಗಿ ಬುಧ ಗ್ರಹವು ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. 

ಮೇಷ / Aries

 ಬುಧ ಗ್ರಹವು ಮೇಷ ರಾಶಿಚಕ್ರದ ಮೂರನೇ ಮತ್ತು ಆರನೇ ಅಧಿಪತಿಯಾಗಿದ್ದು ಸಂಚಾರದ ಸಮಯದಲ್ಲಿ ಮೇಷ ರಾಶಿಚಕ್ರದ ಹನ್ನೆರಡನೇ ಮನೆಗೆ ನೆಲೆಗೊಳ್ಳುತ್ತದೆ. ಹನ್ನೆರಡನೇ ಮನೆಯ ಮೂಲಕ ವೆಚ್ಚ ಮತ್ತು ನಷ್ಟವನ್ನು ಪರಿಗಣಿಸಲಾಗುತ್ತದೆ. 

ಮೇಷ ರಾಶಿಚಕ್ರದ ವೃತ್ತಿಪರ ಜನರಿಗೆ ಇದು ಅನುಕೂಲಕರವಾಗಿರುತ್ತದೆ. ಉದ್ಯೋಗದಲ್ಲಿರುವ ಜನರು ಈ ಸಮಯದಲ್ಲಿ ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ತಮ್ಮ ವೃತ್ತಿ ಜೀವನದಲ್ಲಿ ಬೆಳವಣಿಗೆಗೆ ಕೂಡ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಕೆಲಸದ ಸ್ಥಳದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಯಾವುದೇ ರೀತಿಯ ತಪ್ಪುಗ್ರಹಿಕೆಗಳು ಸಹ ಉದ್ಭವಿಸಬಹುದು.  ಇದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ವ್ಯಾಪಾರಸ್ಥರ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ತುಂಬಾ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ಯಾವುದೇ ಪ್ರಯಾಣವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಪ್ರಯಾಣಗಳಿಂದ ನಿಮ್ಮ ವೆಚ್ಚಗಳು ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ. 

ವಿದ್ಯಾರ್ಥಿಗಳಿಗೂ ಈ ಸಂಚಾರವು ಅನುಕೂಲಕರವಾಗಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಅನಾನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಏಕೆಂದರೆ ಪರೀಕ್ಷೆ ನೀಡಲು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವೈಯಕ್ತಿಕವಾಗಿ, ಈ ಸಂಚಾರದ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರ ವೆಚ್ಚಗಳು ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಈ ಸಮಯದಲ್ಲಿ ನೀವು ಚರ್ಮ ಅಥವಾ ನಿದ್ರಾಹೀನತೆಯ ಸಮಸ್ಯೆಗಳನ್ನು ಹೊಂದಿರಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ. 

ಪರಿಹಾರ – ಪ್ರತಿದಿನ ಬೆಳಿಗ್ಗೆ 108 ಬಾರಿ ಗಾಯಿತ್ರಿ ಮಂತ್ರವನ್ನು ಪಠಿಸುವುದು ನಿಮಗೆ ಉತ್ತಮ. 

ವೃಷಭ / Taurus

ಬುಧ ಗ್ರಹವು ವೃಷಭ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ವೃಷಭ ರಾಶಿಚಕ್ರದ ಸ್ಥಳೀಯರ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. ಹನ್ನೊಂದನೇ ಮನೆಯ ಮೂಲಕ ಆದಾಯ ಮತ್ತು ಲಾಭದ ಬಗ್ಗೆ ಪರಿಗಣಿಸಲಾಗುತ್ತದೆ. 

ವೃತ್ತಿಪರವಾಗಿ, ವೃಷಭ ರಾಶಿಚಕ್ರದ ಸ್ಥಳೀಯರಿಗೆ ಬುಧ ಗ್ರಹವು ಅನೇಕ ಮೂಲಗಳಿಂದ ಅನುಕೂಲಕರವಾಗಿರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ತೊಡಗಿರುವ ವೃಷಭ ರಾಶಿಚಕ್ರದ ಸ್ಥಳೀಯರು ತಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ  ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಯಾವುದೇ ಕಾರಣದಿಂದಾಗಿ ಅವರೊಂದಿಗೆ ಯಾವುದೇ ತಪ್ಪುಗ್ರಹಿಕೆಗಳು ಉಂಟಾಗಬಹುದು ಮತ್ತು ಇದರಿಂದಾಗಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಸ್ಥರಿಗೆ ಈ ಸಂಚಾರವು ಸಾಕಷ್ಟು ಉತ್ತಮವಾಗಿರುತ್ತದೆ. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಆದಾಗ್ಯೂ ಯಾವುದೇ ಪ್ರಮುಖ ವ್ಯವಹಾರವನ್ನು ನಡೆಸುವಾಗ ಜಾಗರೂಕರಾಗಿರಲು ಸಲಹೆ ನೀಡಲಾಗುತ್ತದೆ. 

ಬುಧ ಸಂಚಾರದ ಸಮಯದಲ್ಲಿ ವೃಷಭ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಕೇಂದ್ರೀಕರಿಸುವಲ್ಲಿ  ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ಫಲಿತಾಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆಪ್ತರೊಂದಿಗೆ ಸಮಯವನ್ನು ಕಳೆಯಲು ಯೋಜಿಸಬಹುದು. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಲಯ ಹೆಚ್ಚಾಗುತ್ತದೆ.  ಪ್ರೀತಿಯ ಸಂಬಂಧದಲ್ಲಿರುವ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವು ಸರಾಸರಿಯಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಕೆಲವು ತಪ್ಪು ಗ್ರಹಿಕೆಗಳು ಉಂಟಾಗಬಹುದು. ಆದ್ದರಿಂದ ಅವರೊಂದಿಗೆ ತಾಳ್ಮೆಯೊಂದಿಗೆ ಮಾತನಾಡಿ ಮತ್ತು ಎಲ್ಲಾ ತಪ್ಪು ತಿಳುವಳಿಕೆಗಳನ್ನು ಪರಿಹರಿಸಲು ಪ್ರಯತ್ನಿಸಿ ಎಂದು ಸಲಹೆ ನೀಡಲಾಗುತ್ತದೆ. 

ಪರಿಹಾರ – ಬುಧವಾರದಂದು ದೇವಿ ದುರ್ಗೆಗೆ ಕೆಂಪು ಹೂವುಗಳನ್ನು ಅರ್ಪಿಸಿ. 

ಮಿಥುನ / Gemini

 ಬುಧ ಗ್ರಹವು ಮಿಥುನ ರಾಶಿಚಕ್ರದ ಲಗ್ನದ ಮನೆ ಅಂದರೆ ಮೊದಲನೇ ಮನೆ ಮತ್ತು ನಾಲ್ಕನೇ ಮನೆಯ ಅಧಿಪತಿಯಾಗಿದ್ದು ಸಂಚಾರದ ಸಮಯದಲ್ಲಿ ಇದು ಮಿಥುನ ರಾಶಿಚಕ್ರದ ಸ್ಥಳೀಯರ ಹತ್ತನೇ ಮನೆಗೆ ಗೋಚರಿಸುತ್ತದೆ. 

ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ವೃತ್ತಿಪರರು ಸರಾಸರಿ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ತಮ್ಮ ಉದ್ಯೋಗದ ಬಗ್ಗೆ ನೀವು ಅಭದ್ರತೆಯ ಭಾವನೆಯನ್ನು ಹೊಂದಿರಬಹುದು. ಇದಲ್ಲದೆ ಈ ಅವಧಿಯಲ್ಲಿ ನೀವು ಭಯವನ್ನು ಸಹ ಅನುಭವಿಸಬಹುದು. ನಿಮ್ಮ ಮನಸ್ಸಿನಲ್ಲಿ ನೀವು ನಕಾರಾತ್ಮಕ ಭಾವನೆಯನ್ನು ಹೊಂದಿರಬಹುದು. ಇದರರೊಂದಿಗೆ ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆಯನ್ನು ಸಹ ಅನುಭವಿಸಬಹುದು. ಹೆಚ್ಚಿನ ಸಮಯ ವಿಷಯಗಳ ಬಗ್ಗೆ ಗೊಂದಲಕ್ಕೆ ಒಳಗಾಗಬಹುದು. 

 ಶಿಕ್ಷಣದ ಬಗ್ಗೆ ಮಾತನಾಡಿದರೆ, ಬುಧ ಸಂಚಾರದ ಅವಧಿಯಲ್ಲಿ ಮಿಥುನ ರಾಶಿಚಕ್ರದ ವಿದ್ಯಾರ್ಥಿಗಳು  ಧನಾತ್ಮಕ ಫಲಿತಾಂಶಗಳನ್ನು ಪಡೆಯಲು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಏಕೆಂದರೆ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೀವು ಕೆಲವು ಸಮಸ್ಯೆಗಳನ್ನು ಅನುಭವಿಸಬಹುದು. 

 ವೈಯಕ್ತಿಕ ಜ್ಜೀವನದ ಬಗ್ಗೆ ಮಾತನಾಡಿದರೆ, ಈ  ಅವಧಿಯಲ್ಲಿ ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಮಬಂಧವು ತೊಂದರೆಗೆ ಒಳಗಾಗಬಹುದು. ಇದರಿಂದಾಗಿ ನಿಮ್ಮ ಸಂಬಂಧವನ್ನು ಸುಧಾರಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ  ಯಾವುದೇ ವಾಹನವನ್ನು ಖರೀದಿಸಲು ಅಥವಾ ಸಂಪತ್ತನ್ನು ಖರೀದಿಸಲು ನಿಮ್ಮ ಹಣವನ್ನು ಖರ್ಚು ಮಾಡಬೇಡಿ. ಏಕೆಂದರೆ ಈ ಸಮಯವೂ ಅನುಕೂಲಕರವಾಗಿರುವುದಿಲ್ಲ. ಈ ಸಮಯದಲ್ಲಿ ನಿಮ್ಮ ತಾಯಿಯು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ನೀವು ಮಾನಸಿಕ ಒತ್ತಡ, ಹೆದರಿಕೆ ಮತ್ತು ನಡುಕದಂತಹ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದು ಸೂಚಿಸಲಾಗುತ್ತದೆ. 

ಪರಿಹಾರ – ಪ್ರತಿದಿನ ನಿಯಮಿತವಾಗಿ ಬುಧ ಬೀಜ ಮಂತ್ರವನ್ನು ಜಪಿಸುವುದು ಮಿಥುನ ರಾಶಿಚಕ್ರದ ಶ್ಟತಾಳೀಯರಿಗೆ ಉತ್ತಮ.  

ಕರ್ಕ / Cancer

 ಬುಧ ಗ್ರಹವು ಕರ್ಕ ರಾಶಿಚಕ್ರದ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಕರ್ಕ ರಾಶಿಚಕ್ರದ ಸ್ಥಳೀಯರ ಒಂಬತ್ತನೇ ಮನೆಗೆ ಸಾಗುತ್ತದೆ. ಒಂಬತ್ತನೇ ಮನೆಯ ಮೂಲಕ ವ್ಯಕ್ತಿಯ ಅದೃಷ್ಟ, ಆಧ್ಯಾತ್ಮಿಕತೆ ಮತ್ತು ಧರ್ಮದ ಬಗ್ಗೆ ಪರಿಗಣಿಸಲಾಗುತ್ತದೆ. 

ವೃತ್ತಿಪರವಾಗಿ,  ನಿಮ್ಮ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ವರ್ಗಾವಣೆಯಾಗಬಹುದು. ಈ ಸಮಯದಲ್ಲಿ ಯಾವುದೇ ಕಾರಣದಿಂದಾಗಿ ನಿಮ್ಮ ಬಾಸ್ ನೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಆದ್ದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ತಾಳ್ಮೆಯಿಂದ ವರ್ತಿಸಿ ಎಂದು ಸೂಚಿಸಲಾಗುತ್ತದೆ. ಮತ್ತೊಂದೆಡೆ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಹಾನಿಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆ, ವಿಶೇಷವಾಗಿ ದೀರ್ಘಾವಧಿ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇಲ್ಲದಿದ್ದರೆ ನಿಮಗೆ ನಷ್ಟವಾಗುವ ಸಂಪೂರ್ಣ ಸಾಧ್ಯತೆ ಇದೆ.  ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮತ್ತೊಂದೆಡೆ, ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿರುವವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. 

 ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಚಿಕ್ಕ ಸಹೋದರ ಸಹೋದರಿಯರೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳನ್ನು ನೀವು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ನಿಮ್ಮ ವೆಚ್ಚಗಳನ್ನು ಹೆಚ್ಚಿಸುವ ಸಂಪೂರ್ಣ ಸಾಧ್ಯತೆ ಇದೆ. ಇದಲ್ಲದೆ ಬುಧ ಸಂಕ್ರಮಣದ ಸಮಯದಲ್ಲಿ ಯಾವುದೇ ಗ್ಯಾಜೆಟ್ ಅನ್ನು ಖರೀದಿಸುವುದನ್ನು ತಪ್ಪಿಸಿ. ಏಕೆಂದರೆ ನೀವು ಸರಿಯಾದ ಉತ್ಪನ್ನವನ್ನು ಪಡೆಯದಿರುವ ಸಾಧ್ಯತೆ ಇದೆ ಅಥವಾ ಅದರ ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಇದಲ್ಲದೆ ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ಸ್ವಲ್ಪ ಜಾಗರೂಕರಾಗಿರಲು ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ನಿಮ್ಮ ಮೂಲಕ ಹೇಳಲಾಗುವ ಪದಗಳು ಅವರನ್ನು ಭಾವನಾತ್ಮಕವಾಗಿ ನೋಯಿಸಬಹುದು ಮತ್ತು ನಿಮ್ಮ ಸಂಬಂಧವನ್ನು ಹದಗೆಡಿಸಬಹುದು. 

ಪರಿಹಾರ – ಬುಧವಾರದಂದು  ಗಣೇಶ ದೇವರಿಗೆ 2 ಬೂಂದಿ ಲಡ್ಡುಗಳನ್ನು ಅರ್ಪಿಸಿ. 

ಸಿಂಹ / Leo

  ಬುಧ ಗ್ರಹವು ಸಿಂಹ ರಾಶಿಚಕ್ರದ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದೆ. ಈ ಸಂಚಾರದ ಸಮಯದಲ್ಲಿ ಇದು ಸಿಂಹ ರಾಶಿಚಕ್ರದ ಎಂಟನೇ ಮನೆಗೆ ಸಾಗುತ್ತದೆ. ಈ ಮನೆಯ ಮೂಲಕ ಸಂಪತ್ತು, ಏರಿಳಿತ ಮತ್ತು ಹಾನಿಯನ್ನು ಪರಿಗಣಿಸಲಾಗುತ್ತದೆ.  

ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ,  ಈ ಸಮಯವು ವ್ಯಾಪಾರಸ್ಥರಿಗೆ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಯಾವುದೇ ಯೋಜನೆಯಲ್ಲಿ ಯಾವುದೇ ರೀತಿಯ ದೊಡ್ಡ ಹೂಡಿಕೆ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದರಿಂದಾಗಿ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಧನಾತ್ಮಕ ಫಲಿತಾಂಶಗಳನ್ನು ಪಡೆಯಾಗುವುದಿಲ್ಲ. ಕೆಲಸದಲ್ಲಿ ತೊಡಗಿರುವ ಜನರ ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ನೀವು ಯೋಜಿಸುತ್ತಿದ್ದರೆ, ಈ ಸಂಚಾರದ ಅವಧಿಯಲ್ಲಿ ಅದಕ್ಕಾಗಿ ನೀವು ಪ್ರಯತ್ನಿಸಬಹುದು. ಇದು ನಿಮಗೆ ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. 

 ಇದಲ್ಲದೆ ಬುಧ ಸಂಚಾರದ ಸಮಯದಲ್ಲಿ ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. ಏಕೆಂದರೆ ಆರ್ಥಿಕವಾಗಿ ಬುಧ ಸಂಚಾರವು ನಿಮ್ಮ ಜೀವನದಲ್ಲಿ ಕೆಲವು ಅನಿಶ್ಚಿತತೆಗಳನ್ನು ತರಬಹುವುದು. 

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ವಿವಾಹಿತ ಜನರು ತಮ್ಮ ಅತ್ತೆಮನೆಯ ಸದಸ್ಯರಿಂದ ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಈ ಅವಧಿಯಲ್ಲಿ ಅವರೊಂದಿಗಿನ ನಿಮ್ಮ ಸಂಬಂಧಗಳಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಮತ್ತು ತಪ್ಪುಗ್ರಹಿಕೆಗಳು ಉದ್ಭವಿಸುವುದರಿಂದ ಸಂಬಂಧಗಳಲ್ಲಿ ನೀವು ಒತ್ತಡವನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ಈ ಸಮಯದಲ್ಲಿ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಯಾವುದೇ ಕಾನೂನು ವಿಷಯವನ್ನು ಎದುರಿಸುತ್ತಿದ್ದರೆ, ಅದರಲ್ಲೂ ಹಣವನ್ನು ಖರ್ಚು ಮಾಡಬೇಕಾಗಬಹುದು. ಇದಲ್ಲದೆ ಈ ಸಂಚಾರದ ಸಮಯದಲ್ಲಿ ನಿಮ್ಮ ಪೋಷಕರು ಅಥವಾ ಸಂಬಂಧಿಕರ ಮೂಲಕ ನಗದು ಅಥವಾ ವಸ್ತುವಿನ ರೂಪದಲ್ಲಿ ನೀವು ಹಠಾತ್ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯೂ ಇದೆ. 

ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಅಲರ್ಜಿ, ಬೆನ್ನು ನೋವು ಅಥವಾ ಯಾವುದೇ ರೀತಿಯ ಸೋಂಕಿನಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ. ಇದಲ್ಲದೆ ಈ ಸಮಯದಲ್ಲಿ ನಿಮಗೆ ಗಾಯವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ರಸ್ತೆಯಲ್ಲಿ ನಡೆಯುವಾಗ ಅಥವಾ ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರಿಕೆ ವಹಿಸಲು ನಿಮಗೆ ವಿಶೇಷ ಸಲಹೆ ನೀಡಲಾಗುತ್ತದೆ. 

ಪರಿಹಾರ – ಪ್ರತಿದಿನ ನಿಯಮಿತವಾಗಿ ಹಸುವಿಗೆ ಹಸಿರು ಮೇವು ತಿನ್ನಿಸಿ.

ಕನ್ಯಾ / Virgo

ಬುಧ ಗ್ರಹವು ಕನ್ಯಾ ರಾಶಿಚಕ್ರದ ಲಗ್ನದ ಮನೆ ಅಂದರೆ ಮೊದಲನೇ ಮನೆ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದ್ದು, ಸಂಚಾರದ ಈ ಸಮಯದಲ್ಲಿ ಇದು ಕನ್ಯಾ ರಾಶಿಚಕ್ರದ ಏಳನೇ ಮನೆಗೆ ಸಾಗುತ್ತದೆ. ಏಳನೇ ಮನೆಯ ಮೂಲಕ ಒಬ್ಬ ವ್ಯಕ್ತಿಯ ವ್ಯಾಪಾರ, ಪ್ರಯಾಣ ಮತ್ತು ಪಾಲುದಾರಿಕೆಯ ಬಗ್ಗೆ ಪರಿಗಣಿಸಲಾಗುತ್ತದೆ. 

ವೃತ್ತಿಪರವಾಗಿ, ಉದ್ಯೋಗದಲ್ಲಿ ತೊಡಗಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು ನೀವು ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರುಣೆ ಸಮಯದಲ್ಲಿ ತಮ್ಮ ಧ್ವನಿಯನ್ನು ನಿಯಂತ್ರಿಸಬೇಕು ಮತ್ತು ತಾಳ್ಮೆಯಿಂದಿರಬೇಕು. ಸ್ವಂತ ವ್ಯಾಪಾರದಲ್ಲಿರುವ ಕನ್ಯಾ ರಾಶಿಚಕ್ರದ ಸ್ಥಳೀಯರು ಈ ಅವಧಿಯಲ್ಲಿ ನಷ್ಟವನ್ನು ಹೊಂದಬಹುದು. ಇದಲ್ಲದೆ,  ಯಾವುದೇ ಹೊಸ ವ್ಯಾಪಾರವನ್ನು ಆರಂಭಿಸಲು ಯೋಜಿಸುತ್ತಿರುವವರು ಇನ್ನೂ ಸ್ವಲ್ಪ ಸಮಯ ಕಾಯಬೇಕೆಂದು ಸೂಚಿಸಲಾಗುತ್ತದೆ. 

ವೈಯಕ್ತಿಕವಾಗಿ,  ಒಂಟಿಯಾಗಿರುವ ಜನರು ಇನ್ನೂ ಸ್ವಲ್ಪ ಸಮಯ ಕಾಯಬೇಕು. ಮತ್ತೊಂದೆಡೆ ತಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಥವಾ ತಪ್ಪುಗ್ರಹಿಕೆಗಳನ್ನು ಹೊಂದಿರುವ ವಿವಾಹಿತ ಜನರು ಈ ಅವಧಿಯಲ್ಲಿ ತಮ್ಮ ಸಮಸ್ಯೆಗಳನ್ನು ಸುಧಾರಿಸಬಹುದು. ಆದರೆ ಇದಕ್ಕಾಗಿ ಮೊದಲು ನೀವು ಹೆಜ್ಜೆ ಇಡಬೇಕು. ಇದರೊಂದಿಗೆ ಈ ಸಮಯದಲ್ಲಿ ಜೀವನದ ಸಂಗಾತಿ ಮತ್ತು ಮನೆಯ ಇತರ ಸದಸ್ಯರೊಂದಿಗೆ ಯಾವುದೇ ಪ್ರಯಾಣವನ್ನು ಸಹ  ನೀವು ಯೋಜಿಸಬಹುದು. 

ಆರೋಗ್ಯದ ದ್ರ್ರುಷ್ಟಿಕೋನದಿಂದ ಈ ಸಮಯವು ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಅನುಕೂಲಕರವಾಗಿರುವುದಿಲ್ಲ. ಈ ಅವಧಿಯಲ್ಲಿ ನಿದ್ರಾಹೀನತೆ, ಹೆದರಿಕೆ ಮತ್ತು ನರಮಂಡಲ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ನಿಮ್ಮ ದಿನಚರಿಯಲ್ಲಿ ಯೋಗ, ವ್ಯಾಯಾಮ ಮತ್ತು ಧನವನ್ನು ಸೇರಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. 

ಪರಿಹಾರ – ಉತ್ತಮ ಗುಣಮಟ್ಟದ ಪಚ್ಛೆ ರತ್ನವನ್ನು ಚಿನ್ನ ಅಥವಾ ಬೆಳ್ಳಿಯಲ್ಲಿ ತಯಾರಿಸಿ ನಿಮ್ಮ ದುಡಿಯುವ ಕೈಯ ಚಿಕ್ಕ ಬೆರಳಿಗೆ ಧರಿಸುವುದು ಉತ್ತಮ. 

ತುಲಾ / Libra

ಬುಧ ಗ್ರಹವು ತುಲಾ ರಾಶಿಚಕ್ರದ ಒಂಬತ್ತನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದ್ದು, ತನ್ನ ಸಂಚಾರದ ಈ ಸಮಯದಲ್ಲಿ ಇದು ತುಲಾ ರಾಶಿಚಕ್ರದ ಆರನೇ ಮನೆಗೆ ಸಾಗುತ್ತದೆ. ಆರನೇ ಮನೆಯ ಮೂಲಕ ವಿವಾದ, ಶತ್ರು ಮತ್ತು ರೋಗಗಳ ಬಗ್ಗೆ ಪರಿಗಣಿಸಲಾಗುತ್ತದೆ. 

ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗಪರರು ತಮ್ಮ ಗುರಿಗಳನ್ನು ಸಾಧಿಸಲು ಮತ್ತು ಕೆಲಸದ ಸ್ಥಳದಲ್ಲಿ ಯಶಸ್ಸು ಪಡೆಯಲು ಈ ಅವಧಿಯಲ್ಲಿ ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಇದರೊಂದಿಗೆ ಈ ಸಮಯದಲ್ಲಿ ಕೆಲಸದ ಬಗ್ಗೆ ನಿಮ್ಮಲ್ಲಿ ಮನೋಬಲದ ಕೊರತೆಯನ್ನು ಸಹ ಕಾಣಬಹುದು. ಕೆಲಸದಲ್ಲಿ ತೊಡಗಿರುವ ತುಲಾ ರಾಶಿಚಕ್ರದ ಜನರು ತಮ್ಮ ಕೆಲಸದ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ನಿಮ್ಮ ವರ್ಗಾವಣೆಯಾಗುವ ಸಾಧ್ಯತೆಯೂ ಇದೆ. ಮತ್ತೊಂದೆಡೆ, ವ್ಯಾಪಾರಸ್ಥರು ಈ ಸಂಚಾರದ ಸಮಯದಲ್ಲಿ ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಇದರ ಹೊರತಾಗಿ, ಉದ್ಯೋಗವನ್ನು ಹುಡುಕುತ್ತಿರುವ ತುಲಾ ರಾಶಿಚಕ್ರದ ಸ್ಥಳೀಯರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಏಕೆಂದರೆ ಈ ಸಮಯವು ಉತ್ತಮವಾಗಿರುವುದಿಲ್ಲ. ಇದರೊಂದಿಗೆ ಹಣಕಾಸಿನ ನಷ್ಟದ ಸಾಧ್ಯತೆಯೂ ಇದೆ. 

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ,  ಈ ಅವಧಿಯಲ್ಲಿ ನಿಮ್ಮ ವಿರೋಧಿಗಳು ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಬಹುದು ಮತ್ತು ನಿಮ್ಮ ಲಾಭವನ್ನು ಪಡೆದುಕೊಳ್ಳಲು ಪ್ರಯತ್ನಿಸಬಹುದು. ಬುಧ ಸಂಚಾರದ ಸಮಯದಲ್ಲಿ ನೀವು ಯಾವುದೇ ಆಸ್ತಿಯನ್ನು ಖರೀದಿಸಲು ಅಥವಾ ಮನೆಯನ್ನು ನವೀಕರಿಸಲು ಹಣವನ್ನು ಖರ್ಚು ಮಾಡಬಹುದು. ಈ ಸಮಯದಲ್ಲಿ ನಿಮ್ಮ ಸ್ವಭಾವದಲ್ಲಿ ನೀವು ಸ್ವಲ್ಪ ಶುಷ್ಕತೆಯನ್ನು ಹೊಂದಿರುವಿರಿ. ಇದಲ್ಲದೆ ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಇದರೊಂದಿಗೆ ನಿಮ್ಮ ತಂದೆಗೆ ಕೆಲವು ಅರೋಗ್ಯ  ಸಮಸ್ಯೆಗಳಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ಆಹಾರ ಪಾನೀಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಏಕೆಂದರೆ ಈ ಸಮಯದಲ್ಲಿ ನೀವು ಯಾವುದೇ ರೀತಿಯ ಸೋಂಕಿಗೆ ಒಳಗಾಗಬಹುದು. 

ಪರಿಹಾರ – ಅಗತ್ಯವಿರುವ ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳ ದಾನ  ಮಾಡಿ. 

ವೃಶ್ಚಿಕ / Scorpio

ಬುಧ  ಗ್ರಹವು ವೃಶ್ಚಿಕ ರಾಶಿಚಕ್ರದ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದ್ದು, ತನ್ನ ಸಂಚಾರದ ಸಮಯದಲ್ಲಿ ಇದು ವೃಶ್ಚಿಕ ರಾಶಿಯ ಐದನೇ ಮನೆಗೆ ಸಾಗುತ್ತದೆ. ಐದನೇ ಮನೆಯ ಮೂಲಕ ಶಿಕ್ಷಣ, ಮಕ್ಕಳು ಮತ್ತು ಮನರಂಜನೆಯನ್ನು ಪರಿಗಣಿಸಲಾಗುತ್ತದೆ. 

ವೃತ್ತಿಪರವಾಗಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಈ ಸಂಚಾರದ ಸಮಯದಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ನಿಮಗೆ ಹಾನಿಯಾಗುವ ಸಂಪೂರ್ಣ ಸಾಧ್ಯತೆ ಇದೆ. ಮತ್ತೊಂದೆಡೆ ತಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಜಿಸುತ್ತಿರುವ ಉದ್ಯೋಗಪರರು ಈ ಸಮಯದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಸಮಯ ಅನುಕೂಲಕರವಾಗಿರುತ್ತದೆ.

ಏಕೆಂದರೆ ಪ್ರತಿಯೊಂದು ಕೆಲಸದಲ್ಲಿ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಬುಧ ಸಂಚಾರದ ಸಮಯದಲ್ಲಿ ವೃಶ್ಚಿಕ ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಅಧ್ಯಯನದತ್ತ ಹೆಚ್ಚು ಕೇಂದ್ರೀಕರಿಸುತ್ತಾರೆ. 

ವೈಯಕ್ತಿಕ ಜೀವನದ ಬಗ್ಗೆ  ಮಾತನಾಡಿದರೆ,  ಮಕ್ಕಳೊಂದಿಗೆ ಮಾತನಾಡುವಾಗ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಆದ್ದರಿಂದ ಅವರೊಂದಿಗೆ ಸಾಧ್ಯವಾದಷ್ಟು ಸಮಯವನ್ನು ಕಳೆಯಲು ನಿಮಗೆ ಸಲಹೆ ನೀಡಲಾಗುತ್ತದೆ. 

ತಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ನಿಮ್ಮ ಪದಗಳು  ಮತ್ತು ಧ್ವನಿಯ ಬಗ್ಗೆ ಜಾಗರೂಕರಾಗಿರಬೇಕೆಂದು ಪ್ರೀತಿಯ ಸಬಂಧದಲ್ಲಿರುವ ವೃಶ್ಚಿಕ ರಾಶಿಚಕ್ರದ ಸ್ಥಳೀಯರಿಗೆ ಸೂಚಿಸಲಾಗುತ್ತದೆ. ಏಕೆಂದರೆ ನಿಮ್ಮ ಕಠೋರ ಪದಗಳು ಭಾವನಾತ್ಮಕವಾಗಿ ನಿಮ್ಮ್ಮ ಪ್ರೀತಿಪಾತ್ರರನ್ನು ನೋಯಿಸಬಹುದು. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಸ್ನೇಹಿತರೊಂದಿಗೆ ನೀವು ಕೆಲವು ಸಣ್ಣ ಪ್ರವಾಸಗಳನ್ನು ಸಹ ಯೋಜಿಸಬಹುದು. 

ಪರಿಹಾರ – ಬುಧವಾರದಂದು ದೇವಸ್ಥಾನದಲ್ಲಿ ಹಸಿರು ಬೆಳೆಯ ದಾನ ಮಾಡುವುದು ನಿಮಗೆ ಉತ್ತಮ. 

ಧನು / Sagittarius

ಬುಧ ಗ್ರಹವು ಧನು ರಾಶಿಚಕ್ರದ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ಧನು ರಾಶಿಚಕ್ರದ ನಾಲ್ಕನೇ ಮನೆಗೆ ಪ್ರವೇಶಿಸುತ್ತದೆ. ನಾಲ್ಕನೇ ಮನೆಯ ಮೂಲಕ ಕುಟುಂಬ, ವಿಶ್ರಾಂತಿ ಮತ್ತು ಸಂತೋಷವನ್ನು ಪರಿಗಣಿಸಲಾಗುತ್ತದೆ. 

ಧನು ರಾಶಿಚಕ್ರದ ಸ್ಥಳೀಯರ ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗಪರರು ತಮ್ಮ ಉದ್ಯೋಗದ ಬಗ್ಗೆ ಈ ಸಮಯದಲ್ಲಿ ಅಭದ್ರತೆಯನ್ನು ಅನುಭವಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದಾಗಿ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುತ್ತಾರೆ. ಇದರಿಂದಾಗಿ ಕೆಲಸದ ಸ್ಥಳದಲ್ಲಿ ನೀವು ಉನ್ನತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ. 

ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಸ್ಥರು ಈ ಸಮಯದಲ್ಲಿ ತಮ್ಮ ವ್ಯಾಪಾರದಲ್ಲಿ ಬೆಳವಣಿಗೆಯನ್ನು  ಕಾಣಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಇದಲ್ಲದೆ ರಿಯಲ್ ಎಸ್ಟೇಟ್ ಮತ್ತು ಪ್ರಾಪರ್ಟಿ ಡೀಲಿಂಗ್ ಕೆಲಸಕ್ಕೆ ಸಂಬಂಧಿಸಿರುವ ಜನರಿಗೂ ಸಮಯ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನೀವು ಉತ್ತಮ ಮತ್ತು ಪ್ರಯೋಜನಕಾರಿ ವ್ಯವಹಾರವನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು. ಶಿಕ್ಷಣದ ಬಗ್ಗೆ ಮಾತನಾಡಿದರೆ, ಧನು ರಾಶಿಚಕ್ರದ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ಗಣಿತಕ್ಕೆ ಸಂಬಂಧಸಿದ ವಿಷಯವನ್ನು ಅರ್ಥಮಾಡಿಕೊಳ್ಳಲು ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ಸಂಚಾರದ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಶಾಂತಿ ಮತ್ತು ಸಂತುಷ್ಟಿಯನ್ನು ಅನುಭವಿಸಬಹುದು.

ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ತಾಯಿಯು ಯಾವುದೇ ಸಮಸ್ಯೆ ಅಥವಾ ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದ್ದರಿಂದ ನಿಮ್ಮ ತಾಯಿಯ  ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸೂಚಿಸಲಾಗುತ್ತದೆ. 

ಪರಿಹಾರ – ಬುಧವಾರದಂದು ವಿಷ್ಣು ಸಹಸ್ತ್ರನಾಮವನ್ನು ಪಠಿಸುವುದು ಅಥವಾ ಕೇಳುವುದು ನಿಮಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. 

ಮಕರ / Capricorn

ಬುಧ ಗ್ರಹವು ಮಕರ ರಾಶಿಚಕ್ರದ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ಮಕರ ರಾಶಿಚಕ್ರದ ಮೂರನೇ ಮನೆಗೆ ಪ್ರವೇಶಿಸುತ್ತದೆ. ಮೂರನೇ ಮನೆಯ ಮೂಲಕ ಸಂವಹನ, ಸಹೋದರ-ಸಹೋದರಿಯರು ಮತ್ತು ಆಸೆಯ ಬಗ್ಗೆ ಪರಿಗಣಿಸಲಾಗುತ್ತದೆ. 

ವೃತ್ತಿ  ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗಪರರಿಗೆ ಬುಧ ಸಂಚಾರವು ಅನುಕೂಲಕರವಾಗಿರಲಿದೆ. ಕೆಲಸದ ಸ್ಥಳದಲ್ಲಿ  ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂಬಂಧವು ಸೌಹಾರ್ದಯುತವಾಗಿರುತ್ತದೆ. ಇದಲ್ಲದೆ ಕೆಲಸದ ಸ್ಥಳದಲ್ಲಿ ನೀವು ಅವರ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತೀರಿ. ನಿಮ್ಮ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ನಿಮ್ಮ ಬಾಸ್ ಮತ್ತು ಹಿರಿಯ ಮ್ಯಾನೇಜ್‌ಮೆಂಟ್‌ನಿಂದ ನಿಮ್ಮನ್ನು ಪ್ರಶಂಸಿಸಬಹುದು. ಸ್ವಂತ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಕೆಲವು ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಬಹುದು. ಇದು ನಿಮ್ಮ ವ್ಯಾಪಾರದ ವಲಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತದೆ. ಆರ್ಥಿಕವಾಗಿ ಮಕರ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವು ಸರಾಸರಿ ಫಲಪ್ರದವಾಗುವ ಸಾಧ್ಯತೆ ಇದೆ. ಉದ್ಯೋಗಪರರ ವರ್ಗಾವಣೆಯಾಗುವ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ಸಹೋದರ-ಸಹೋದರಿಯರೊಂದಿಗಿನ ನಿಮ್ಮ ಸಂಬಂಧವು ಒತ್ತಡದಿಂದ ತುಂಬಿರುತ್ತದೆ. ಏಕೆಂದರೆ ಈ ಸಮಯದಲ್ಲಿ ಪರಸ್ಪರರ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನೀವು ತೊಂದರಕ್ಕೊಳಗಾಗಬಹುದು. ನಿಮ್ಮ ಸ್ನೇಹಿತರೊಂದಿಗೆ ಯಾವುದೇ ಸಣ್ಣ ಪ್ರಯಾಣವನ್ನು ನೀವು ಯೋಜಿಸಬಹುದು. 

ಪರಿಹಾರ –  ಸಮುದ್ರಪಾಲ ಮೂಲವನ್ನು ಹಸಿರು ಬಟ್ಟೆಯಲ್ಲಿ ಸುತ್ತಿ ಅದನ್ನು ನಿಮ್ಮ ಬಲಗೈಯಲ್ಲಿ ಕಟ್ಟಿಕೊಳ್ಳುವುದು ಉತ್ತಮ. 

ಕುಂಭ / Aquarius

ಬುಧ ಗ್ರಹವು ಕುಂಭ ರಾಶಿಚಕ್ರದ ಐದನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ಕುಂಭ ರಾಶಿಚಕ್ರದ ಎರಡನೇ ಮನೆಗೆ ಸಾಗುತ್ತದೆ. ಎರಡನೇ ಮನೆಯ ಮೂಲಕ, ಹಣಕಾಸು, ಕುಟುಂಬ ಮತ್ತು ಧ್ವನಿಯನ್ನು ಪರಿಗಣಿಸಲಾಗುತ್ತದೆ. 

ವೃತ್ತಿಪರವಾಗಿ, ಈ ಸಂಚಾರದ ಸಮಯದಲ್ಲಿ ಕುಂಭ ರಾಶಿಚಕ್ರದ ಜನರು ಹಠಾತ್ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನೀವು ಶೇರ್ ಮಾರ್ರುಕಟ್ಟೆಯಲ್ಲಿ ಹಣಕಾಸಿನ ಹೂಡಿಕೆನ್ ಮಾಡಲು ಯೋಜಿಸುತ್ತಿದ್ದರೆ, ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಮತ್ತೊಂದೆಡೆ, ಕಲೆ ಅಥವಾ ಸಂಗೀತ ಇತ್ಯಾದಿಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸಮಯ ಅನುಕೂಲಕರವಾಗಿರಬಹುದು. ಈ ಸಮಯದಲ್ಲಿ ಜನರ ನಡುವೆ ನೀವು ಜನಪ್ರಿಯತೆಯನ್ನು ಪಡೆಯಬಹುದು. ಇದರೊಂದಿಗೆ ಉತ್ತಮ ಅವಕಾಶಗಳನ್ನು ನೀವು ಪಡೆಯುತ್ತೀರಿ. 

ಕೌಟುಂಬಿಕ ವ್ಯಾಪಾರಕ್ಕೆ ಸಂಬಂಧಿಸಿದ ಕುಂಭ ರಾಶಿಚಕ್ರದ ಸ್ಥಳೀಯರು ಈ ಸಮಯದಲ್ಲಿ ಕೆಲವು ಅಡೆತಡೆಗಳನ್ನು ಮತ್ತು ಸವಾಲುಗಳನ್ನು ಎದುರಿಸಬೇಕಾಗಬಹುದು. ಇದರೊಂದಿಗೆ ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ ಎಂದು ಸಹ ನಿರೀಕ್ಷಿಸಲಾಗಿದೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಶಿಕ್ಷಣದ ಬಗ್ಗೆ ಮಾತನಾಡಿದರೆ, ವಿದ್ಯಾರ್ಥಿಗಳಿಗೆ ಈ ಸಂಚಾರವು ಅನುಕೂಲಕರವಾಗಿರಲಿದೆ. ಈ ಸಮಯದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ.

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ತಾಯಿ ಅಥವಾ ನಿಮ್ಮ ಅತ್ತೆಮನೆ ಕಡೆಯ ಜನರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದ್ದರಿಂದ ನಿಮ್ಮ ಈ ಪರಿಸ್ಥಿತಿಯನ್ನು ಸುಧಾರಿಸಲು ಅವರೊಂದಿಗೆ ಉತ್ತಮ ಗುಣಮಟ್ಟ್ಟದ ಸಮಯವನ್ನು ಕಳೆಯಲು ನಿಮಗೆ ಸೂಚಿಸಲಾಗುತ್ತದೆ. ಇಲ್ಲದಿದ್ದರೆ ಪರಿಸ್ಥಿತಿಗಳು ಇನ್ನಷ್ಟು ಹದಗೆಡಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ, ಹಲ್ಲು ನೋವು, ತಲೆ ನೋವು, ನಿದ್ರಾಹೀನತೆಯ ಸಮಸ್ಯೆಗಳು ನಿಮ್ಮನ್ನು ತೊಂದರೆಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

ಪರಿಹಾರ – ಪ್ರತಿದಿನ ನಿಯಮಿತವಾಗಿ ತುಳಸಿಯನ್ನು ಪೂಜಿಸುವುದು ನಿಮಗೆ ಉತ್ತಮ. 

ಮೀನ / Pisces

ಬುಧ ಗ್ರಹವು ಮೀನ ರಾಶಿಚಕ್ರದ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿ ಮತ್ತು ಸಂಚಾರದ ಸಮಯದಲ್ಲಿ ಇದು ಮೀನ ರಾಶಿಚಕ್ರದ ಮೊದಲನೇ ಮನೆ ಅಂದರೆ ಲಗ್ನದ ಮನೆಗೆ ಸಾಗುತ್ತದೆ. 

ವೃತ್ತಿಪರವಾಗಿ ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ತಮ್ಮ ವ್ಯಾಪಾರದಲ್ಲಿ ಸಾಕಷ್ಟು ಲಾಭವನ್ನು ಗಳಿಸಬಹುದು. ಇದಲ್ಲದೆ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಆರ್ಥಿಕ ಸಹಾಯವನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. 

ಮತ್ತೊಂದೆಡೆ, ಮಾರ್ಕೆಟಿಂಗ್, ಪತ್ರಿಕೋದ್ಯಮ, ಅಕೌಂಟೆನ್ಸಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ಈ ಸಮಯಲ್ಲಿ ಗಳಿಕೆಯ ಅನೇಕ ಅವಕಾಶಗಳನ್ನು ನೀವು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ಮಾಡಲು ನೀವು ಕೆಲವು ರೀತಿಯ ಪ್ರೋತ್ಸಾಹವನ್ನು ಸಹ ಪಡೆಯುವಿರಿ. 

ಮೀನ ರಾಶಿಚಕ್ರದ ಸ್ಥಳೀಯರ ವೈಯಕ್ತಿಕ ಜೀವನವು ಬುಧ ಸಂಚಾರದ ಸಮಯದಲ್ಲಿ ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಪರಿಣಾಮವಾಗಿ ನಿಮ್ಮ ಪದಗಳಿಂದ ನೀವು ನಿಮ್ಮ ಪ್ರೀತಿಪಾತ್ರರನ್ನು ಭಾವನಾತ್ಮಕವಾಗಿ ನೋಯಿಸಬಹುದು. ಇದಲ್ಲದೆ ಈ ಸಮಯದಲ್ಲಿ ನೀವು ಅತಿಯಾದ ಆತ್ಮವಿಶ್ವಾಸವನ್ನು ಹೊಂದಿರಬಹುದು.  ವಿವಾಹಿತ ಜನರು ಜೀವನ ಸಂಗಾತಿಯೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ವೈವಾಹಿಕ ಜೀವನದಲ್ಲಿ ಗೊಂದಲಕ್ಕೊಳಗಾಗಬಹುದು. ಪರಿಣಾಮವಾಗಿ ನಿಮ್ಮ ಸಂಬಂಧದಲ್ಲಿ ಅಂತರವೂ ಹೆಚ್ಚಾಗಬಹುದು.  ಇದಲ್ಲದೆ ಈ ಸಮಯದಲ್ಲಿ ನಿಮ್ಮ ವೃತ್ತಿಪರ ಕೆಲಸದ ಕಾರಣದಿಂದಾಗಿ ಕೆಲವು ಪ್ರಯಾಣಗಳಲ್ಲಿ ನೀವು ಹೆಚ್ಚು ಕಾರ್ಯನಿರತರಾಗಿರಬಹುದು. ಈ ಕಾರಣದಿಂದಾಗಿ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗದಿರಬಹುದು. 

ಪರಿಹಾರ – ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ವಿಷ್ಣು ದೇವರನ್ನು ಪೂಜಿಸವುದು ನಿಮಗೆ ಉತ್ತಮ. 

ಈ ಲೇಖನವು ನಿಮಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಧನ್ಯವಾದ!

 2,071 

Share