ಸೂರ್ಯ ಸಂಕ್ರಮಣ ಮೀನ ರಾಶಿಯಲ್ಲಿ (15, ಮಾರ್ಚ್)
ಜ್ಯೋತಿಷ್ಯದ ಪ್ರಕಾರ, ಸೂರ್ಯ ದೇವ ಒಬ್ಬ ವ್ಯಕ್ತಿಯ ಜೀವನ, ಕೆಲಸ, ತಂದೆ, ಗಂಡ, ಅಧಿಕಾರ, ಆದೇಶ ಇತ್ಯಾದಿಗಳನ್ನು ಪ್ರತಿನಿಧಿಸುತ್ತಾರೆ. ಅಂದರೆ ಸೂರ್ಯ ಸಂಕ್ರಮಣವು ಒಬ್ಬ ವ್ಯಕ್ತಿಯ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಪರಿಣಾಮವನ್ನು ಬೀರುತ್ತದೆ. ಅದು ಧನಾತ್ಮಕ ಮತ್ತು ನಕಾರಾತ್ಮಕ ಎರಡೂ ಆಗಿರಬಹುದು.
ವರ್ಷ 2022 ರಲ್ಲಿ, 15 ಮಾರ್ಚ್ ರಂದು ಬೆಳಿಗ್ಗೆ 12 ಗಂಟೆ 31 ನಿಮಿಷಕ್ಕೆ ಸೂರ್ಯ ಗ್ರಹವು ಮೀನ ರಾಶಿಗೆ ಪ್ರವೇಶಿಸಲಿದೆ. ಇದು ರಾಶಿಚಕ್ರದ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ ಮತ್ತು ಇದರೊಂದಿಗೆ ಪ್ರತಿ ರಾಶಿಗಾಗಿ ಸುಲಭವಾದ ಪರಿಹಾರವನ್ನು ಸಹ ನೀಡಲಾಗಿದೆ.
ಸೂರ್ಯ ಗ್ರಹವು ಮೇಷ ರಾಶಿಚಕ್ರದ ಸ್ಥಳೀಯರ ಐದನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಹನ್ನೆರಡನೇ ಮನೆಗೆ ಸಾಗುತ್ತದೆ. ಈ ಸಮಯದಲ್ಲಿ ಮೇಷ ರಾಶಿಚಕ್ರದ ಸ್ಥಳೀಯರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಉತ್ತಮ ಅವಕಾಶಗಳೊಂದಿಗೆ ನೀವು ಬಡ್ತಿ ಮತ್ತು ವೇತನದಲ್ಲಿ ಹೆಚ್ಚಳವನ್ನು ಪಡೆಯುವ ನಿರೀಕ್ಷೆಯಿದೆ. ಏಕೆಂದರೆ ಈ ಸಂಕ್ರಮಣದ ಪರಿಣಾಮವು ನಿಮಗೆ ಶುಭಕರ ಮತ್ತು ಅನುಕೂಲಕರವಾಗಿರುವ ಸಂಪೂರ್ಣ ಸಾಧ್ಯತೆ ಇದೆ. ಆರ್ಥಿಕವಾಗಿ ಹಣಕಾಸಿನ ಆದಾಯ ಹೆಚ್ಚಾಗುತ್ತದೆ. ಆದರೆ ಈ ಸಮಯದಲ್ಲಿ ಯಾವುದೇ ರೀತಿಯ ಹಣಕಾಸಿನ ಹೂಡಿಕೆಯನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಪ್ರಗತಿಯ ದೃಷ್ಟಿಕೋನದಿಂದ ಈ ಸಮಯವು ನಿಮಗೆ ಅನುಕೂಲಕರವಾಗಿರಲಿದೆ. ಇದಲ್ಲದೆ ಕೆಲಸದ ಸ್ಥಳದಲ್ಲಿ ನಿಮ್ಮ ಶತ್ರುಗಳ ಪ್ರಾಬಲ್ಯವನ್ನು ಸಹ ನೀವು ಸಾಧಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಈ ಸಮಯ ಉತ್ತಮವೆಂದು ಸಾಬೀತಾಗುತ್ತದೆ. ಅಧ್ಯಯನವನ್ನು ಮುಂದುವರಿಸಲು ಬಯಸುತ್ತಿರುವ ಮಕ್ಕಳಿಗೆ ಈ ಸಮಯವು ಸಾಕಷ್ಟು ಅನುಕೂಲಕರವಾಗಿರುತ್ತದೆ.
ವೈಯಕ್ತಿಕವಾಗಿ ನಿಮ್ಮ ಸಂಬಂಧಗಳ ಬಗ್ಗೆ ಮಾತನಾಡಿದರೆ, ಸೂರ್ಯ ಸಂಚಾರವು ನಿಮಗೆ ಅನುಕೂಲಕರವಾಗಿರುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ನೀವು ಗೊಂದಲಕ್ಕೊಳಗಾಗಬಹುದು. ಇದಲ್ಲದೆ ನಿಮ್ಮ ಮಕ್ಕಳು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಮಗೆ ಸಮಸ್ಯೆಯಾಗಬಹುದು.
ಪರಿಹಾರ – ಪ್ರತಿದಿನ ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದು ನಿಮಗೆ ಉತ್ತಮ.
ಸೂರ್ಯ ಗ್ರಹವು ವೃಷಭ ರಾಶಿಚಕ್ರದ ಸ್ಥಳೀಯರ ನಾಲ್ಕನೇ ಮನೆಯನ್ನು ನಿಯಂತ್ರಿಸುತ್ತದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. ಸೂರ್ಯ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ವ್ಯಾಪಾರದಲ್ಲಿ ತೊಡಗಿರುವ ಜನರು ವಿಶೇಷವಾಗಿ ಕುಟುಂಬದ ವ್ಯಾಪಾರವನ್ನು ನಡೆಸುತ್ತಿರುವವರು ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ವ್ಯಾಪಾರನ್ನು ವಿಸ್ತರಿಸಲು ಸಹ ಇದು ಅನುಕೂಲಕರ ಸಮಯ. ಆರ್ಥಿಕವಾಗಿ ನಿಮ್ಮ ಪ್ರಸ್ತುತ ಜೀವನ ಶೈಲಿಯಿಂದಾಗಿ ನಿಮ್ಮ ವೆಚ್ಚಗಳು ಹೆಚ್ಚಾಗಬಹುದು. ಕೆಲಸ ಮಾಡುತ್ತಿರುವವರು ತಮ್ಮ ಕೆಲಸದ ಸ್ಥಳದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ, ಇದು ನಿಮ್ಮ ಚಿತ್ರವನ್ನು ಸುಧಾರಿಸುತ್ತದೆ. ಸಂಚಾರದ ಸಮಯದಲ್ಲಿ ವೃಷಭ ರಾಶಿಚಕ್ರದ ವಿದ್ಯಾರ್ಥಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಇದರ ಹೊರತಾಗಿ ಪರಿಶ್ರಮಕ್ಕೆ ತಕ್ಕಂತೆ ನೀವು ಫಲಿತಾಂಶಗಳನ್ನು ಪಡೆಯುವಿರಿ.
ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ಹಠಾತ್ ಹಣವನ್ನು ಪಡೆಯುವ ನಿರೀಕ್ಷೆಯೂ ಇದೆ. ಈ ಅವಧಿಯಲ್ಲಿ ನೀವು ಹೊಟ್ಟೆಗೆ ಸಮಬಂಧಿಸಿದ ಸಮಸ್ಯೆಯನ್ನು ಸಹ ಎದುರಿಸಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಲೇಜಿ ವಹಿಸಲು ಸೂಚಿಸಲಾಗುತ್ತದೆ. ವೈಯಕ್ತಿಕ ಸಂಚಾರದ ಪರಿಣಾಮದಿಂದಾಗಿ ನಿಮ್ಮ ಸಂಬಂಧಗಳು ಹದಗೆಡಬಹುದು. ಆದ್ದರಿಂದ ಯಾವುದೇ ವಿವಾದದಲ್ಲಿ ತೊಡಗಬೇಡಿ. ಮತ್ತು ಯಾವುದೇ ವಿಷಯದಿಂದ ನಿಮ್ಮನ್ನು ದೂರವಿಡುವುದು ಉತ್ತಮ.
ಪರಿಹಾರ – ಪ್ರತಿದಿನ ತಾಮ್ರದ ಪಾತ್ರೆಯಲ್ಲಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದು ನಿಮಗೆ ಉತ್ತಮ.
ಸೂರ್ಯ ಗ್ರಹವು ಮಿಥುನ ರಾಶಿಚಕ್ರದ ಮೂರನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಹತ್ತನೇ ಮನೆಗೆ ಗೋಚರಿಸುತ್ತದೆ. ಈ ಅವಧಿಯಲ್ಲಿ ನೀವು ಸಾಮಾನ್ಯ ಫಲಿತಾಂಶಗಳನ್ನು ಪಡೆಯುವಿರಿ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಸಂಚಾರದ ಸಮಯದಲ್ಲಿ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಅವರೊಂದಿಗೆ ಸಮಯವನ್ನು ಕಳೆಯಲು ನೀವು ಎಲ್ಲಾದರೂ ಹೊರಗೆ ಹೋಗಬಹುದು. ವಿವಾಹಿತ ಜನರು ತಮ್ಮ ದಾಂಪತ್ಯ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದು. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಲಯ ಮತ್ತು ಸಮಾಜದಲ್ಲಿ ನಿಮ್ಮ ಪ್ರತಿಷ್ಠೆಯೂ ಹೆಚ್ಚಾಗಬಹುದು. ಆರೋಗ್ಯದ ದೃಷ್ಟಿಕೋನದಿಂದ ಕಣ್ಣು ಮತ್ತು ಕುತ್ತಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ವೃತ್ತಿಪರವಾಗಿ, ಮಿಥುನ ರಾಶಿಚಕ್ರದ ಜನರು ಯಾವುದೇ ಪಾಲುದಾರಿಕೆಯ ವ್ಯಾಪಾರ ಅಥವಾ ಒಪ್ಪಂದಗಳನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಆದರೆ ವ್ಯಾಪಾರದಲ್ಲಿ ತೊಡಗಿರುವ ಜನರು ಕೆಲಸದ ಸ್ಥಳದಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಕೆಲಸವನ್ನು ಬದಲಾಯಿಸಲು ಯೋಜಿಸುತ್ತಿರುವವರು ಅನೇಕ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಕೆಲಸದ ಸತ್ತಲದಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುತ್ತಾರೆ. ಒಟ್ಟಾರೆಯಾಗಿ ಮಿಥುನ ರಾಶಿಚಕ್ರದ ಸ್ಥಳೀಯರಿಗೆ ಸೂರ್ಯ ಸಂಚಾರವು ಸಾಕಷ್ಟು ಅನುಕೂಲಕರವಾಗಿರಲಿದೆ.
ಪರಿಹಾರ – ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ಗಾಯತ್ರಿ ಮಂತ್ರವನ್ನು ಪಠಿಸುವುದು ನಿಮಗೆ ಪ್ರಯೋಜನಕಾರಿ.
ಕರ್ಕ / Cancer
ಸೂರ್ಯ ಗ್ರಹವು ಕರ್ಕ ರಾಶಿಚಕ್ರದ ಎರಡನೇ ಮನೆಯ ಅಧಿಪತಿಯಾಗಿದೆ ಮತ್ತು ತನ್ನ ಸಂಚಾರದ ಸಮಯದಲ್ಲಿ ಇದು ನಿಮ್ಮ ಒಂಬತ್ತನೇ ಮನೆಗೆ ಪ್ರವೇಶಿಸುತ್ತದೆ. ಪರಿಣಾಮವಾಗಿ ನೀವು ಅದೃಷ್ಟದ ಬೆಂಬಲವನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ.
ವೈಯಕ್ತಿಕವಾಗಿ, ಈ ಸಮಯವು ನಿಮಗೆ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಅವಧಿಯಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಸಮಾಜದ ಧಾರ್ಮಿಕ ಚಟುವಟಿಕೆಗಳಲ್ಲಿ ನೀವು ಮುಂದುವರೆದು ಭಾಗವಹಿಸುವಿರಿ. ಇದರಿಂದಾಗಿ ನಿಮ್ಮ ಪ್ರತಿಷ್ಠೆ, ಸಾಮಾಜಿಕ ವಲಯ ಮತ್ತು ಜನಪ್ರಿಯತೆ ಸಾಕಷ್ಟು ಹೆಚ್ಚಾಗುತ್ತದೆ. ಆರ್ಥಿಕವಾಗಿ ಕರ್ಕ ರಾಶಿಚಕ್ರದ ಜನರು ತಮ್ಮ ಪೂರ್ವಜರ ಆಸ್ತಿಯಿಂದ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯೂ ಇದೆ. ಆದರೆ ಆರೋಗ್ಯದ ದೃಷ್ಟಿಕೋನದಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನೀವು ಎದುರಿಸಬೇಕಾಗಬಹುದು ಆದ್ದರಿಂದ ಹೆಚ್ಚು ಮಸಾಲೆಯುಕ್ತ ಅಥವಾ ಹುರಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಆದಾಗ್ಯೂ, ಯಾವುದೇ ವಿಷಯದಿಂದಾಗಿ ಕುಟುಂಬದಲ್ಲಿ ನೀವು ಗೊಂದಲಕ್ಕೆ ಒಳಗಾಗಬಹುದು.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕರ್ಕ ರಾಶಿಚಕ್ರದ ಜನರು ತಮ್ಮ ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಇದು ಸಾಕಷ್ಟು ಅನುಕೂಲಕರ ಸಮಯವಾಗಬಹುದು, ಏಕೆಂದರೆ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಪರಿಣಾಮವಾಗಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹ ನೀವು ಯೋಜಿಸಬಹುದು. ಈ ಅವಧಿಯಲ್ಲಿ ನೀವು ಯಾವುದೇ ಯೋಜನೆಯಲ್ಲಿ ಹಣಕಾಸಿನ ಹೂಡಿಕೆ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು.
ಪರಿಹಾರ – ಪ್ರತಿದಿನ ಬೆಳಿಗ್ಗೆ ಆದಿತ್ಯ ಸ್ತೋತ್ರವನ್ನು ಪಠಿಸುವುದು ನಿಮಗೆ ಉತ್ತಮ
ಸೂರ್ಯ ಗಹವು ಸಿಂಹ ರಾಶಿಚಕ್ರದ ಎಂಟನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಎಂಟನೇ ಮನೆಗೆ ಪ್ರವೇಶಿಸುತ್ತದೆ. ಪರಿಣಾಮವಾಗಿ ಸಿಂಹ ರಾಶಿಚಕ್ರದ ಜನರು ಸಾಮಾನ್ಯ ಫಲಿತಾಂಶಗಳನ್ನು ಪಡೆಯಲಿದ್ದಾರೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನೀವು ತೊಂದರೆಗೆ ಒಳಗಾಗಬಹುದು. ನಿಮ್ಮ ಕಿರಿಕಿರಿ ವರ್ತನೆ ಮತ್ತು ಕಠೋರ ವಾಣಿಯಿಂದಾಗಿ ನಿಮ್ಮ ಪ್ರೀತಿಪಾತ್ರರಿಗೆ ನೋವಾಗಬಹುದು. ಇದಲ್ಲದೆ ಈ ಸಂಚಾರದ ಸಮಯದಲ್ಲಿ ನಿಮ್ಮ ಆದಾಯದ ಬಗ್ಗೆಯೂ ನೀವು ಚಿಂತೆಗೆ ಒಳಗಾಗಬಹುದು. ನಿಮ್ಮ ಆರೋಗ್ಯವು ಸ್ವಲ್ಪ ದುರ್ಬಲವಾಗಿರಬಹುದು. ಇದಲ್ಲದೆ ನಿಮ್ಮ ಯಾವುದೇ ಹಳೆಯ ರೋಗದಿಂದಾಗಿಯೂ ನೀವು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು. ಆದ್ದರಿಂದ ಈ ಅವಧಿಯಲ್ಲಿ ವಿಶೇಷವಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಸೂಚಿಸಲಾಗುತ್ತದೆ. ವೈವಾಹಿಕ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಸುತ್ತಾಡಲು ಹೋಗಬಹುದು.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಅಸಮರ್ಥರಾಗಬಹುದು. ಇದಲ್ಲದೆ ಯಾವುದೇ ತಪ್ಪು ಮಾಡುವ ಸಾಧ್ಯತೆಯೂ ಇದೆ. ನಿಮ್ಮ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಸಧ್ಯಕ್ಕೆ ಅದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಆದರೆ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಅವಧಿಯು ಸ್ವಲ್ಪ ಅನುಕೂಲಕರವಾಗಿರುವ ಸಾಧ್ಯತೆ ಇದೆ.
ಪರಿಹಾರ – ಪ್ರತಿದಿನ ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವ ಮೂಲಕ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಬಹುದು.
ಸೂರ್ಯ ಗ್ರಹವು ಕನ್ಯಾ ರಾಶಿಚಕ್ರದ ಹನ್ನೆರಡನೇ ಮನೆಯ ಅಧಿಪತಿಯಾಗಿದೆ ಮತ್ತು ತನ್ನ ಸಂಚಾರದ ಸಮಯದಲ್ಲಿ ಇದು ನಿಮ್ಮ ಏಳನೇ ಮನೆಗೆ ಸಾಗುತ್ತದೆ.
ವೈಯಕ್ತಿಕವಾಗಿ, ಈ ಸಮಯದಲ್ಲಿ ಸ್ವಭಾವತಃ ನೀವು ಕಿರಿಕಿರಿವುಳ್ಳವರಾಗಿರಬಹುದು. ಇದರಿಂದಾಗಿ ಮಾನಸಿಕ ಶಾಂತಿಯನ್ನು ಪಡೆಯುವುದು ನಿಮಗೆ ಸವಾಲಾಗಿರಬಹುದು. ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು. ಏಕೆಂದರೆ ನಿಮ್ಮ ವರ್ತನೆಯು ಭಾವನಾತ್ಮಕವಾಗಿ ಅವರನ್ನು ನೋಯಿಸಬಹುದು. ಇದಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ನಿಮ್ಮನ್ನು ಕಾಡಬಹುದು. ಆದಾಗ್ಯೂ ಯಾವುದೇ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುತ್ತದೆ.
ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದಲ್ಲಿ ತೊಡಗಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಯಾವುದೇ ವಿವಾದಕ್ಕೆ ಒಳಗಾಗಬಹುದು. ಇದು ನಿಮ್ಮ ಚಿತ್ರದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಕೆಲವು ಜನರು ಗ್ರಾಹಕರೊಂದಿಗೆ ಡೀಲ್ ಮಾಡುವಲ್ಲಿ ಅನೇಕ ಸವಾಲುಗಳನ್ನು ಎದುರಿಸಬಹುದು. ಇದಲ್ಲದೆ ಈ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಪ್ರಯಾಣವನ್ನು ತಪ್ಪಿಸಲು ಸಹ ನಿಮಗೆ ಸೂಚಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ, ಸಾಮಾಜಿಕ ಸ್ಥಿತಿ ಮತ್ತು ಅರೋಗ್ಯ ಸ್ಥಿತಿಯಲ್ಲಿ ನೀವು ಕುಸಿತವನ್ನು ಅನುಭವಿಸಬಹುದು. ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ತಾಳ್ಮೆಯಿಂದಿರಿ ಎಂದು ಸೂಚಿಸಲಾಗುತ್ತದೆ.
ಪರಿಹಾರ – ಸೂರ್ಯನನ್ನು ಬಲಪಡಿಸಲು ಗೋಧಿ ಮತ್ತು ಬೆಲ್ಲವನ್ನು ದಾನ ಮಾಡಿ.
ಸೂರ್ಯ ಗ್ರಹವು ತುಲಾ ರಾಶಿಚಕ್ರದ ಹನ್ನೊಂದನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಆರನೇ ಮನೆಗೆ ಸಾಗುತ್ತದೆ. ಈ ಅವಧಿಯು ನಿಮಗೆ ಅನುಕೂಲಕರವಾಗಿರುವ ಸಾಧ್ಯತೆ ಇದೆ.
ಸಂಚಾರದ ಪ್ರಕಾರ ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ತುಲಾ ರಾಶಿಚಕ್ರದ ಕೆಲವರು ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಾರೆ ಮತ್ತು ಕೆಲವರು ತಮ್ಮ ಸಂಬಂಧಗಳಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಕಾನೂನು ಪ್ರಕರಣದಲ್ಲಿ ಸಿಲುಕಿಕೊಂಡಿರುವ ವಿಷಯದ ನಿರ್ಧಾರವು ನಿಮ್ಮ ಪರವಾಗಿರುವ ಸಾಧ್ಯತೆಯೂ ಇದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ತಮ್ಮ ಅಧ್ಯಯನದತ್ತ ಹೆಚ್ಚು ಏಕಾಗ್ರತೆಯನ್ನು ಹೊಂದಿರುತ್ತಾರೆ. ಆರೋಗ್ಯದ ದೃಷ್ಟಿಯಿದ ಯಾವುದೇ ದೀರ್ಘಕಾಲದ ರೋಗದಿಂದ ನೀವು ಮುಕ್ತರಾಗಬಹುದು.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಹೊಸ ಉದ್ಯೋಗವನ್ನು ಹುಡುಕುತ್ತೀರುವ ಜನರು ಅನೇಕ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ನಿರ್ಧಾರಿತ ಗುರಿಗಳನ್ನು ಸಾಧಿಸಲು ಸಹ ನಿಮಗೆ ಸಾಧ್ಯವಾಗಬಹುದು. ವ್ಯಾಪಾರಸ್ಥರಿಗೆ ಈ ಸಮಯವೂ ಅನುಕೂಲಕರವಾಗಿರಲಿದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ವ್ಯಾಪಾರವು ಬೆಳೆಯುವ ಸಾಧ್ಯತೆಯೂ ಇದೆ.
ಪರಿಹಾರ – ಪ್ರತಿದಿನ ನಿಯಮಿತವಾಗಿ ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದು ಉತ್ತಮ.
ಸೂರ್ಯ ಗ್ರಹವು ವೃಶ್ಚಿಕ ರಾಶಿಚಕ್ರದ ಹತ್ತನೇ ಮನೆಯನ್ನು ನಿಯಂತ್ರಿಸುತ್ತದೆ ಮತ್ತು ತನ್ನ ಈ ಸಂಚಾರದ ಸಮಯದಲ್ಲಿ ಇದು ನಿಮ್ಮ ಐದನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರದ ಪರಿಣಾಮವು ನಿಮಗೆ ಸಾಮಾನ್ಯವಾಗಿರುತ್ತದೆ.
ವೈಯಕ್ತಿಕವಾಗಿ, ಪ್ರೀತಿಯ ಸಂಬಂಧದಲ್ಲಿರುವ ಪ್ರೇಮಿಗಳಿಗೆ ಈ ಸಮಯವು ಉತ್ತಮವಾಗಿರುವುದಿಲ್ಲ, ಏಕೆಂದರೆ ಪ್ರೇಮಿಯೊಂದಿಗೆ ವಿವಾದಕ್ಕೆ ಒಳಗಾಗಬಹುದು. ಆದಾಗ್ಯೂ ವೈವಾಹಿಕ ಜೋಡಿಗಳಿಗೆ ಸಮಯವು ಸಾಕಷ್ಟು ಧನಾತ್ಮಕವಾಗಿರುತ್ತದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನಿಮ್ಮ ಆಹಾರ ಪಾನೀಯ ಮತ್ತು ದಿನಚರಿಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಸುತ್ತಿರುವ ಮಕ್ಕಳು ಉತ್ತಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಬಹುದು.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಉದೋಗವನ್ನು ಹುಡುಕುತ್ತಿರುವ ಜನರಿಗೆ ಸಮಯ ತುಂಬಾ ಅನುಕೂಲಕರಾಗಿರುತ್ತದೆ. ಏಕೆಂದರೆ ಉತ್ತಮ ಅವಕಾಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ವಿಸ್ತರಿಸುವ ಬಗ್ಗೆ ಯೋಜಿಸಬಹುದು. ಇದರಿಂದಾಗಿ ಆರ್ಥಿಕವಾಗಿ ನೀವು ಸಾಕಷ್ಟು ಆದಾಯವನ್ನು ಪಡೆಯುವಿರಿ. ವೃತ್ತಿಪರ ಸ್ಥಳೀಯರು ತಮ್ಮ ವೃತ್ತಿಯನ್ನು ಬದಲಾಯಿಸಲು ಅಥವಾ ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಸ್ಥಳಕ್ಕೆ ಹೋಗಲು ಯೋಜಿಸಬಹುದು.
ಪರಿಹಾರ – ಪ್ರತಿದಿನ ನಿಯಮಿತವಾಗಿ ಗಾಯತ್ರಿ ಮಂತ್ರವನ್ನು ಪಠಿಸುವುದು ನಿಮಗೆ ಉತ್ತಮ.
ಸೂರ್ಯ ಗ್ರಹವು ಧನು ರಾಶಿಚಕ್ರದ ಒಂಬತ್ತನೇ ಮನೆಯನ್ನು ನಿಯಂತ್ರಿಸುತ್ತದೆ ಮತ್ತು ತನ್ನ ಈ ಸಂಚಾರದ ಸಮಯದಲ್ಲಿ ಇದು ನಿಮ್ಮ ನಾಲ್ಕನೇ ಮನೆಗೆ ಗೋಚರಿಸುತ್ತದೆ. ಈ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ನಿಮ್ಮ ತಾಯಿಯ ಅರೋಗ್ಯವು ಹದಗೆಡುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಮನೆಯ ವಾತಾವರಣದಲ್ಲಿ ನಕಾರಾತ್ಮಕತೆಯನ್ನು ಕಾಣಲಾಗುತ್ತದೆ. ಇದಲ್ಲದೆ ಕುಟುಂಬದ ಸದಸ್ಯರಲ್ಲಿ ತಪ್ಪು ಗ್ರಹಿಕೆಗಳು ಸಹ ಉದ್ಭವಿಸಬಹುದು. ಆದಾಗ್ಯೂ, ಈ ಅವಧಿಯಲ್ಲಿ ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ಹೊಂದಿರುತ್ತೀರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಕೇಂದ್ರೀಕರಿಸುತ್ತಾರೆ ಮತ್ತು ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶನವನ್ನು ಮಾಡುತ್ತಾರೆ.
ವೃತ್ತಿಪರವಾಗಿ, ವ್ಯಾಪಾರದಲ್ಲಿ ತೊಡಗಿರುವ ಜನರು ವಿಶೇಷವಾಗಿ ಕೌಟುಂಬಿಕ ವ್ಯಾಪಾರದಲ್ಲಿರುವ ಜನರಿಗೆ ಈ ಸಾಚಾರವು ಮಂಗಲಕಾರವಾಗಿರುತ್ತದೆ. ಇದರೊಂದಿಗೆ ನಿಮ್ಮ ಕೆಲಸದಲ್ಲಿ ನಿಮ್ಮ ಸಂಪೂರ್ಣ ಕುಟುಂಬವು ಸಹ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗದಲ್ಲಿರುವ ಜನರು ಕೆಲಸದ ಹೊರೆಯಿಂದಾಗಿ ಹೆಚ್ಚು ಕಾರ್ಯನಿರತರಾಗಿರಬಹುದು. ನಿಮ್ಮ ಕೆಲಸದಿಂದ ಕುಟುಂಬಕ್ಕೆ ಸಮಯ ನೀಡದಿರುವುದರಿಂದಾಗಿ ಅವರು ನಿಮ್ಮೊಂದಿಗೆ ಕೋಪಗೊಳ್ಳಬಹುದು. ಇದಲ್ಲದೆ ಈ ಸಮಯದಲ್ಲಿ ಯಾವುದೇ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸಲು ಮತ್ತೆ ಅದನ್ನು ಆರಂಭಿಸಬಹುದು. ದೀರ್ಘಕಾಲದ ಪ್ರಯಾಣವು ನಿಮಗೆ ಅನುಕೂಲಕರವಾಗಿರುತ್ತದೆ.
ಪರಿಹಾರ – ಸೂರ್ಯ ದೇವರಿಗೆ ನೀರನ್ನು ಅರ್ಪಿಸುವುದು ನಿಮಗೆ ಉತ್ತಮ.
ಸೂರ್ಯ ಗ್ರಹವು ಮಕರ ರಾಶಿಚಕ್ರದ ಎಂಟನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮೂರನೇ ಮನೆಗೆ ಗೋಚರಿಸುತ್ತದೆ. ಮಕರ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಹೆಚ್ಚು ಅನುಕೂಲಕರವಾಗಿರುವುದಿಲ್ಲ.
ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಈ ಸಂಚಾರದ ಸಮಯದಲ್ಲಿ ಕೆಲವೊಮ್ಮೆ ನೀವು ಅನಿರೀಕ್ಷಿತ ಬೆಳವಣಿಗೆ ಮತ್ತು ಕೆಲವೊಮ್ಮೆ ಕುಸಿತವನ್ನು ಅನುಭವಿಸಬಹುದು. ಈ ಅವಧಿಯಲ್ಲಿ ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡುತ್ತದೆ ಎಂಬ ನಿರೀಕ್ಷೆಯಿದೆ. ಅಲ್ಲದೆ ಸಹೋದರ ಸಹೋದರಿಯರೊಂದಿಗಿನ ಸಂಬಂಧವು ಸಹ ಹೆಚ್ಚು ಉತ್ತಮವಾಗಿರುವುದಿಲ್ಲ. ಆದ್ದರಿಂದ ಯಾವುದೇ ರೀತಿಯ ಜಗಳ ಅಥವಾ ವಿವಾದವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಆರೋಗ್ಯದ ವಿಷಯದಲ್ಲಿ ನೀವು ಏರಿಳಿತಗಳನ್ನು ಎದುರಿಸಬೇಕಾಗಬಹುದು.
ವೃತ್ತಿಪರವಾಗಿ, ಕೆಲಸದಲ್ಲಿರುವ ಜನರಿಗೆ ಈ ಸಮಯವು ಹೆಚ್ಚು ಉತ್ತಮವಾಗಿರುವುದಿಲ್ಲ. ನಿಮ್ಮ ವೈಯಕ್ತಿಕ ಮತ್ತು ವುತ್ತಿಪರ ಜೀವನದಲ್ಲಿ ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಧ್ವನಿ ಮತ್ತು ಕೋಪವನ್ನು ನಿಯಂತ್ರಿಸಿ ಮಾತನಾಡಲು ನಿಮಗೆ ಸೂಚಿಸಲಾಗುತ್ತದೆ. ಇದಲ್ಲದೆ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣಗಳ ಮೂಲಕ ನೀವು ಲಾಭವನ್ನು ಪಡೆಯಬಹುದು. ಆದಾಗ್ಯೂ ಈ ಸಮಯದಲ್ಲಿ ನಿಮ್ಮ ಆರೋಗ್ಯದತ್ತ ನೀವು ಹೆಚ್ಚು ಕಾಳಜಿ ವಹಿಸುವಿರಿ.
ಪರಿಹಾರ – ಪ್ರತಿದಿನ ಬೆಳಿಗ್ಗೆ ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದು ಉತ್ತಮ.
ಸೂರ್ಯ ಗ್ರಹವು ಕುಂಭ ರಾಶಿಚಕ್ರದ ಏಳನೇ ಮನೆಯನ್ನು ನಿಯಂತ್ರಿಸುತ್ತದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತದೆ. ಈ ಸಂಚಾರವು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ವೈಯಕ್ತಿಕವಾಗಿ, ವಿವಾಹಿತರು ಜೀವನ ಸಂಗಾತಿಯೊಂದಿಗಿನ ತಮ್ಮ ಸಂಬಂಧವನ್ನು ಸುಧಾರಿಸಬೇಕು. ಇದಲ್ಲದೆ ಇನ್ನೂ ಒಂಟಿಯಾಗಿರುವ ಜನರು ಈ ಸಮಯದಲ್ಲಿ ಉತ್ತಮ ಸಂಗಾತಿಯನ್ನು ಭೇಟಿಯಾಗಬಹುದು. ಆರೋಗ್ಯದ ಬಗ್ಗೆ ಮಾತನಾಡಿದರೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಇದಲ್ಲದೆ ಈ ಸಮಯದಲ್ಲಿ ನಿಮ್ಮ ಚಿತ್ರವು ಹದಗೆಡುವ ಸಾಧ್ಯತೆಯೂ ಇದೆ. ಆದ್ದರಿಂದ ನಿಮ್ಮ ವಾಣಿಯನ್ನು ನಿಯಂತ್ರಿಸಿ ಮತ್ತು ತಾಳ್ಮೆಯಿಂದಿರಿ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗದಲ್ಲಿರುವ ಜನರು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿರಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ವ್ಯಾಪರದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಆದರೆ ಕೌಟುಂಬಿಕ ವ್ಯಾಪಾರದಲ್ಲಿರುವವರಿಗೆ ಸಮಯ ಅನುಕೂಲಕರವಾಗಿರುವುದಿಲ್ಲ. ಏಕೆಂದರೆ
ಕುಟುಂಬದ ಸದಯರೊಂದಿಗೆ ನೀವು ಗೊಂದಲಕ್ಕೊಳಗಾಗಬಹುದು. ಇದು ನಿಮ್ಮ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದಲ್ಲದೆ ಯಾವುದೇ ಹಣಕಾಸಿನ ಹೂಡಿಕೆ ನಿಮಗೆ ಉತ್ತಮವಾಗಿರುವ ಸಾಧ್ಯತೆ ಇದೆ.
ಪರಿಹಾರ – ತಂದೆಯನ್ನು ಗೌರವಿಸಿ ಮತ್ತು ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಪ್ರಯತ್ನಿಸುವುದು ನಿಮಗೆ ಉತ್ತಮ.
ಸೂರ್ಯ ಗ್ರಹವು ಮೀನ ರಾಶಿಚಕ್ರದ ಆರನೇ ಮನೆಯನ್ನು ನಿಯಂತ್ರಿಸುತ್ತದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಮೊದಲನೇ ಮನೆ ಅಂದರೆ ಲಗ್ನದ ಮನೆಗೆ ಗೋಚರಿಸುತ್ತದೆ. ಪರಿಣಾಮವಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ.
ವೈಯಕ್ತಿಕವಾಗಿ, ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನೀವು ಜ್ವರ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ನಿಮ್ಮ ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಸಹ ಬೀರಬಹುದು. ವಿವಾಹಿತ ದಂಪತಿಗಳ ನಡುವೆ ಅಂತರದ ಸಾಧ್ಯತೆ ಇದೆ. ಆದ್ದರಿಂದ ನಿಮ್ಮ ಪರಸ್ಪರ ಸಂಬಂಧದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಸೂಚಿಸಲಾಗುತ್ತದೆ. ಜೀವನದಲ್ಲಿ ಸಕಾರಾತ್ಮಕತೆಯನ್ನು ತರಲು ಪ್ರಯತ್ನಿಸಿ.
ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಸರ್ಕಾರಿ ಉದ್ಯೋಗದಲ್ಲಿ ತೊಡಗಿರುವ ಜನರಿಗೆ ಸಮಯ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ನಿಮ್ಮ ತಂಡದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಕೆಲಸದಲ್ಲಿರುವ ಜನರು ತಮ್ಮ ಕೆಲಸದಲ್ಲಿ ಬಡ್ತಿ ಅಥವಾ ಉನ್ನತ ಸ್ಥಾನವನ್ನು ಪಡೆಯಬಹುದು. ಇದು ನಿಮ್ಮ ಚಿತ್ರವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.
ಪರಿಹಾರ – ಇರುವೆಗಳಿಗೆ ಗೋಧಿ ಹಿಟ್ಟು ತಿನ್ನಿಸುವುದು ಉತ್ತಮ.
ಈ ಲೇಖನವು ನಿಮ್ಮ ಮುಂಬರುವ ಸಮಯವನ್ನು ಸರಿಪಡಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ . ಧನ್ಯವಾದ!
2,027