ವಾರ್ಷಿಕ ರಾಶಿ ಭವಿಷ್ಯ 2022

ನಿಮ್ಮ ಸೂರ್ಯನ ಚಿಹ್ನೆಗಾಗಿ ಭವಿಷ್ಯವಾಣಿ

banner

ವಾರ್ಷಿಕ ರಾಶಿ ಭವಿಷ್ಯ 2022

ಹೊಸ ವರ್ಷ 2022 ಅಂತಿಮವಾಗಿ ಬಂದಿದೆ. ಹೊಸ ವರ್ಷವೂ ತನ್ನೊಂದಿಗೆ ಹೊಸ ಆರಂಭಗಳು, ಹೊಸ ಭರವಸೆಗಳು ಮತ್ತು ನಮ್ಮಲ್ಲಿ ಪ್ರತಿಯೊಬ್ಬರಿಗೂ ಹಲವಾರು ಸಾಧ್ಯತೆಗಳನ್ನು ತರುತ್ತದೆ, ಇದನ್ನು ನಾವು ನಿಮ್ಮ ವಾರ್ಷಿಕ ರಾಶಿ ಭವಿಷ್ಯ 2022 ಮುನ್ಸೂಚನೆಯಲ್ಲಿ ಕಾಣಲಿದ್ದೇವೆ. ಆದರೆ ಹಾಗೆ ಮಾಡುವ ಮೊದಲು ವರ್ಷ 2022 ರಲ್ಲಿ ನಿಮಗಾಗಿ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ನೀವು ತಯಾರಿಸಿದ್ದಿರೋ ಇಲ್ಲವೋ ಎಂಬುದನ್ನು ತಿಳಿಯಲು ನಾವು ಬಯಸುತ್ತೇವೆ. ನಾವು ಯಾಕೆ ಕೇಳುತ್ತಿದ್ದೇವೆ ಎಂದು ನೀವು ಆಶ್ಚರ್ಯಪಡಬಹುದು. ಏಕೆಂದರೆ 2022 ರ ವಾರ್ಷಿಕ ರಾಶಿ ಭವಿಷ್ಯವನ್ನು ನಿಮಗೆ ವ್ಯಾಪಕವಾಗಿ ಉಪಯುಕ್ತವಾಗಿಸುವುದು ನಮ್ಮ ಉದ್ದೇಶ. ನಮ್ಮ ಜ್ಯೋತಿಷಿಗಳ ಪ್ರಕಾರ, ನಿಮ್ಮ ರಾಶಿ ಭವಿಷ್ಯವನ್ನು ನೀವು ಓದುವಾಗ ನಿಮ್ಮ ದಿನ, ವಾರ ಅಥವಾ ವರ್ಷದಿಂದ ನೀವು ಏನನ್ನು ಪಡೆಯಲು ಬಯಸುತ್ತೀರಿ ಎಂಬುದರ ಬಗ್ಗೆ ನೀವು ಯಾವಾಗಲೂ ಕುತೂಹಲವನ್ನು ಹೊಂದಿರಬೇಕು. ಒಮ್ಮೆ ನೀವು ಅದನ್ನು ಮಾಡಿದ ನಂತರ, ನಿಮ್ಮ ರಾಶಿ ಭವಿಷ್ಯವನ್ನು ಓದುವುದರ ಮೂಲಕ ನಿಮ್ಮ ಸಣ್ಣ ಮತ್ತು ದೊಡ್ಡ ಪ್ರಯತ್ನಗಳಿಂದ ನಿಮ್ಮ ಗುರಿಗಳನ್ನು ಹೇಗೆ ಸಾಧಿಸುವುದು ಎಂಬುದರ ಬಗ್ಗೆ ನಿಮಗೆ ಸಹಾಯವಾಗುತ್ತದೆ. ಇದರೊಂದಿಗೆ ನಿಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಿದಾಗ ನಕ್ಷತ್ರಪುಂಜಗಳು ಅಥವಾ ಗ್ರಹಗಳು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಸಹ ತಿಳಿಯಬಹುದು.

ಇದನ್ನು ಹೇಳುವುದರೊಂದಿಗೆ, ವಾರ್ಷಿಕ ರಾಶಿ ಭವಿಷ್ಯ 2022 ರ ಮುನ್ಸೂಚನೆಯನ್ನು ಓದುವ ಮೊದಲು, 2022 ರಲ್ಲಿ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದನ್ನು ನೀವೇ ಕೇಳಿಕೊಳ್ಳಿ. 2022 ರ ರಾಶಿ ಭವಿಷ್ಯವು ನಿಮ್ಮ ಗುರಿಯನ್ನು ಸಾಧಿಸುವ ಹಾದಿಯಲ್ಲಿ ನಿಮಗೆ ಕೆಂಪು ಧ್ವಜವನ್ನು ತೋರಿಸಿದರೆ, ನಮ್ಮ ಪರಿಣತ ಜ್ಯೋತಿಷಿಗಳೊಂದಿಗೆ ಮಾತನಾಡುವ ಮೂಲಕ ನಿಮ್ಮ ಸಮಸ್ಯೆಗಳಿಗೆ ಸರಿಯಾದ ಪರಿಹಾರಗಳನ್ನು ಸಹ ನೀವು ಕಂಡುಕೊಳ್ಳಬಹುದು.

ಮೇಷ ರಾಶಿ ಭವಿಷ್ಯ 2022

ಮೇಷ ರಾಶಿ ಭವಿಷ್ಯ 2022

ಮೇಷ ರಾಶಿ ಭವಿಷ್ಯ 2022 ರ ಪ್ರಕಾರ, ಮೇಷ ರಾಶಿಚಕ್ರದ ಸ್ಥಳೀಯರು 2022 ವರ್ಷವನ್ನು ನಿಧಾನವಾಗಿ ಪ್ರಾರಂಭಿಸುತ್ತಾರೆ. ಮೇಷ ರಾಶಿಚಕ್ರದ ಜನರನ್ನು ನಿಧಾನಗೊಳಿಸುವ ಮೊದಲ ವಿಷಯವೆಂದರೆ ವೃತ್ತಿ ಜೀವನದ ನಿರೀಕ್ಷೆಗಳು. ಮಕರ ರಾಶಿಯಲ್ಲಿ ಶನಿ ದೇವರ ಉಪಸ್ಥಿತಿಯ ಹೊರತಾಗಿಯೂ, ಹೊಸ ಅವಕಾಶಗಳನ್ನು ಹುಡುಕುವಲ್ಲಿ ನೀವು ಕಷ್ಟಪಡಬೇಕಾಗಬಹುದು. ವರ್ಷದ ಮೊದಲಾರ್ಧದಲ್ಲಿ ನಿಮ್ಮ ವೃತ್ತಿ ಅಥವಾ ವ್ಯಾಪಾರದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮೇಷ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಮೊದಲಾರ್ಧದ ನಂತರ ಸ್ಥಳೀಯರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ವರ್ಷದ ಆರಂಭವು ನಿರೀಕ್ಷಿಸಿದಷ್ಟು ಉತ್ತಮವಾಗಿರುವುದಿಲ್ಲ. ಆದಾಗ್ಯೂ, ವೃತ್ತಿಯ ಹತ್ತನೇ ಮನೆಯಲ್ಲಿ ಶನಿ ದೇವರ ಅನುಗ್ರಹದಿಂದಾಗಿ, ನಿಮ್ಮ ವೃತ್ತಿ ಮತ್ತು ವ್ಯಾಪಾರದಲ್ಲಿ ನೀವು ಶೀಘ್ರದಲ್ಲೇ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಆದರೆ ವಿಶೇಷವಾಗಿ ವರ್ಷದ ಮಧ್ಯದಲ್ಲಿ, ಕೆಲಸದ ಸ್ಥಳದಲ್ಲಿನ ಸಮಸ್ಯೆಗಳ ಬಗ್ಗೆ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಮೇಷ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ವರ್ಷವು ಮಿಶ್ರವಾಗಲಿದೆ. ಆದ್ದರಿಂದ ನಿಮ್ಮ ಅಧ್ಯಯನದತ್ತ ಕೇಂದ್ರೀಕರಿಸಿ ಎಂದು ನಿಮಗೆ ಸಲಹೆ ನೀಡಲಾಗುತ್ತದೆ.

ನಿಮ್ಮ ಪ್ರೀತಿ ಜೀವನದ ಪ್ರಕಾರ, ನಿಮ್ಮ ಪ್ರೀತಿ ಜೀವನದಲ್ಲಿ ನೀವು ಪ್ರಣಯ ಮತ್ತು ಭಾವೋದ್ರಿಕ ಸಮಯವನ್ನು ಕಳೆಯುವಿರಿ ಎಂದು ಮೇಷ ವಾರ್ಷಿಕ ರಾಶಿ ಭವಿಷ್ಯ 2022 ಸೂಚಿಸುತ್ತಿದೆ. ವರ್ಷದ ತ್ರೈಮಾಸಿಕದಲ್ಲಿ ಗುರು ಗ್ರಹವು ಶುಕ್ರನೊಂದಿಗೆ ಸಂಯೋಜಿಸುವುದರಿಂದಾಗಿ, ಪರಿಣಾಮವಾಗಿ ನಿಕಟ ಪ್ರೀತಿಯ ಕೊರತೆಯನ್ನು ನೀಗಿಸಲು ಮತ್ತು ಮಂಗಳಕರ ಸಮಯವನ್ನು ಕಳೆಯಲು ನಿಮಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಸ್ವಲ್ಪ ಸಮಯದ ವರೆಗೆ ರಾಹುವು ಗೃಹ ವ್ಯವಹಾರಗಳ ಎರಡನೇ ಮನೆಗೆ ಪ್ರವೇಶಿಸುತ್ತಾರೆ. ಇದು ನಿಮ್ಮ ಕುಟುಂಬದ ವಾತಾವರಣದಲ್ಲಿ ಕಿರಿಕಿರಿ ಮತ್ತು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಆದರೆ ಶೀಘ್ರದಲ್ಲೇ ಈ ಸಮಯವೂ ಹಾದುಹೋಗುತ್ತದೆ. ನಿಮ್ಮ ಕುಟುಂಬ ಮತ್ತು ಜೀವನ ಸಂಗಾತಿಯೊಂದಿಗೆ ನೀವು ಆಹ್ಲಾದಕರ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ.

ಆರ್ಥಿಕವಾಗಿ, ಮೇಷ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ದ್ವಿತೀಯಾರ್ಧದಲ್ಲಿ ನೀವು ನಷ್ಟವನ್ನು ಅನುಭವಿಸಬಹುದು. ಆದ್ದರಿಂದ ಅನೇಕ ಸ್ಥಳಗಳಲ್ಲಿ ಹಣಕಾಸಿನ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗುತ್ತದೆ. ಸಾಮಾನ್ಯವಾಗಿ, ಆರೋಗ್ಯದ ದೃಷ್ಟಿಯಿಂದ ವರ್ಷ 2022 ಮೇಷ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರುವುದಿಲ್ಲ. ನಿಮ್ಮ ಎರಡನೇ ಮತ್ತು ಎಂಟನೇ ಮನೆಯಲ್ಲಿ ನೆರಳಿನ ಗ್ರಹ ರಾಹುವು ನೆಲೆಗೊಂಡಿರುವುದರಿಂದ, ಈ ವರ್ಷ ನೀವು ಜೀರ್ಣಾಂಗ ಮತ್ತು ಅಲರ್ಜಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿವುದನ್ನು ತಪ್ಪಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಮೇಷ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ವೃಷಭ ವಾರ್ಷಿಕ ರಾಶಿ ಭವಿಷ್ಯ 2022

ವೃಷಭ ವಾರ್ಷಿಕ ರಾಶಿ ಭವಿಷ್ಯ 2022

ವೃಷಭ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಅವಧಿಯನ್ನು ಇತರ ವರ್ಷಗಳಿಗೆ ಹೋಲಿಸಿದರೆ, ವೃಷಭ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವು ಸಾಕಷ್ಟು ಉತ್ತಮವಾಗಿರಲಿದೆ. ಗುರುವು ವೃಷಭ ರಾಶಿಯಲ್ಲಿ ಪ್ರವೇಶಿಸಿದಾಗ ಮತ್ತು ನೀವು ಅದನ್ನು ಅರಿತುಕೊಳ್ಳುವ ಮೊದಲು ನಿಮ್ಮ ಎಲ್ಲಾ ಸಂಘರ್ಷಗಳು ಅಂತ್ಯಗೊಳ್ಳುತ್ತವೆ. ವೃಷಭ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸರಳತೆಯು ನಿಮ್ಮನ್ನು ಸುತ್ತುವರೆದಿರುತ್ತದೆ. ವರ್ಷದ ದ್ವಿತೀಯಾರ್ಧದಲ್ಲಿ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳು ಸ್ವಲ್ಪ ಸಮಯದ ವರೆಗೆ ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಬಹುದು. ನಿಮ್ಮ ರಾಶಿಚಕ್ರದ ಮೇಲೆ ಶನಿ ದೇವರ ಪ್ರಭಾವ ಬೀರುವುದರಿಂದಾಗಿ ಇದು ಸಂಭವಿಸಲಿದೆ. ಆದರೆ ಮಂಗಳನ ಸಮಯ ಬಂದ ತಕ್ಷಣ, ವಿಷಯಗಳು ಮತ್ತೆ ಉತ್ತಮಗೊಳ್ಳುತ್ತವೆ ಮತ್ತು ನಿಮಗಾಗಿ ಉತ್ತಮ ಸಮಯ ಮತ್ತು ಸಂತೋಷದ ಎಲ್ಲಾ ಬಾಗಿಲುಗಳು ತೆರೆದುಕೊಳ್ಳುತ್ತವೆ. ನಿಮ್ಮಲ್ಲಿ ಕೆಲವರ ಮದುವೆಯಾಗಬಹುದು ಮತ್ತು ಕೆಲವರು ಹೊಸ ಮತ್ತು ಹೊಂದಾಣಿಕೆಯ ಸಂಗಾತಿಯನ್ನು ಭೇಟಿಯಾಗುವ ಸಾಧ್ಯತೆಯೂ ಇದೆ.

ಆರ್ಥಿಕ ದೃಷ್ಟಿಕೋನದಿಂದ, ವೃಷಭ ರಾಶಿಚಕ್ರದ ಸ್ಥಳೀಯರು ಉತ್ತಮ ಸಮಯವನ್ನು ಹೊಂದಿರಬಹುದು. ವೃತ್ತಿಯ ಹತ್ತನೇ ಮನೆಯಲ್ಲಿ ಗುರುವಿನ ಸಂಚಾರದಿಂದಾಗಿ ಈ ವರ್ಷ ನೀವು ಉತ್ತಮ ಯೋಜನೆಗಳು ಮತ್ತು ಒಪ್ಪಂದಗಳನ್ನು ಪಡೆಯಬಹುದು. ವೃತ್ತಿಪರವಾಗಿ ಕೆಲವರು ಬಡ್ತಿ ಮತ್ತು ಕೆಲವರು ವೇತನದ ಹೆಚ್ಚಳವನ್ನು ಸಹ ಪಡೆಯಬಹುದು. ಉತ್ತಮವಾಗಿ ನಿರ್ವಹಿಸುವುದು ಮತ್ತು ಉತ್ತಮ ಸ್ಟಳಗಳಲ್ಲಿ ಹೂಡಿಕೆ ಮಾಡುವುದು ಎಲ್ಲವನ್ನೂ ಸುಗಮವಾಗಿ ಮತ್ತು ನಿಮ್ಮ ಪರವಾಗಿ ಮಾಡುತ್ತದೆ. ಅಲ್ಲದೆ, ಶನಿ ದೇವರು ನಾಲ್ಕನೇ ಮನೆಗೆ ಸಾಗುವುದರೊಂದಿಗೆ 2022 ರ ಕೊನೆಯ ತ್ರೈಮಾಸಿಕವು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮವಾಗಿರುತ್ತದೆ

ಮೊದಲನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯಿಂದಾಗಿ ವೃಷಭ ರಾಶಿಚಕ್ರದ ಸ್ಥಳೀಯರಿಗೆ ಸಮಯವು ಸ್ವಲ್ಪ ಅನಾನುಕೂಲವಾಗಿರಲಿದೆ. ದೀರ್ಘಕಾಲದ ರೋಗಗಳನ್ನು ಬಳಲುತ್ತಿರುವ ವೃಷಭ ರಾಶಿಚಕ್ರದ ಜನರು ವಿಶೇಷವಾಗಿ ವರ್ಷದ ದ್ವಿತೀಯಾರ್ಧದಲ್ಲಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದರೊಂದಿಗೆ ನಿಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ನೀವು ನಿಗಾ ಇಡಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಈ ಸಮಯದಲ್ಲಿ ಮಂಗಳ ಗ್ರಹವು ನಿಮ್ಮ ಕುಟುಂಬದ ಮನೆಗೆ ಪ್ರವೇಶಿಸಲಿದೆ ಮತ್ತು ಇದು ಅನೇಕ ಅನಗತ್ಯ ದುರ್ಘಟನೆಗಳಿಗೆ ಕಾರಣವಾಗಬಹುದು.

ವೃಷಭ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಮಿಥುನ ವಾರ್ಷಿಕ ರಾಶಿ ಭವಿಷ್ಯ 2022

ಮಿಥುನ ವಾರ್ಷಿಕ ರಾಶಿ ಭವಿಷ್ಯ 2022

ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, 2022 ವರ್ಷವು ಹಿಂದಿನ ಕರ್ಮಗಳ ಫಲಿತಾಂಶಗಳನ್ನು ಹೊಂದಿರುವ ವರ್ಷವಾಗಿರುತ್ತದೆ. ನಿಮ್ಮ ಎಲ್ಲಾ ಕಠಿಣ ಪರಿಶ್ರಮಗಳು ಮತ್ತು ಪ್ರಯತ್ನಗಳು ವರ್ಷದ ದ್ವಿತೀಯಾರ್ಧದಲ್ಲಿ ತಮ್ಮ ಪರಿಣಾಮಗಳನ್ನು ತೋರಿಸುತ್ತವೆ ಮತ್ತು ಈ ಸಮಯದಲ್ಲಿ ಶನಿ ಮತ್ತು ಗುರುವು ಪ್ರಮುಖ ಪಾತ್ರವಹಿಸುತ್ತವೆ. ಈ ಎರಡೂ ಗ್ರಹಗಳು ನಿಮ್ಮ ಗುರಿ ಮತ್ತು ಆಕಾಂಕ್ಷೆಗಳತ್ತ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ನಿಮಗೆ ಮಾರ್ಗದರ್ಶನ ನೀಡುತ್ತವೆ. ಆದರೆ ಮಿಥುನ ರಾಶಿಚಕ್ರದ ಸ್ಥಳೀಯರು ಹೆಚ್ಚು ಭರವಸೆಗಳನ್ನು ಹೊಂದಿರುವುದಿಲ್ಲ. ಏಕೆಂದರೆ ವರ್ಷ 2022 ರಲ್ಲಿ ನೀವು ಅನೇಕ ಏರಿಳಿತಗಳನ್ನು ಎದುರಿಸಬೇಕಾಗಬಹುದು.

ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಜಾಗೃತರಾಗಿರಿ. ಮಿಥುನ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ರಾಶಿಚಕ್ರದ ಎಂಟನೇ ಮನೆಯಲ್ಲಿ ಶನಿ ದೇವರ ಪ್ರವೇಶದಿಂದಾಗಿ, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಬಹುದು. ದೀರ್ಘಕಾಲದ ರೋಗವನ್ನು ಹೊಂದಿರುವ ಜನರು ತಮ್ಮ ವೈದ್ಯರ ಎಲ್ಲಾ ಸಲಹೆ ಮತ್ತು ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕು.

ವರ್ಷದ ಆರಂಭವು ನಿಮ್ಮ ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರಲಿದೆ. ಸಹಜವಾಗಿ ಇದು ನಿಮ್ಮ ವೃತ್ತಿಯ ಮನೆಯಲ್ಲಿ ಶನಿ ಮತ್ತು ಗುರುವಿನ ಪ್ರಭಾವದಿಂದಿರಬಹುದು. ವರ್ಷದ ದ್ವಿತೀಯಾರ್ಧದಲ್ಲಿ ಮಿಥುನ ರಾಶಿಚಕ್ರದ ಕೆಲವು ಸ್ಥಳೀಯರು ಬಡ್ತಿ ಪಡೆಯುವ ಸಾಧ್ಯತೆ ಇದೆ. ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಸಂಬಂಧಿತ ಕ್ಷೇತ್ರಗಳು ಮತ್ತು ಕೋರ್ಸ್ ಗಳತ್ತ ಹೆಚ್ಚು ಕೇಂದ್ರೀಕರಿಸುತ್ತಾರೆ. ಗುರುವು ಎಂಟನೇ ಮನೆಗೆ ಪ್ರವೇಶಿಸಿದಾಗ, ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗಬಹುದು. 2022 ರ ಅಂತ್ಯದ ವೇಳೆಗೆ ಹಣಕಾಸಿನ ಯಾವುದೇ ಹೂಡಿಕೆಯನ್ನು ಮಾಡುವುದು ನಿಯಂಗೆ ಉತ್ತಮವಾಗಿರುವುದಿಲ್ಲ. ಆದ್ದರಿಂದ ಮಿಥುನ ರಾಶಿಚಕ್ರದ ಜನರು ದಯವಿಟ್ಟು ಗೊತ್ತಿಲ್ಲದೇ ಎಲ್ಲಿಯಾದರೂ ಹಣಕಾಸಿನ ಹೂಡಿಕೆ ಮಾಡಿವುದನ್ನು ತಪ್ಪಿಸಿ ಎಂದು ಸೂಚಿಸಲಾಗುತ್ತದೆ.

ಪ್ರೀತಿ, ಮದುವೆ ಮತ್ತು ಸಂಬಂಧಗಳ ವಿಷಯಗಳಲ್ಲಿ ಮಂಗಳ ಗ್ರಹವು ಪ್ರಮುಖ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ವರ್ಷದ ಮೊದಲಾರ್ಧದಲ್ಲಿ ನೀವು ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಆದರೆ ನಿಮ್ಮ ರಾಶಿಯಲ್ಲಿ ಶುಕ್ರನ ಪರಿಣಾಮದಿಂದಾಗಿ ನಿಮ್ಮ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯವು ಮರಳುತ್ತದೆ. ವಿವಾಹಿತ ಜನರು ಕೆಲವು ಪ್ರಣಯದ ಕ್ಷಣಗಳನ್ನು ಆನಂದಿಸಬಹುದು. ಅವಿವಾಹಿತರಿಗೆ ಸಂಬಂಧಿಸಿದಂತೆ, ವರ್ಷದ ದ್ವಿತೀಯಾರ್ಧದಲ್ಲಿ ನೀವು ಕೆಲವು ಪ್ರೀತಿಯ ಸುಂಟರಗಾಳಿಗೆ ಸಿಲುಕುತ್ತೀರಿ. ಒಟ್ಟಾರೆಯಾಗಿ ಮಿಥುನ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳ ಬಗ್ಗೆ ನೀವು ಜಾಗರೂಕರಾಗಿರಬೇಕು.

ಮಿಥುನ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಕರ್ಕಾಟಕ ವಾರ್ಷಿಕ ರಾಶಿ ಭವಿಷ್ಯ 2022

ಕರ್ಕಾಟಕ ವಾರ್ಷಿಕ ರಾಶಿ ಭವಿಷ್ಯ 2022

ಕರ್ಕಾಟಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವು ಕರ್ಕ ರಾಶಿಚಕ್ರದ ಸ್ಥಳೀಯರಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ. ವರ್ಷದ ಮೊದಲಾರ್ಧದಲ್ಲಿ ಗುರು ಗ್ರಹವು ಮೀನ ರಾಶಿಗೆ ಪ್ರವೇಶಿಸಲಿದೆ. ಜೀವನದ ಎಲ್ಲಾ ಹಂತಗಳಲ್ಲಿ ನಿಮ್ಮನ್ನು ಸಾಬೀತುಪಡಿಸಲು ನೀವು ನಿಮ್ಮ ಮಿತಿಗಳನ್ನು ದಾಟುವಿರಿ ಮತ್ತು ಹೆಚ್ಚಿನ ಪ್ರಯತ್ನಗಳನ್ನು ಮಾಡುವಿರಿ. ನಂತರ ಮಧ್ಯ ತಿಂಗಳುಗಳಲ್ಲಿ ಗುರುವು ಮೀನ ರಾಶಿಗೆ ಸಾಗಿದಾಗ, ಪರಿಸ್ಥಿತಿಗಳು ಸ್ವಲ್ಪ ಬದಲಾಗಬಹುದು. ಇದರೊಂದಿಗೆ ನೀವು ಕೆಲವು ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಬಹುದು. ಆದ್ದರಿಂದ ಕರ್ಕಾಟಕ ರಾಶಿಚಕ್ರದ ಜನರು ಬುದ್ಧಿವಂತಿಕೆಯೊಂದಿಗೆ ವರ್ತಿಸಿ ಮತ್ತು ನಿಮ್ಮ ಕೋಪವನ್ನು ನಿಯಂತ್ರಿಸಿ ಎಂದು ಸಲಹೆ ನೀಡಲಾಗಿದೆ.

ಇದಲ್ಲದೆ, ಕರ್ಕ ವಾರ್ಷಿಕ ರಾಶಿ ಭವಿಷ್ಯ 2022, ನಿಮ್ಮ ವೈವಾಹಿಹಿಕ ಜೀವನದಲ್ಲಿ ನೀವು ಶಾಂತ ಮತ್ತು ಸಂತೋಷದ ಸಮಯವನ್ನು ಅನುಭವಿಸುವಿರಿ ಎಂದು ಊಹಿಸುತ್ತದೆ. ನೀವು ಮತ್ತು ನಿಮ್ಮ ಸಂಗಾತಿಯು ಪ್ರೀತಿಯ ಬಲವಾದ ಭಾವನೆಯನ್ನು ಅನುಭವಿಸುವಿರಿ. ನಿಮ್ಮ ಪ್ರೇಮಿಯೊಂದಿಗೆ ಕೆಲವು ದೀರ್ಘಾವಧಿಯ ಯೋಜನೆಗಳನ್ನು ಮಾಡಲು ಇದು ಉತ್ತಮ ಸಮಯ. ನಿಮ್ಮ ಜಾತಕದಲ್ಲಿ ಶನಿ ಮತ್ತು ಗುರುವಿನ ಉಪಸ್ಥಿತಿಯು, ವರ್ಷದ ದ್ವಿತೀಯಾರ್ಧದಲ್ಲಿ ವಿಷಯಗಳನ್ನು ಸ್ವಲ್ಪ ಕಷ್ಟಕರವಾಗಿಸಬಹುದು. ಆದರೆ ವರ್ಷದ ಆರಂಭದಲ್ಲಿ ನಿಮ್ಮ ಏಳನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮ್ಮ ಹಾದಿಯಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ತರುತ್ತದೆ. ನಂತರ ಮೂರನೇ ತ್ರೈಮಾಸಿಕದಲ್ಲಿ ಮಂಗಳ ಗ್ರಹವು ನಿಮ್ಮ ರಾಶಿಗೆ ಪ್ರವೇಶಿಸಿದಾಗ ನಿಮ್ಮ ಮನೆಯಲ್ಲಿ ಕೆಲವು ತೀವ್ರವಾದ ಚರ್ಚೆಗಳು ನಡೆಯಬಹುದು. ಇದು ನಿಮ್ಮ ಕುಟುಂಬದ ಭಾವನೆಗಳನ್ನು ಸಾಕಷ್ಟು ನೋವುಗೊಳಿಸುತ್ತದೆ. ಇದರ ಹೊರತಾಗಿಯೂ, ಕರ್ಕಾಟಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಅಂತ್ಯದ ವೇಳೆಗೆ ಎಲ್ಲವೂ ಸುಧಾರಿಸುತ್ತವೆ.

ಇದಲ್ಲದೆ, ಕರ್ಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ವೃತ್ತಿಪರ ಮತ್ತು ಆರ್ಥಿಕ ವಿಷಯದಲ್ಲಿ ಬಹಳಷ್ಟು ವಿಷಯಗಳು ಒಟ್ಟಿಗೆ ಹೋಗುತ್ತವೆ ಎಂದು ಊಹಿಸಲಾಗಿದೆ. ವೃತ್ತಿಪರರಿಗೆ ಇದು ಸರಾಸರಿ ವರ್ಷವಾಗಿದ್ದರೂ, ವರ್ಷವಿಡೀ ನೀವು ಅನೇಕ ಅವಕಾಶಗಳನ್ನು ಪಡೆಯಬಹುದು. ಶನಿ ಗ್ರಹವು ಏಳನೇ ಮನೆಗೆ ಮತ್ತು ಮಕರ ರಾಶಿಯಲ್ಲಿ ಪ್ರವೇಶಿಸಲಿದೆ. ಉದ್ಯೋಗದಲ್ಲಿ ಉತ್ತಮ ಸ್ಥಾನವನ್ನು ಗಳಿಸುವ ನಿಮ್ಮ ಬಯಕೆಯನ್ನು ಇದು ಹೆಚ್ಚಿಸುತ್ತದೆ. ಆದರೆ ಮಂಗಳ ಗ್ರಹವು ನಿಮ್ಮ ಹತ್ತನೇ ಮನೆಗೆ ಗೋಚರಿಸಿದಾಗ, ನಿಮ್ಮ ಉದ್ಯೋಗ ಮತ್ತು ವ್ಯಾಪಾರದಲ್ಲಿ ನೀವು ಬಡ್ತಿಯನ್ನು ನಿರೀಕ್ಷಿಸುವಿರಿ.

ಆರೋಗ್ಯದ ದೃಷ್ಟಿಕೋನದಿಂದ, ವರ್ಷ 2022 ಕರ್ಕಾಟಕ ರಾಶಿಚಕ್ರದ ಸ್ಥಳೀಯರಿಗೆ ಅರೋಗ್ಯ ಸಂಬಂಧಿತ ಸಮಸ್ಯೆಗಳಿಂದ ತುಂಬಿರಲಿದೆ. ಎಂಟನೇ ಮನೆಯಲ್ಲಿ ಗುರುವಿನ ಸಾಗುವಿಕೆಯು ನಿಮಗೆ ಕೆಲವು ಕಾಲೋಚಿತ ರೋಗಗಳನ್ನು ಉಂಟುಮಾಡುತ್ತದೆ. ಇದಲ್ಲದೆ ಶನಿಯು ಏಳನೇ ಮೆನೆಯಲ್ಲಿ ನೆಲೆಗೊಂಡಾಗ, ನಿಮ್ಮ ಶಕ್ತಿಯು ಸ್ವಲ್ಪ ಕಡಿಮೆಯಾಗಬಹುದು. ಆದ್ದರಿಂದ ಆರೋಗ್ಯಕರ ನಿಯಮಗಳನ್ನು ಅನುಸರಿಸಿ ಮತ್ತು ವರ್ಷವಿಡೀ ಸಮತೋಲಿತ ಆಹಾರವನ್ನು ಸೇವಿಸಿ.

ಕರ್ಕಾಟಕ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಸಿಂಹ ವಾರ್ಷಿಕ ರಾಶಿ ಭವಿಷ್ಯ 2022

 ಸಿಂಹ ವಾರ್ಷಿಕ ರಾಶಿ ಭವಿಷ್ಯ 2022

2022 ರ ವರ್ಷವು ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಶಾಶ್ವತ ಮತ್ತು ಆಧ್ಯಾತ್ಮಿಕ ಅವಧಿಯಾಗಿದೆ. ವರ್ಷದ ಆರಂಭದಲ್ಲಿ, ಗುರು ಗ್ರಹವು ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿರುತ್ತದೆ. ಇದು ನಿಮಗೆ ಉತ್ತಮ ಹಣ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಇದಲ್ಲದೆ ಅದೇ ಸಮಯದಲ್ಲಿ ಮತ್ತೊಂದೆಡೆ, ರಾಹುವು ನಿಮ್ಮ ಹತ್ತನೇ ಮನೆಗೆ ಸಾಗಿದಾಗ ನೀವು ಕೆಲವು ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ನೀವು ಎಲ್ಲಾ ರೀತಿಯ ಒತ್ತಡ ಮತ್ತು ಚಿಂತೆಗಳಿಂದ ದೂರವಿರುತ್ತೀರಿ ಮತ್ತು ಕೆಲವು ಪವಿತ್ರ ಮತ್ತು ದೈವಿಕ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಮಧ್ಯ ತಿಂಗಳುಗಳಲ್ಲಿ ಯುರೇನಸ್ ಗ್ರಹವು ನಿಮಗೆ ಅಡ್ಡಿಯಾಗಬಹುದು ಪರಿಣಾಮವಾಗಿ ನಿಮ್ಮ ಜೀವನದಲ್ಲಿ ನೀವು ಸ್ವಲ್ಪ ನಿಧಾನವಾಗಬಹುದು. ಮೂರನೇ ತ್ರೈಮಾಸಿಕದಲ್ಲಿ ಮಂಗಳ ಗ್ರಹವು ನಿಮ್ಮ ಜೀವನದ ಎಲ್ಲಾ ಹಂತಗಳಲ್ಲಿ ಅದೃಷ್ಟದ ಬೆಂಬಲವನ್ನು ನಿಮಗೆ ನೀಡುತ್ತದೆ ಮತ್ತು 2022 ರಲ್ಲಿ ಎಲ್ಲಾ ಏರಿಳಿತಗಳನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡುತ್ತದೆ.

ವರ್ಷ 2022 ರಾಶಿ ಭವಿಷ್ಯವು ಸಿಂಹ ರಾಶಿಚಕ್ರದ ಜನರಿಗೆ ಉತ್ತಮ ಬೆಳವಣಿಗೆ ಮತ್ತು ಸಾಧನೆಗಳನ್ನು ಒದಗಿಸುತ್ತದೆ. ವರ್ಷದ ಮೊದಲಾರ್ಧದಲ್ಲಿ ಹೆಚ್ಚಿನ ಗುರಿಗಳನ್ನು ಸಾಧಿಸಲು ಗುರು ಗ್ರಹವು ನಿಮಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಆರನೇ ಮನೆಯಲ್ಲಿರುವ ಶನಿಯಿಂದಾಗಿ ವರ್ಷ 2022 ರ ಕೊನೆಯ ತಿಂಗಳುಗಳಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಬಯಸುತ್ತಿರುವ ಅಭ್ಯರ್ಥಿಗಳು ವರ್ಷದ ಮೊದಲಾರ್ಧದಲ್ಲಿ ಯಶಸ್ಸನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಉನ್ನತ ಶಿಕ್ಷಣವನ್ನು ಪಡೆಯಲು ಬಯಸುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ಪ್ರಯತ್ನ ಮತ್ತು ಸಮರ್ಪಣೆಯೊಂದಿಗೆ ಅನುಕೂಲಕರ ಸಮಯವನ್ನು ಪಡೆಯುತ್ತಾರೆ. ಇದಲ್ಲದೆ ಹತ್ತನೇ ಮನೆಯಲ್ಲಿ ರಾಹುವು ಮತ್ತು ಆರನೇ ಮನೆಯಲ್ಲಿ ಶನಿ ಮತ್ತು ಗುರುವಿನ ಉಪಸ್ಥಿತಿಯಿಂದಾಗಿ, ಸ್ಥಳದಲ್ಲಿ ಕೆಲವು ಯಶಸ್ಸನ್ನು ಮತ್ತು ನಂತರ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಈ ಎಲ್ಲದರ ಬಗ್ಗೆ ನೀವು ಜಾಗರೂಕರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ವರ್ಷದ ಮೊದಲಾರ್ಧದಲ್ಲಿ ಶನಿಯು ನಿಮ್ಮ ಜಾತಕವನ್ನು ಬಿಟ್ಟುಹೋದ ನಂತರ ಪ್ರೀತಿ ಜೀವನಕ್ಕೆ ಒಳ್ಳೆಯದನ್ನು ನಿರೀಕ್ಷಿಸಬಹುದು. ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಶುಕ್ರವು ಮೇಷ ರಾಶಿಯಲ್ಲಿ ಪ್ರವೇಶಿಸಿದಾಗ, ಸಂಗಾತಿಯೊಂದಿಗಿನ ನಿಮ್ಮ ಹೊಂದಾಣಿಕೆಯು ಸುಧಾರಿಸುತ್ತದೆ ಮತ್ತು ಮಂಗಳನ ಅನುಗ್ರಹದಿಂದ ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ನೀವು ಕೆಲವು ಸಂತೋಷದ ಕ್ಷಣಗಳು ಮತ್ತು ನೆನಪುಗಳನ್ನು ನೀವು ಆನಂದಿಸುವಿರಿ.

ಸಿಂಹ ರಾಶಿ ಭವಿಷ್ಯ 2022 ಪ್ರಕಾರ, ಯುರೇನಸ್ ಗ್ರಹವು ನಿಮ್ಮನ್ನು ಕೆಲವು ಅರೋಗ್ಯ ಸಮಸ್ಯೆಗಳಿಗೆ ಒಳಪಡಿಸಬಹುದು. ಮತ್ತು ಆರನೇ ಮನೆಯಲ್ಲಿ ಶನಿ ಮತ್ತು ಗುರುವಿನ ಸಂಯೋಜನೆಯಿಂದಾಗಿ ನಿಮ್ಮ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಉತ್ತಮ ಸಮತೋಲಿತ ಆಹಾರ ಮತ್ತು ಯೋಗ, ಧ್ಯನ ಮತ್ತು ವ್ಯಾಯಾಮವನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ.

ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಕನ್ಯಾ ವಾರ್ಷಿಕ ರಾಶಿ ಭವಿಷ್ಯ 2022

ಕನ್ಯಾ ವಾರ್ಷಿಕ ರಾಶಿ ಭವಿಷ್ಯ 2022

ವೃಷಭ ರಾಶಿಚಕ್ರದ ಸ್ಥಳೀಯರಿಗೆ ವರ್ಷದ ಆರಂಭವು ಉತ್ತಮವಾಗಿರಲಿದೆ. ಗುರು ಮತ್ತು ಮೀನ ಒಂದೇ ಪುಟದಲ್ಲಿ ಬರುವುದು ಈ ಆರಂಭಕ್ಕೆ ಕಾರಣವಾಗಬಹುದು. ಆದಾಗ್ಯೂ ಏಪ್ರಿಲ್ ರಿಂದ ಸೆಪ್ಟೆಂಬರ್ ನಡುವೆ, ನಿಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ಆ ತಿಂಗಳುಗಳಲ್ಲಿ ವಿಷಯಗಳು ನಿಮಗೆ ತುಂಬಾ ಕಷ್ಟಕರವಾಗಿಸಲು ನೀವು ಶನಿ ಗ್ರಹವನ್ನು ದೂಷಿಸಬಹುದು. ಆದ್ದರಿಂದ ಕನ್ಯಾ ವಾರ್ಷಿಕ ರಾಶಿ ಭವಿಷ್ಯದ ಪ್ರಕಾರ, ನಿಮ್ಮ ಚಿಂತೆಗಳು ಮತ್ತು ಗೊಂದಲಗಳನ್ನು ನಿಯಂತ್ರಿಸಲು ನಿಮಗೆ ಸಲಹೆ ನೀಡಲಾಗುತ್ತದೆ. ವಿಶೇಷವಾಗಿ ದೇಶೀಯ ವಿಷಯಗಳು ಮತ್ತು ವೈಯಕ್ತಿಕ ಸಂಬಂಧಗಳಲ್ಲಿ ನೀವು ಸಂಘಟಿತರಾಗಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ಪ್ರೀತಿ, ಮದುವೆ ಮತ್ತು ಸಂಬಂಧಗಳ ವಿಷಯದಲ್ಲಿ ವರ್ಷ ಪೂರ್ತಿ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ. ಮದುವೆಯಾಗಲು ಬಯಸಿದರೆ, ಕನ್ಯಾ ರಾಶಿಚಕ್ರದ ಅವಿವಾಹಿತ ಜನರು ವರ್ಷದ ಮಧ್ಯ ತಿಂಗಳುಗಳಲ್ಲಿ ಮದುವೆಯಾಗುವ ಸಾಧ್ಯತೆ ಇದೆ. ವರ್ಷದ ಮೂರನೇ ತ್ರೈಮಾಸಿಕದಲ್ಲಿ ಗ್ರಹಗಳ ಚಲನೆಯು ಅನಿರೀಕ್ಷಿತ ತಿರುವು ಪಡೆದುಕೊಳ್ಳುವುದರಿಂದ ಅತ್ತೆಮನೆ ಕಡೆಯಿಂದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಶುಕ್ರ ದೇವ ಮಕರ ರಾಶಿಗೆ ಸಾಗುವುದರಿಂದ ಕನ್ಯಾ ರಾಶಿಚಕ್ರದ ವಿವಾಹಿತ ಜನರು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳುತ್ತಾರೆ. ಮೀನವು ತನ್ನ ಪ್ರಭಾವವನ್ನು ತೋರಿಸಿದಾಗ, ನಿಮ್ಮ ಜೀವನದಲ್ಲಿ ನೀವು ಧನಾತ್ಮಕತೆಯನ್ನು ಹೊಂದುವಿರಿ ಮತ್ತು ಕುಟುಂಬದ ಸದಸ್ಯರು ಮತ್ತು ನಿಮ್ಮ ಆಪ್ತರೊಂದಿಗೆ ನೀವು ಆಹ್ಲಾದಕರ ಸಮಯವನ್ನು ಕಳೆಯುವಿರಿ. ನೀವು ಯಾವುದಾದರೂ ವಿಷಯದ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದರೆ ಅಥವಾ ಪ್ರಸ್ತುತ ಸಂಬಂಧದ ಬಗ್ಗೆ ಸಂದಿಗ್ಧತೆಯನ್ನು ಹೊಂದಿದ್ದರೆ, ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ಅವುಗಳತ್ತ ನಿಮ್ಮ ಗಮನವನ್ನು ಕೇಂದ್ರೀಕರಿಸಬಹುದು.

ನಿಮ್ಮ ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಕನ್ಯಾ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವಿದ್ಯಾರ್ಥಿಗಳು ಈ ವರ್ಷ ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ಆದಾಗ್ಯೂ, ಶನಿ ದೇವರು ಐದನೇ ಮನೆಯಲ್ಲಿ ನೆಲೆಗೊಂಡಾಗ ಪರಿಣಾಮವಾಗಿ, ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಗೊಂದಲಕ್ಕೆ ಒಳಗಾಗಬಹುದು. ಉದ್ಯೋಗದಲ್ಲಿ ತೊಡಗಿರುವ ಜನರು ಸಹ ಇದೇ ಗೊಂದಲಕ್ಕೊಳಗಾಗಿರಬಹುದು. ಈ ಸಮಯದಲ್ಲಿ ಉದ್ಯೋಗಪರರು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸಬಹುದು, ಆದರೆ 2022 ರ ಮಧ್ಯ ತಿಂಗಳಲ್ಲಿ ನೀವು ಅದನ್ನು ಪ್ರಯತ್ನಿಸಬಹುದು. ಈ ಸ್ಥಿತಿಯು ನಿಮ್ಮ ಹಣಕಾಸಿನ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ ಮತ್ತು ಉಳಿತಾಯದ ಬಗ್ಗೆ ಗಮನ ಹರಿಸಿ.

ಆರೋಗ್ಯದ ಬಗ್ಗೆ ಮಾತನಾಡಿದರೆ, ಸಾಮಾನ್ಯವಾಗಿ ಕನ್ಯಾ ರಾಶಿಚಕ್ರದ ಸ್ಥಳೀಯರಿಗೆ ಈ ವರ್ಷವು ಉತ್ತಮವಾಗಿರುತ್ತದೆ. ಆದರೆ ರಾಹು ಮತ್ತು ಕೇತುವಿನ ಪ್ರಭಾವದಿಂದಾಗಿ, ವರ್ಷದ ಮೊದಲಾರ್ಧದಲ್ಲಿ ನೀವು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಕನ್ಯಾ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಎಲ್ಲಾ ಸಮಸ್ಯೆಗಳು ಮತ್ತು ಗೊಂದಲಗಳಿಂದ ದೂರವಿರಲು ನಿಮಗೆ ಸೂಚಿಸಲಾಗುತ್ತದೆ. ಮಧುಮೇಹ ಮತ್ತು ರಕ್ತದೊತ್ತಡದ ರೋಗಿಗಳು ಉತ್ತಮ ಆಹಾರವನ್ನು ಸೇವಿಸಬೇಕು ಮತ್ತು ಯೋಗ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

ಕನ್ಯಾ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ತುಲಾ ವಾರ್ಷಿಕ ರಾಶಿ ಭವಿಷ್ಯ

 ತುಲಾ ವಾರ್ಷಿಕ ರಾಶಿ ಭವಿಷ್ಯ

2022 ವರ್ಷವು ತುಲಾ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವಾಗಿರಲಿದೆ. ಇದಕ್ಕಾಗಿ ನಿಮ್ಮ ಜಾತಕದ ಐದನೇ ಮನೆಯಲ್ಲಿ ನೆಲೆಗೊಂಡಿರುವ ಶನಿ ದೇವರಿಗೆ ನೀವು ಧನ್ಯವಾದವನ್ನು ನೀಡಬೇಕು. ನಿಮ್ಮ ಹಾದಿಯಲ್ಲಿ ಹೊಸತನ ಮತ್ತು ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಮತ್ತು ಶನಿಯು ಕುಂಭದಂತಹ ರಾಶಿಯಲ್ಲಿ ನೆಲೆಗೊಂಡಿರುವುದರಿಂದ ಜೀವನವು ನಿಮಗೆ ನೀಡುವ ಸುಂದರವಾದ ಆಶ್ಚರ್ಯಗಳನ್ನು ನೀವು ಆನಂದಿಸುವಿರಿ. ಮಂಗಳವು ಹತ್ತನೇ ಮನೆಗೆ ಮತ್ತು ಕರ್ಕಾಟಕ ರಾಶಿಯಲ್ಲಿ ಪ್ರವೇಶಿಸುವ ವರೆಗೆ ಪೂರ್ಣತೆ ಇರುತ್ತದೆ, ಇದರಿಂದಾಗಿ ನೀವು ಕೆಲವು ಪ್ರಯತ್ನಗಳನ್ನು ಮಾಡಬಹುದು. ಆದ್ದರಿಂದ ಉತ್ತಮವಾಗಿ ಕೇಂದ್ರೀಕರಿಸಿ ಮತ್ತು ಈ ಹಂತವು ಶೀಘ್ರದಲ್ಲೇ ಹಾದುಹೋಗುತ್ತದೆ.

ಆರ್ಥಿಕವಾಗಿ, ರಾಹುವು ಎಂಟನೇ ಮನೆಗೆ ಸಾಗಿದಾಗ ವಿಷಯಗಳು ಬದಲಾಗುತ್ತವೆ ಮತ್ತು ಕೆಲವು ಅನಿರೀಕ್ಷಿತ ವೆಚ್ಚಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತವೆ. ಆದ್ದರಿಂದ ನಿಮ್ಮ ಉಳಿತಾಯ ಮತ್ತು ಗಳಿಕೆಯ ಬಗ್ಗೆ ಕೇಂದ್ರೀಕರಿಸಿ ಮತ್ತು ಅದನ್ನು ಸರಿಯಾಗಿ ನಿರ್ವಹಿಸಿ. ವ್ಯಾಪಾರ ಕಾರ್ಯನಿರ್ವಾಹಕರಿಗೆ ದೊಡ್ಡ ಗ್ರಹಗಳು ಜವಾಬ್ದಾರರಾಗಿರುತ್ತವೆ. ವರ್ಷದ ಮೊದಲಾರ್ಧದಲ್ಲಿ ಗುರು ಗ್ರಹದ ಸರಣಿಯು ಪ್ರಾರಂಭವಾಗಲಿದೆ, ಇದು ನಿಮಗೆ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವನ್ನು ನೀಡುತ್ತದೆ. ತುಲಾ ರಾಶಿಚಕ್ರದ ಕೆಲವು ಸ್ಥಳೀಯರು ಈ ವರ್ಷ ತಮ್ಮ ವ್ಯಾಪಾರದಲ್ಲಿ ಕೆಲವು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯೂ ಇದೆ. ವಿದ್ಯಾರ್ಥಿಗಳ ಬಗ್ಗೆ ಮಾತನಾಡಿದರೆ, ನೀವು ಎಲ್ಲವನ್ನೂ ಸೋಮಾರಿತನದಿಂದ ಮಾಡಿದರೆ ನಿಮ್ಮ ದಾರಿಗೆ ಅಡ್ಡಿಯಾಗುವ ಹೋರಾಟಕ್ಕೆ ಸಿದ್ಧರಾಗಿರಿ. ಹೀಗಾಗಿ, ನೀವು ನಿಷ್ಕ್ರಿಯವಾಗಿರುವುದನ್ನು ತಪ್ಪಿಸಿ ಮತ್ತು ನಿಮ್ಮ ಪುಸ್ತಕಗಳ ಬಗ್ಗೆ ಗಮನ ಹರಿಸಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ಆಗಸ್ಟ್ ನಂತರದ ತಿಂಗಳುಗಳಲ್ಲಿ ನಿಮ್ಮ ಕುಟುಂಬ ಜೀವನವು ಪ್ರಭಾವಕ್ಕೆ ಒಳಗಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಶನಿ ಗ್ರಹವು ನಿಮ್ಮ ಕುಟುಂಬದ ನಾಲ್ಕನೇ ಮನೆಯಲ್ಲಿ ನೆಲೆಗೊಂಡಿರುತ್ತದೆ. ಇದು ನಿಮ್ಮ ಕುಟುಂಬ ವಾತಾವರಣಕ್ಕೆ ಅಡ್ಡಿಯಾಗಬಹುದು. ಇದು ಉಷ್ಣ ಚರ್ಚೆಗಳು ಮತ್ತು ಆತಂಕಗಳನ್ನು ಉಂಟುಮಾಡಬಹುದು. ಮಂಗಳ ಗ್ರಹದ ಪ್ರಭಾವದಿಂದಾಗಿ 2022 ರ ಉತ್ತರಾರ್ಧದಲ್ಲಿ ನಿಮ್ಮ ವೈವಾಹಿಕ ಜೀವನವು ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಶಾಂತವಾಗಿರಲು ಪ್ರಯತ್ನಿಸಿ.

ಆರೋಗ್ಯದ ಬಗ್ಗೆ ಮಾತನಾಡಿದರೆ, ತುಲಾ ರಾಶಿಚಕ್ರದ ಸ್ಥಳೀಯರಿಗೆ ವರ್ಷ 2022 ಅಡೆತಡೆಗಳಿಂದ ತುಂಬಿರಬಹುದು. 2022 ರ ದ್ವಿತೀಯಾರ್ಧದದಲ್ಲಿ ಅರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ಆದರೆ ವರ್ಷದ ಆರಂಭವು ಉತ್ತಮವಾಗಿರುತ್ತದೆ. ನಿಮ್ಮ ಲಗ್ನದ ಮನೆಯಲ್ಲಿ ಗುರುವಿನ ಸ್ಥಾನದಿಂದಾಗಿ ಈ ಪರಿಸ್ಥಿತಿ ಉದ್ಭವಿಸುತ್ತದೆ. ಆದರೆ ರಾಹು ಮತ್ತು ಶನಿಯು ಇದಕ್ಕೆ ಪ್ರವೇಶಿಸಿದಾಗ ನೀವು ತೂಕದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಆದ್ದರಿಂದ ನಿಮಗಾಗಿ ಶಿಫಾರಸು ಮಾಡಲಾದ ಆಹಾರಕ್ರಮವನ್ನು ಅಳವಡಿಸಿಕೊಳ್ಳಿ ಎಂದು ನಿಮಗೆ ಸಲಹೆ ನೀಡಲಾಗಿದೆ.

ತುಲಾ ವಾರ್ಷಿಕ ರಾಶಿ ಭವಿಷ್ಯ ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022

ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022

ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವು ನಿಮಗೆ ಅನುಕೂಲಕರವಾಗಿರುತ್ತದೆ. ವರ್ಷದ ಆರಂಭದಲ್ಲಿ ಗುರು ಗ್ರಹವು ನಿಮ್ಮ ಜಾತಕದಲ್ಲಿ ಧನಾತ್ಮಕತೆಯನ್ನು ತರುತ್ತದೆ. ಪರಿಣಾಮವಾಗಿ, ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮತ್ತು ಆರಾಮದಾಯಕ ಜೀವನವನ್ನು ಆನಂದಿಸುತ್ತೀರಿ. ನಿಮ್ಮ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲಾಗುತ್ತದೆ ಮತ್ತು ಜೀವನದಲ್ಲಿ ನೀವು ಸುಲಭವಾಗಿ ಮುನ್ನಡೆಯುತ್ತೀರಿ. ತದನಂತರ ಕುಂಭ ರಾಶಿಯಲ್ಲಿ ಶನಿಯು ನಿಮ್ಮ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಸಂಕೋಲೆಗಳು ಇರುತ್ತವೆ. ಆದರೆ ವರ್ಷದ ಉತ್ತರಾರ್ಧದಲ್ಲಿ ಧೈರ್ಯದಿಂದ ನೀವು ಅವುಗಳನ್ನು ತೊಡೆದುಹಾಕಲು ನಿಮಗೆ ಸಾಧ್ಯವಾಗುತ್ತದೆ.

ಹಣಕಾಸಿನ ವಿಷಯಗಳ ಬಗ್ಗೆ ಮಾತನಾಡಿದರೆ, ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ಸಂಪನ್ಮೂಲಗಳನ್ನು ನೀವು ಸುಲಭವಾಗಿ ಗಳಿಸುವಿರಿ. ನಿಮ್ಮ ಹನ್ನೊಂದನೇ ಮನೆ ಮತ್ತು ಕನ್ಯಾ ರಾಶಿಯಲ್ಲಿ ಗುರು ಗ್ರಹದ ಸಂಚಾರವು ಇದಕ್ಕೆ ಕಾರಣವಾಗಿರುತ್ತದೆ. ಹನ್ನೊಂದನೇ ಮನೆಯನ್ನು ಸಂಪತ್ತಿನ ಮನೆಯೆಂದು ಪರಿಗಣಿಸಲಾಗಿದೆ ಮತ್ತು ಈ ಮನೆಯಲ್ಲಿ ಗುರುವಿನ ಉಪಸ್ಥಿತಿಯು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕೆಲವು ವೆಚ್ಚಗಳು ಉಂಟಾಗಬಹುದು. ಆದ್ದರಿಂದ ಇದನ್ನು ಜಾಗರೂಕರಾಗಿ ನಿರ್ವಹಿಸಿ. ನೀವು ಯಾವುದೇ ಹೂಡಿಕೆಯ ಬಗ್ಗೆ ಯೋಚಿಸುತ್ತಿದ್ದರೆ, ಸಂಪತ್ತಿನ ಮನೆಯಲ್ಲಿ ಗುರುವಿನ ಸಂಚಾರದ ಸಮಯದಲ್ಲಿ ಇದರ ಬಗ್ಗೆ ಯೋಜಿಸಿ.

ಸಂಬಂಧಗಳು, ಮದುವೆ ಮತ್ತು ಕುಟುಂಬ ಜೀವನದ ಮೇಲೆ ರಾಹುವಿನ ದೃಷ್ಟಿ ಇರುವುದರಿಂದಾಗಿ, ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಜಾತಕದದ ಏಳನೇ ಮನೆಯಲ್ಲಿ ರಾಹುವು ನೆಲೆಗೊಂಡಾಗ ವಿಷಯಗಳು ಸ್ವಲ್ಪ ಏರಿಳಿತಗಳಿಂದ ತುಂಬಿರಲಿವೆ. ಇದಲ್ಲದೆ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಶನಿ ಗ್ರಹವು ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮನ್ನು ಶಾಂತವಾಗಿರಿಸಿ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಸಮಸ್ಯೆಗಳನ್ನು ಪರಿಹರಿಸಿ ಎಂದು ನಿಮಗೆ ಸೂಚಿಸಲಾಗುತ್ತದೆ.

ವೃತ್ತಿ ಮತ್ತು ಅರೋಗ್ಯಕ್ಕೆ ಸಂಬಂಧಿಸಿದಂತೆ ವಿಷಯಗಳು ಪರಸ್ಪರ ಸಂಬಂಧವನ್ನು ಹೊಂದಿರುತ್ತವೆ. ನಿಮ್ಮ ಕೆಲಸದ ಹೊರೆ ಹೆಚ್ಚಾದಾಗ ಒತ್ತಡಗಳು ನಿಮ್ಮನ್ನು ಸುತ್ತುವರೆದಿರುತ್ತವೆ. ಏಪ್ರಿಲ್ ತಿಂಗಳಲ್ಲಿ ಗುರು ಗ್ರಹವು ಹತ್ತನೇ ಮನೆ ಮತ್ತು ಸಿಂಹ ರಾಶಿಗೆ ಸಾಗುತ್ತದೆ. ಆದಾಗ್ಯೂ, ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಕೆಲಸದ ಸ್ಥಳದಲ್ಲಿ ಉನ್ನತ ಸ್ಥಾನ ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು ಈ ವರ್ಷ ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ವೃತ್ತಿ ಜೀವನವು ಉತ್ತಮಗೊಳ್ಳುತ್ತಿದಂತೆ ನಿಮ್ಮ ಆರೋಗ್ಯವು ಸಹ ಸುಧಾರಿಸುತ್ತದೆ. ದೀರ್ಘಕಾಲದ ರೋಗಿಗಳು ಮಾತ್ರ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಉಳಿದ ಸಮಯದಲ್ಲಿ ಎಲ್ಲವೂ ನಿಮ್ಮ ಪರವಾಗಿರುತ್ತದೆ.

ವೃಶ್ಚಿಕ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಧನು ವಾರ್ಷಿಕ ರಾಶಿ ಭವಿಷ್ಯ 2022

ಧನು ವಾರ್ಷಿಕ ರಾಶಿ ಭವಿಷ್ಯ 2022

ಧನು ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ಧನು ರಾಶಿಚಕ್ರದ ಸ್ಥಳೀಯರಿಗೆ ಸಾಕಷ್ಟು ಮಟ್ಟಿಗೆ ಪ್ರಯೋಜನಕಾರಿ ಮತ್ತು ಮಂಗಲಕಾರವಾಗಿರುತ್ತದೆ. ಈ ಸಮಯದಲ್ಲಿ ನೀವು ಎಲ್ಲಾ ಸಕಾರಾತ್ಮಕ ಶಕ್ತಿಯಿಂದ ಸುತ್ತುವರೆದಿರುವಿರಿ. ಇದರ ಕ್ರೆಡಿಟ್ ಗುರು ಗ್ರಹಕ್ಕೆ ಹೋಗುತ್ತದೆ, ಇದು ವರ್ಷವಿಡೀ ನಿಮ್ಮ ಬೆಂಬಲ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಹುಬ್ಬು ರಸ್ತೆಯು ಹಾಗೆಯೇ ಇರುತ್ತದೆ, ವಿಶೇಷವಾಗಿ ಕೇತುವು ಹನ್ನೆರಡನೇ ಮನೆಯಲ್ಲಿ ಕುಳಿತಾಗ, ಕೆಲವು ಸಾಂದರ್ಭಿಕ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ 2022 ರಲ್ಲಿ ಉಂಟಾಗುವ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ಸಿದ್ಧರಾಗಿರಿ.

ಉದ್ಯೋಗವನ್ನು ಹುಡುಕುತ್ತಿರುವ ಜನರು ಉತ್ತಮ ಉದ್ಯೋಗವನ್ನು ಪಡೆಯುತ್ತಾರೆ. ಇದಲ್ಲದೆ ವೃತ್ತಿ ರಂಗದಲ್ಲಿ ಧನು ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಧನು ರಾಶಿಚಕ್ರದ ಜನರು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯುತ್ತಾರೆ. ಮತ್ತು ವಿದ್ಯಾರ್ಥಿಗಳು ಸಹ ತಮ್ಮ ಅಧ್ಯಯನದಲ್ಲಿ ಉತ್ತಮವಾಗಿ ನಿರ್ವಹಿಸಬೇಕು. ವ್ಯಾಪಾರದಲ್ಲಿ ತೊಡಗಿರುವ ಜನರು ಈ ವರ್ಷದ ಮೊದಲಾರ್ಧದಲ್ಲಿ ಅದ್ಭುತ ಒಪ್ಪಂದಗಳು ಮತ್ತು ಪಾಲುದಾರಿಕೆಯನ್ನು ಪಡೆಯುವ ಸಾಧ್ಯತೆ ಇದೆ. ಕೆಲವರಿಗೆ ಕೆಲವು ಸಾಗರೋತ್ತರ ಸಾಧ್ಯತೆಗಳೂ ಇರುತ್ತವೆ. ಇದು ನಿಮ್ಮ ಆರ್ಥಿಕ ವಲಯದ ಮೇಲೂ ಪರಿಣಾಮ ಬೀರುತ್ತದೆ. ಧನು ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ದ್ವಿತೀಯಾರ್ಧವು ನಿಮಗೆ ತುಂಬಾ ಪ್ರಮುಖ ಮತ್ತು ಸಕಾರಾತ್ಮಕವಾಗಿರುತ್ತದೆ. ಇದರೊಂದಿಗೆ ಶನಿ ಗ್ರಹವು ಎರಡನೇ ಮನೆ ಮತ್ತು ಮಕರ ರಾಶಿಯ ಮೇಲೆ ಪರಿಣಾಮ ಬೀರಿದಾಗ, ನಿಮ್ಮ ಹಣಕಾಸಿನ ನಿರೀಕ್ಷೆಯು ಹೆಚ್ಚಾಗುತ್ತದೆ, ಇದಲ್ಲದೆ ಬಹು ವಿತ್ತೀಯ ಲಾಭದ ಮೂಲಗಳನ್ನು ಸಹ ನೀವು ಹೊಂದಿರುತ್ತೀರಿ.

2022 ರಲ್ಲಿ, ಕೇತುವು ಹನ್ನೆರಡನೇ ಮನೆಯಲ್ಲಿ ಕುಳಿತಿರುವಾಗ, ನೀವು ಬಲವಾದ ಆರೋಗ್ಯವನ್ನು ಹೊಂದಿದ್ದರೂ ಸಮಯವು ಸ್ವಲ್ಪ ಕಠಿಣವಾಗಿರುತ್ತದೆ. ಇದರ ನಂತರ ಗುರು ಗ್ರಹದ ಪ್ರಭಾವದಿಂದಾಗಿ, ಶೀಘ್ರದಲ್ಲೇ ವಿಷಯಗಳು ಉತ್ತಮಗೊಳ್ಳುತ್ತವೆ ಮತ್ತು ನೀವು ಕಡಿಮೆ ಒತ್ತಡವನ್ನು ಅನುಭವಿಸುವಿರಿ. ಅದನ್ನೇ ಸೇರಿಸಿದರೆ ವರ್ಷದ ದ್ವಿತೀಯಾರ್ಧವು ನಿಮಗೆ ಹಬ್ಬದ ಸಮಯವಾಗಿರುತ್ತದೆ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುವ ಮಂಗಳ ಗ್ರಹದ ಕಾರಣದಿಂಡಾಗಿರುತ್ತದೆ.

ಧನು ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವಿಶೇಷವಾಗಿ ವರ್ಷದ ಮೊದಲಾರ್ಧವು ಧನು ರಾಶಿಚಕ್ರದ ಸ್ಥಳೀಯರಿಗೆ ಬಿಕ್ಕಟ್ಟುಗಳಿಂದ ತುಂಬಿರಲಿದೆ. ಪರಿಣಾಮವಾಗಿ ಹಿಂದಿನ ಸಂಬಂಧದಲ್ಲಿ ಸಿಲುಕಿಕೊಂಡಿರುವ ಧನು ರಾಶಿಚಕ್ರದ ಜನರು ಮತ್ತೆ ತಮ್ಮ ಪ್ರೇಮಿಯನ್ನು ಸಂಪರ್ಕಿಸಬಹುದು. ಕೆಲವರು ಮದುವೆಯಾಗುವ ಸಾಧ್ಯತೆಯೂ ಇದೆ. ಧನು ರಾಶಿಚಕ್ರದ ವಿವಾಹಿತ ಜನರು ತಮ್ಮ ಕುಟುಂಬ ಮತ್ತು ಜೀವನ ಸಂಗಾತಿಯೊಂದಿಗೆ ಆಹ್ಲಾದಕರ ಮತ್ತು ಸಂತೋಷದ ಸಮಯವನ್ನು ಕಳೆಯುತ್ತೀರಿ. ವರ್ಷದ ಮೊದಲಾರ್ಧದಲ್ಲಿ ಶನಿ ಗಹವು ಕುಂಭ ರಾಶಿಯಲ್ಲಿ ರ್ಪವೇಶಿಸುವುದರಿಂದ ಇದು ಸಂಭವಿಸುತ್ತದೆ

ಧನು ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಮಕರ ವಾರ್ಷಿಕ ರಾಶಿ ಭವಿಷ್ಯ 2022

 ಮಕರ ವಾರ್ಷಿಕ ರಾಶಿ ಭವಿಷ್ಯ 2022

ಮಕರ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ಶನಿ ದೇವರು ಜನ್ಮ ಜಾತಕದಲ್ಲಿ ಸ್ವಂತ ಮನೆಯಲ್ಲಿರುವುದರಿಂದ ಮಕರ ರಾಶಿಚಕ್ರದ ಜನರು ಸರಾಸರಿ ಮತ್ತು ಉತ್ತಮ ಸಮಯವನ್ನು ಹೊಂದಿರುತ್ತಾರೆ. ವರ್ಷದ ಮೊದಲಾರ್ಧದಲ್ಲಿ ಎಲ್ಲವೂ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಆದಾಗ್ಯೂ ಕೊನೆಯ ತ್ರೈಮಾಸಿಕದಲ್ಲಿ ವಿಷಯಗಳು ಅಸ್ತವ್ಯಸ್ತವಾಗಬಹುದು ಮತ್ತು ನೀವು ಆತಂಕಕ್ಕೆ ಒಳಗಾಗಬಹುದು. ಆದ್ದರಿಂದ ನೀವು ಉತ್ತಮ ದಿನಚರಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗಳಿಸಿ ನಡೆಯಿರಿ ಎಂದು ನಿಮಗೆ ಸಲಹೆ ನೀಡಲಾಗಿದೆ. ಮಕರ ರಾಶಿಚಕ್ರದ ಕೆಲವು ಜನರು 2022 ರ ಕೊನೆಯ ತ್ರೈಮಾಸಿಕಗಳಲ್ಲಿ ಸಣ್ಣ ಹೊಂದಾಣಿಕೆಗಳನ್ನು ಮಾಡಬೇಕಾಗಬಹುದು.

ವೃತ್ತಿಪರರು ಏಳಿಗೆ ಹೊಂದುತ್ತಾರೆ, ವ್ಯಾಪಾರ ಸ್ಥಳೀಯರು ಉತ್ತಮ ಆದಾಯವನ್ನು ಹೊಂದಿರುತ್ತಾರೆ. ಹೊಸ ಯೋಜನೆಗಳು ಮತ್ತು ಆಲೋಚನೆಗಳನ್ನು ಹೊಂದಿರುವ ಜನರು ತಮ್ಮ ಉದ್ಯಮಗಳನ್ನು ವಾಸ್ತವವಾಗಿ ಕಾರ್ಯಗತಗೊಳಿಸುತ್ತಾರೆ. ಆದಾಗ್ಯೂ, ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ, ನಿಮ್ಮ ಜಾತಕದಲ್ಲಿ ರಾಹುವಿನ ಉಪಸ್ಥಿತಿಯಿಂದಾಗಿ ಕೆಲಸದ ಸ್ಥಳದಲ್ಲಿ ಅಥವಾ ವ್ಯಾಪಾರದಲ್ಲಿ ನೀವು ಕೆಲವು ಚಿಂತೆಗಳು ಮತ್ತು ಕಠಿಣ ಸಮಯವನ್ನು ಎದುರಿಸಬೇಕಾಗಬಹುದು ಮತ್ತು ನಷ್ಟಗಳನ್ನು ಎದುರಿಸುವ ಸಾಧ್ಯತೆಯೂ ಇದೆ. ಆರೋಗ್ಯದ ಬಗ್ಗೆ ಮಾತನಾಡಿದರೆ, ಶನಿ ಗ್ರಹದ ಪ್ರಭಾವದಿಂದಾಗಿ, ವರ್ಷ 2022 ರಲ್ಲಿ ಮಕರ ರಾಶಿಚಕ್ರದ ಜನರು ತೃಪ್ತಿದಾಯಕ ಮತ್ತು ಸ್ಥಿರವಾಗಿ ಬಹುತೇಕ ಪರಿಪೂರ್ಣ ಆರೋಗ್ಯವನ್ನು ಹೊಂದಿರುತ್ತಾರೆ.

ಇದಲ್ಲದೆ, ಮಕರ ವಾರ್ಷಿಕ ರಾಶಿ ಭವಿಷ್ಯ 2022 ರಲ್ಲಿ ನಿಮ್ಮ ಮುಂದೆ ವೃತ್ತಿಜೀವನದ ಚಿತ್ರವು ಸ್ಪಷ್ಟವಾಗಿದೆ, ನಿಮ್ಮ ಆರ್ಥಿಕ ವಲಯವು ಬಲವಾಗಿರುತ್ತದೆ ಎಂದು ಊಹಿಸಲಾಗಿದೆ. ಹೆಚ್ಚುತ್ತಿರುವ ಲಾಭದೊಂದಿಗೆ, ನಿಮ್ಮ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳಲು ನಿಮಗೆ ತೊಂದರೆಯಾಗಬಹುದು. ಆದರೆ ಇದು ಅಲ್ಪಾವಧಿಗೆ ಇರುತ್ತದೆ. ಇತರ ವಿಷಯಗಳ ಬಗ್ಗೆ ಮಾತನಾಡಿದರೆ, ಗುರುವು ನಿಮ್ಮ ಮೊದಲನೇ ಮನೆಗೆ ಸಾಗಿದಾಗ ರಾಹುವು ಐದನೇ ಮನೆಗೆ ಸಾಗಣಿಸುತ್ತದೆ. ಬಹು ಮೂಲಗಳಿಂದ ಹಣವನ್ನು ಗಳಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.

ಮದುವೆ ಮತ್ತು ಸಂಬಂಧಗಳು ನಿರೀಕ್ಷೆಯಂತೆ ನಡೆಯುತ್ತವೆ ಅಂದು ಮಕರ ವಾರ್ಷಿಕ ರಾಶಿ ಭವಿಷ್ಯ 2022 ಊಹಿಸುತ್ತದೆ. ಯಾರನ್ನಾದರೂ ಪ್ರಸ್ತಾಪಿಸಲು ಯೋಜಿಸುತ್ತಿರುವವರು, ವರ್ಷದ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬಹುದು. ಏಕೆಂದರೆ ಈ ಸಮಯದಲ್ಲಿ ಶುಕ್ರ ಗ್ರಹವು ನಿಮ್ಮ ಜನ್ಮ ಜಾತಕದಲ್ಲಿ ಪ್ರವೇಶಿಸುತ್ತದೆ. ಆದಾಗ್ಯೂ, ಮಧ್ಯ ತಿಂಗಳುಗಳಲ್ಲಿ ಮಂಗಳವು ನಿಮ್ಮ ಜನ್ಮ ಜಾತಕದ ಮೇಲೆ ಪ್ರಭಾವ ಬೀರಿದಾಗ, ವಿಷಯಗಳು ಸ್ವಂತ ಕ್ಷೇತ್ರದ ಕಡೆಗೆ ಸ್ವಲ್ಪ ಆಕರ್ಷಕವಾಗಬಹುದು. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ನಿಯಂತ್ರಣದಲ್ಲಿಡಿ. ಇದರೊಂದಿಗೆ ಶನಿಯು ನಿಮ್ಮ ಐದನೇ ಮನೆಯ ಮತ್ತು ಕಾರ್ಕ ರಾಶಿಯಲ್ಲಿ ಇರುವುದರಿಂದಾಗಿ ನೀವು ಎಲ್ಲಾ ರೀತಿಯ ವಿವಾದಗಳನ್ನು ತಪ್ಪಿಸುವತ್ತ ಗಮನ ಹರಿಸಬೇಕು, ಏಕೆಂದರೆ ಆ ಸಮಯದಲ್ಲಿ ಅದು ನಿಮ್ಮ ಸಂಗಾತಿಯೊಂದಿಗೆ ಪ್ರತ್ಯೇಕತೆಗೆ ಕಾರಣವಾಗಬಹುದು.

ಮಕರ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಕುಂಭ ವಾರ್ಷಿಕ ರಾಶಿ ಭವಿಷ್ಯ 2022

ಕುಂಭ ವಾರ್ಷಿಕ ರಾಶಿ ಭವಿಷ್ಯ 2022

ಕುಂಭ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷ 2022 ರಲ್ಲಿ ಕುಂಭ ರಾಶಿಚಕ್ರದ ಜನರು ಸಂಘಟಿತ, ತೃಪ್ತಿ ಮತ್ತು ತಾಳ್ಮೆಯಿಂದಿರಬೇಕು. ಶನಿ ಗ್ರಹವು ನಿಮ್ಮ ಚಿಹ್ನೆಯಲ್ಲಿ ಇರುವುದರಿಂದಾಗಿ, ಎಲ್ಲಾ ರೀತಿಯ ನಿರ್ಬಂಧಗಳು ಮತ್ತು ಸ್ಥಿರತೆಗಳು ನಿಮ್ಮನ್ನು ಅನುಸರಿಸುತ್ತವೆ. ಇದರ ನಂತರ ಎರಡನೇ ಮನೆ ಮತ್ತು ಮೀನ ರಾಶಿಯಲ್ಲಿ ಗುರುವು ನೆಲೆಗೊಂಡಾಗ, ನಿಮ್ಮ ಜೀವನವನ್ನು ನೀವು ಉತ್ತಮ ರೀತಿಯಲ್ಲಿ ಮತ್ತು ಯಾವುದೇ ಅಡೆತಡೆಗಳಿಂದ ದೂರವಿಡುತ್ತೀರಿ. ಆದಾಗ್ಯೂ ಮಧ್ಯ ತಿಂಗಳುಗಳಲ್ಲಿ ಯುರೇನಸ್ ಗ್ರಹವು ಸಕ್ರಿಯಗೊಳ್ಳುತ್ತದೆ, ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಹಾದಿಯಲ್ಲಿ ಕೆಲವು ಏರಿಳಿತಗಳು ಉಂಟಾಗಬಹುದು ಎಂದು ಕುಂಭ ರಾಶಿ ಭವಿಷ್ಯ 2022 ಸೂಚಿಸುತ್ತಿದೆ. ಆದರೆ ಅದು ಸಾಂದರ್ಭಿಕವಾಗಿರುತದೆ ಮತ್ತು ಪೂರ್ಣ ನೊರೋಧಕ ಯೋಜನೆಗಳು ಮತ್ತು ಕಡಿಮೆ ನಿರ್ವಹಣಾ ಕೌಶಲ್ಯಗಳೊಂದಿಗೆ ನೀವು ಅದನ್ನು ಸ್ಪಷ್ಟವಾಗಿ ಮತ್ತು ಸುಲಭವಾಗಿ ದಾಟಬೇಕು.

ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದರೆ, ಕುಂಭ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವಿಷಯಗಳು ಸುಗಮವಾಗಿ ನಡೆಯುತ್ತವೆ. ನೀವು ಐಹಿಕ ಸಂಪತ್ತಿನಿಂದ ಆಶೀರ್ವದಿಸಲ್ಪಡುತ್ತೀರಿ, ಮತ್ತು ತೊಂದರೆಗಳು ಸಮುದ್ರದಲ್ಲಿ ಆಳವಾಗಿ ಮುಳುಗುತ್ತವೆ. ಕುಂಭ ರಾಶಿಚಕ್ರದ ಜನರು ವರ್ಷ 2022 ರಲ್ಲಿ ಅನೇಕ ಪ್ರಯೋಜನಕಾರಿ ಮತ್ತು ಹಣಕಾಸು ಗಳಿಸುವ ಪ್ರಯಾಣಗಳನ್ನು ಮಾಡಲಿದ್ದಾರೆ. ಏಪ್ರಿಲ್ ನಂತರ ಗುರುವು ನಿಮ್ಮ ಜಾತಕದಲ್ಲಿನ ಎರಡನೇ ಮನೆಗೆ ಸಾಗಿದಾಗ ಅದೇ ಸಂಭವಿಸಲಿದೆ. ಆದರೆ ವಜ್ರ ಹೊಳೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಹೀಗಾಗಿ ಯಾವುದರಲ್ಲೂ ಅತಿಯಾಗಿ ಹೂಡಿಕೆ ಮಾಡಬೇಡಿ ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಅದರ ಬಗ್ಗೆ ನೀವು ಅರಿತುಕೊಳ್ಳುವ ಮೊದಲೇ ನಿಮ್ಮ ಹಣವನ್ನು ನೀವು ಕಳೆದುಕೊಳ್ಳಬಹುದು.

ಪ್ರೀತಿಯ ವಿಷಯದಲ್ಲಿ ಸಮಯವು ಹೆಚ್ಚು ಅನುಕೂಲಕರವಾಗಿರುವುದಿಲ್ಲ. ಕುಂಭ ರಾಶಿಚಕ್ರದ ದಂಪತಿಗಳು ಮತ್ತು ಒಂಟಿಯಾಗಿರುವವರು ಎಲ್ಲರೂ ಪ್ರೀತಿಯಲ್ಲಿ ಉತ್ತಮ ಸಮಯವನ್ನು ಆನಂದಿಸುತ್ತಾರೆ. ಆದರೆ ನಿಮ್ಮ ಜಾತಕದಲ್ಲಿನ ಎರಡನೇ ಮನೆಯಲ್ಲಿ ಶನಿ ಗ್ರಹವು ಕುಳಿತುಕೊಂಡಾಗ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಇದು ಸಾಂದರ್ಭಿಕ ಜಗಳಗಳಿಗೆ ಕಾರಣವಾಗುವ ಕೆಲವು ಸಮಸ್ಯೆಗಳನ್ನು ತರಬಹುದು. ವೃತ್ತಿಪರರು ತಮ್ಮ ಉದ್ಯೋಗದಲ್ಲಿ ಉತ್ತಮ ಸಮಯವನ್ನು ಆನಂದಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅನ್ವೇಷಣೆಗಳ ಕಡೆಗೆ ಅವಿಭಜಿತ ಗಮನ ಮತ್ತು ಗಮನವನ್ನು ಹೊಂದಿರುತ್ತಾರೆ. ಇದರೊಂದಿಗೆ ನಿಮ್ಮ ಜಾತಕದ ಹತ್ತನೇ ಮನೆಗೆ ಶನಿ ಗ್ರಹವು ಸಾಗಿದಾಗ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸಬಹುದು, ಆದ್ದರಿಂದ ಮುಂಚಿತವಾಗಿ ಅದಕ್ಕಾಗಿ ತಯಾರಾಗಿರಿ.

ಅಂತಿಮವಾಗಿ ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿದರೆ, ಕುಂಭ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಶನಿ ಗ್ರಹವು ನಿಮ್ಮ ಜನ್ಮ ಜಾತಕದಲ್ಲಿ ಸಾಂದರ್ಭಿಕ ತೊಂದರೆಗಳನ್ನುಉಂಟುಮಾಡಬಹುದು. ನೀವು ಶೀಘ್ರದಲ್ಲೇ ಸೋಂಕಿಗೆ ಒಳಗಾಗಬಹುದು. ಆದ್ದರಿಂದ ವರ್ಷವಿಡೀ ನಿಮ್ಮ್ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು ಮತ್ತು ಬರುವ ಪ್ರತಿಯೊಂದು ಅಣ್ಣ ಪುಟ್ಟ ಸಮಸ್ಯೆಯನ್ನು ತಪ್ಪಿಸಲು ಪ್ರಯತ್ನಿಸಬೇಕು.

ಕುಂಭ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಮೀನ ವಾರ್ಷಿಕ ರಾಶಿ ಭವಿಷ್ಯ 2022

ಮೀನ ವಾರ್ಷಿಕ ರಾಶಿ ಭವಿಷ್ಯ 2022

ಮೀನ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ವರ್ಷದ ಮೊದಲ ಮತ್ತು ಅಂತ್ಯದ ವೇಳೆಗೆ ಗುರು ಗ್ರಹವು ನಿಮ್ಮ ಜನ್ಮ ಜಾತಕದಲ್ಲಿ ಪ್ರವೇಶಿಸಲಿದೆ. ಈ ಸನ್ನಿವೇಶವು , ನಿಮ್ಮ ಜೀವನದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ನೀವು ಶುಭ ಸುದ್ದಿಯನ್ನು ಪಡೆಯುತ್ತೀರಿ. ನಿಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ನೀವು ಕೆಲವು ಆನಂದದಾಯಕ ಕ್ಷಣಗಳನ್ನು ಕಳೆಯುತ್ತೀರಿ. ನಿಮ್ಮ ಜೀವನದ ಪರಿಸ್ಥಿತಿಗಳು ಸುಧಾರಿಸುತ್ತವೆ ಮತ್ತು ಬುದ್ಧಿವಂತ ಜನರೊಂದಿಗೆ ನಿಮ್ಮ ಸಂಪರ್ಕವನ್ನು ನೀವು ಹೆಚ್ಚಿಸುವಿರಿ. ನಿಮಗಾಗಿ ನೀವು ಯಾವುದೇ ಯೋಜನೆಯನ್ನು ಹೊಂದಿದ್ದಿರೋ, ಅದು ನಿರೀಕ್ಷಿಸಿದ ರೀತಿಯಲ್ಲಿ ಕಾರ್ಯಗತಗೊಳಿಸದಿರಬಹುದು. ಆದರೆ ವರ್ಷದ ಮೊದಲಾರ್ಧದಲ್ಲಿ ಅದರ ಒಂದು ಕಂಬವನ್ನು ಹಾಕಲಾಗುತ್ತದೆ. ಆದ್ದರಿಂದ ನಿಮ್ಮ ನಂಬಿಕೆ ಮತ್ತು ಭರವಸೆಯನ್ನು ಕಳೆದುಕೊಳ್ಳಬೇಡಿ ಮತ್ತು ಸಾಧ್ಯವಾದಷ್ಟು ನಿಮ್ಮ ಯೋಜನೆಗಳತ್ತ ಗಮನಹರಿಸಿ ಎಂದು ಸಲಹೆ ನೀಡಲಾಗಿದೆ.

2022 ರಲ್ಲಿ ನೀವು ವಾಸ್ತವಿಕವಾಗಿ ಮತ್ತು ಪ್ರಶಾಂತವಾಗಿರಿ. ಮೀನ ರಾಶಿಚಕ್ರದ ಸ್ಥಳೀಯರ ಪ್ರೀತಿಯು, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಬಯಸಿದ ರೀತಿಯಲ್ಲಿ ನೆಲೆಸುವುದಿಲ್ಲ. ವರ್ಷದ ಮೊಲಾರ್ಧದಲ್ಲಿ ಗುರು ಗ್ರಹವು ನಿಮ್ಮ ಜಾತಕದಲ್ಲಿ ನೆಲೆಗೊಳ್ಳುತ್ತದೆ. ಈ ಸಮಯವು ನಿಮಗೆ ಸಹಾಯಕವಾಗುವುದಿಲ್ಲ ಮತ್ತು ಸಂದರ್ಭಗಳು ಹದಗೆಡುವ ಸಾಧ್ಯತೆ ಇದೆ. ಅದು ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ. ಮೀನ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಮಧ್ಯ ತಿಂಗಳುಗಳಲ್ಲಿ ಮಂಗಳ ಮತ್ತು ಶುಕ್ರವು ನಿಮ್ಮ ಜಾತಕದಲ್ಲಿ ಸಂಯೋಜಿಸಿದಾಗ, ವಿಷಯಗಳು ಸುಧಾರಿಸಲು ಆರಂಭಿಸುತ್ತವೆ. ಆದರೆ ಪುನಃ ಗುರು ಗ್ರಹದ ಸಂಚಾರದಿಂದಾಗಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.

ವೃತ್ತಿ ಜೀವನದ ವಿಷಯದಲ್ಲಿ ಬಹಳಷ್ಟು ಮೀನ ರಾಶಿಚಕ್ರದ ಸ್ಥಳೀಯರ ತಲೆಗೆ ಬರುತ್ತದೆ. ವರ್ಷದ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಕೆಲಸದ ಸ್ಥಳದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದಾಗ್ಯೂ, ಗುರು ಗ್ರಹವು ನಿಮ್ಮ ರಾಶಿಗೆ ಪ್ರವೇಶಿಸಿದಾಗ, ನಿಮ್ಮ ವೃತ್ತಿಪರ ಜೀವನದಲ್ಲಿ ವರ್ಷದ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ನೀವು ಕೆಲವು ಪರಿಹಾರ ಮತ್ತು ಆಹ್ಲಾದಕರ ಸಮಯವನ್ನು ಆನಂದಿಸುವಿರಿ. ಇದಲ್ಲದೆ ಅಂತಹ ಪರಿಸ್ಥಿತಿಯಲ್ಲಿ ಉದ್ಯೋಗವನ್ನು ಬದಲಾಯಿಸಲು ಅಥವಾ ಹೊಸದನ್ನು ಪಡೆಯಲು ಬಯಸುತ್ತಿರುವ ಜನರು ತಮ್ಮ ಯೋಜನೆಗಳನ್ನು ಆರಂಭಿಸಬಹುದು. ಏಕೆಂದರೆ ಸಮಯವು ಅವರಿಗೆ ಸಾಕಷ್ಟು ಅನುಕೂಲಕರವಾಗಿರುತ್ತದೆ.

ಅರೋಗ್ಯ ಮತ್ತು ಆರ್ಥಿಕ ವಿಷಯದ ಬಗ್ಗೆ ಮಾತನಾಡಿದರೆ, ಮೀನ ವಾರ್ಷಿಕ ರಾಶಿ ಭವಿಷ್ಯ 2022 ಪ್ರಕಾರ, ಈ ಎರಡೂ ಪರಸ್ಪರ ಸಂಪರ್ಕವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ಅಥವಾ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಂದಾಗಿ ನಿಮ್ಮ ಸಂಪತ್ತಿನ ಬಹುಪಾಲು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ಆದಾಗ್ಯೂ, ಗುರು ಗ್ರಹವು ಹನ್ನೆರಡನೇ ಮನೆ ಮತ್ತು ಕುಂಭ ರಾಶಿಗೆ ಪ್ರವೇಶಿಸಿದಾಗ, ಅನಾರೋಗ್ಯದಿಂದ ಸ್ವಲ್ಪ ಸಮಯವನ್ನು ಆನಂದಿಸುವಿರಿ. ಆದರೆ ಸ್ವಲ್ಪ ಸಮಯದ ನಂತರ ಶಕ್ತಿಯಲ್ಲಿ ಇಳಿಕೆ, ಸೋಮಾರಿತನ ಮತ್ತು ಉತ್ಸಾಹದಲ್ಲಿ ಕೊರತೆಯನ್ನು ಅನುಭವಿಸುವಿರಿ.

ಮೀನ ವಾರ್ಷಿಕ ರಾಶಿ ಭವಿಷ್ಯ 2022 ಬಗ್ಗೆ ವಿವರವಾಗಿ ಓದಲು, ಇಲ್ಲಿ ಕ್ಲಿಕ್ ಮಾಡಿ

ಎಲ್ಲಾ ಹನ್ನೆರಡು ರಾಶಿಗಳಿಗೆ ನಾವು ರಾಶಿ ಭವಿಷ್ಯದ ಬಗ್ಗೆ ಹೆಚ್ಚು ಬರೆದಿದ್ದೇವೆ. ಜೀವನದ ವಿವಿಧ ಅಂಶಗಳ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಪ್ರಶ್ನೆಗಳಿದ್ದರೆ, ನೀವು ಮಾಡಬಹುದು ನಮ್ಮ ಜ್ಯೋತಿಷಿಗಳೊಂದಿಗೆ ಚಾಟ್ ಮಾಡಿ ಅಥವಾ ಕರೆಯಲ್ಲಿ ನಮ್ಮ ಜ್ಯೋತಿಷಿಗಳೊಂದಿಗೆ ಮಾತನಾಡಿ.

ಕೃತಿಸ್ವಾಮ್ಯ 2022 ಕೋಡ್ ಯೇತಿ ಸಾಫ್ಟ್‌ವೇರ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ