ಪೊರಕೆ ವಾಸ್ತು ಸಲಹೆ – Broom Vaastu Tips in Kannada

ಪೊರಕೆಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳುವ ಮೂಲಕ ಮನೆಯ ವಾಸ್ತು ದೋಷಗಳನ್ನು ತೊಡೆದುಹಾಕಿ

 

Broom vastu

ಪೊರಕೆಯನ್ನು ಈ ರೀತಿ ಇಡಬೇಡಿ, ಪೊರಕೆಯನ್ನು ದಾಟಬೇಡಿ, ಪೊರಕೆ ಇಲ್ಲಿ ಏಕೆ ಬಿದ್ದಿದೆ? ಕತ್ತಲು ಆದ ನಂತರ ಮನೆಯಲ್ಲಿ ಪೊರಕೆಯನ್ನು ಬಳಸಬಾರದು! ಇಂತಹ ಮಾತುಗಳನ್ನು ನಮ್ಮ ಹಿರಿಯರಿಂದ ನಾವು ಕೇಳುತ್ತಿರುತ್ತೇವೆ. ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ಪೊರಕೆಗಳು ನಮ್ಮ ಮನೆಯ ಪರಿಸ್ಥಿತಿಯನ್ನು ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬ ಸತ್ಯ ನಮ್ಮ ಹಿರಿಯರಿಗೆ ತಿಳಿದಿದೆ. ಇದರ ಹಿಂದೆ ಅನೇಕ ನಂಬಿಕೆಗಳಿವೆ ಮತ್ತು ಇದು ನಮ್ಮ ಮನೆಯ ವಾಸ್ತು ಮೇಲೆ ಕೆಟ್ಟ ಮತ್ತು ಒಳ್ಳೆಯ ಎರಡೂ ಪ್ರಭಾವವನ್ನು ಬೀರುತ್ತದೆ. 

ವಾಸ್ತು ಶಾಸ್ತ್ರವು ಜ್ಯೋತಿಷ್ಯದ ಮತ್ತೊಂದು ಆಯಾಮವಾಗಿದ್ದು ಅದು ಮನೆಗೆ ಪ್ರವೇಶಿಸುವ ನಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಗಳನ್ನು ನಿಯಂತ್ರಿಸುತ್ತದೆ. ಸರಿಯಾದ ವಾಸ್ತುವನ್ನು ಹೊಂದಿರುವುದು ಒಬ್ಬ ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕತೆ, ಸಂತೋಷ, ಸಂಪತ್ತು, ಅಭಿವೃದ್ಧಿ, ಮಾನಸಿಕ ಶಾಂತಿ, ದೈಹಿಕ ಅರೋಗ್ಯ, ಆರ್ಥಿಕ ಸುಧಾರಣೆ ಇತ್ಯಾದಿಯನ್ನು ತರುತ್ತದೆ. ಆದ್ದರಿಂದ ಮನೆಯ ವಸ್ತುವಿನ ಮೇಲೆ ಪರಿಣಾಮ ಬೀರುವಂತಹ ಅನೇಕ ಇತರರ ವಿಷಯಗಳಲ್ಲಿ ಪೊರಕೆ ಅತ್ಯಂತ ಮುಖ್ಯವಾದದ್ದು. 

ಪೊರಕೆಗಳನ್ನು ಸರಿಯಾದ ಸ್ಥಳದಲ್ಲಿ ಅಥವಾ ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮತ್ತು ನಿಮ್ಮ ವಾಸಸ್ಥಳದಲ್ಲಿ ವಾಸ್ತು ದೋಷವಿದ್ದಲ್ಲಿ, ಅದು ಸಂಪತ್ತು, ಆರೋಗ್ಯ, ಮದುವೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಹೆಚ್ಚಿನವುಗಳ ದುರುದ್ವೇಷಪೂರಿತ ಸ್ಥಿತಿಗಳಿಗೆ ಕಾರಣವಾಗಬಹುದು. ನಮ್ಮ ಜ್ಯೋತಿಷಿಗಳೊಂದಿಗೆ ಸರಳವಾಗಿ ಮಾತನಾಡುವ ಮೂಲಕ ವಾಸು ದೋಷವನ್ನು ನಿಭಾಯಿಸಬಹುದು, ಆದರೆ ನೀವು ಕೆಲವು ಸರಳ ಪರಿಹಾರ ಕ್ರಮಗಳನ್ನು ಅಳವಡಿಸಿಕೊಂಡರೆ ಮತ್ತು ವಾಸ್ತು ದೋಷದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. 

ಪೊರಕೆ ಮಹತ್ವ 

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಬಹಳ ಶುಭಕಾರವೆಂದು ಪರಿಗಣಿಸಲಾಗಿದೆ. ಅದ್ದಕ್ಕಾಗಿಯೇ ಪೊರಕೆಯನ್ನು ಯಾವ ದಿನ ಖರೀದಿಸಬೇಕು ಮತ್ತು ಯಾವ ದಿನ ಖರೀದಿಸಬಾರದು ಎಂಬುದರ ಬಗ್ಗೆಯೂ ವಿವರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಶ್ರೀ ಲಕ್ಷ್ಮಿ ದೇವಿಯು ವಿಷ್ಣು ಲೋಕಕ್ಕೆ ಹೋದಾಗ, ಆ ಸ್ಥಳವನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಿದರು. ಇದರಿಂದಾಗಿ ಅದನ್ನು ಸರಿಯಾಗಿ ಬಳಸುವುದರಿಂದ ಮತ್ತು ಸರಿಯಾದ ಸ್ಥಳದಲ್ಲಿ ಇಡುವುದರಿಂದ ನೀವು ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಇಡಲು ಮನೆಯ ನೈಋತ್ಯ ದಿಕ್ಕು ಅಂದರೆ ದಕ್ಷಿಣಪಶ್ಚಿಮ ದಿಕ್ಕು ಅತ್ಯುತ್ತಮ. ಆದಾಗ್ಯೂ ಪೊರಕೆಯನ್ನು ಈಶಾನ್ಯ ದಿಕ್ಕಿನಲ್ಲಿ ಇಡಬಾರದು. 

ಪೊರಕೆಯನ್ನು ಮರೆಮಾಡಿ ಇಡಬೇಕು

ನಮ್ಮಲ್ಲಿ ಹೆಚ್ಚಿನವರು ತಮ್ಮ ಸಂಪತ್ತನ್ನು ಮರೆಮಾಡಿ ಇಡುತ್ತಾರೆ, ಅದರ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಏಕೆಂದರೆ ಇದಕ್ಕೆ ಕಾರಣ ಲಕ್ಷ್ಮಿ ಹೊರಟುಹೋಗುತ್ತಾಳೆ ಎಂಬ ನಂಬಿಕೆ. ಅದರಂತೆಯೇ ಪೊರಕೆಯನ್ನು ಸಹ ಯಾರಿಗೂ ಕಾಣದಂತೆ ಮರೆಯಲ್ಲಿಡಬೇಕು ಎಂದು ಸೂಚಿಸಲಾಗುತ್ತದೆ. ಇದಲ್ಲದೆ ಪೊರಕೆಯನ್ನು ನೇರವಾಗಿ ನಿಂತಿರುವಂತೆ ಕೂಡ ಇಡಬಾರದು. ಇದನ್ನು ಯಾವಾಗಲೂ ಕೆಳಗೆ ವಿಶ್ರಾಂತಿ ಸ್ಥಿಯಲ್ಲಿಡಬೇಕು. 

ಪೊರಕೆಯನ್ನು ಮೆಟ್ಟಲು, ತೆರೆದ ಮಾಡಿ ಅಥವಾ ಬಾಲ್ಕನಿಯಲ್ಲಿ ಸಹ ಇಡಬಾರದು. ಇದಲ್ಲದೆ ಪೊರಕೆಯನ್ನು ಮರೆಮಾಚುವಾಗ ಅದು ಯಾರ ಕಾಲುಕೆಳಗೆಯೂ ಬರಬಾರದು ಅಥವಾ ಅದರ ಮೇಲೆ ಕಾಲು ಇಡಬಾರದು ಎಂದು ಸಹ ಖಚಿತಪಡಿಸಿಕೊಳ್ಳಿ. ಏಕೆಂದರೆ ಹಾಗೆ ಮಾಡುವುದರಿಂದ ನೀವು ಲಕ್ಷ್ಮಿ ದೇವಿಯನ್ನು ಅಗೌರವಿಸುತ್ತಿದ್ದೀರಿ ಎಂದು ನಂಬಲಾಗಿದೆ. 

ರಾತ್ರಿಯಲ್ಲಿ ಪೊರಕೆಯನ್ನು ಎಲ್ಲಿ ಇಡಬೇಕು?

ಆಸ್ಟ್ರೋಟಾಕ್‌ನ ಪರಿಣಿತ ಜ್ಯೋತಿಷಿಗಳು ಪೊರಕೆಯನ್ನು ಮನೆಯ ಹೊರಗೆ, ಮುಖ್ಯವಾಗಿ ರಾತ್ರಿಯ ಪ್ರವೇಶದ್ವಾರದಲ್ಲಿ ಇರಿಸುವುದನ್ನು ಪರಿಗಣಿಸಬಹುದು ಎಂದು ಸೂಚಿಸುತ್ತಾರೆ. ಆದಾಗ್ಯೂ, ನೀವು ಹೆಚ್ಚಿನ ಕಾಲ್ನಡಿಗೆಯೊಂದಿಗೆ ಬಿಡುವಿಲ್ಲದ ಸ್ಥಳದಲ್ಲಿ ವಾಸಿಸುತ್ತಿದ್ದರೆ ಹಾಗೆ ಮಾಡಲು ಸಲಹೆ ನೀಡಲಾಗುವುದಿಲ್ಲ. ಮುಖ್ಯ ದ್ವಾರದ ಹೊರಗೆ ಪೊರಕೆಯನ್ನು  ಇರಿಸುವ ಸಂಪೂರ್ಣ ಉದ್ದೇಶವೆಂದರೆ ಅದು ನಿಮ್ಮನ್ನು ನಕಾರಾತ್ಮಕ ಕಂಪನಗಳಿಂದ ರಕ್ಷಿಸುತ್ತದೆ. ಆದಾಗ್ಯೂ, ಸೂರ್ಯೋದಯಕ್ಕೆ ಮುಂಚಿತವಾಗಿ ಪೊರಕೆಯನ್ನು ಮನೆಯೊಳಗೆ ತೆಗೆದುಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳಬೇಕು. 

ನೀವು ಯಾವುದೇ ಕಾರಣಕ್ಕಾಗಿ ಹೊಸ ಪೊರಕೆ ಖರೀದಿಸಲು ಬಯಸಿದರೆ, ವಾಸ್ತು ಶಾಸ್ತ್ರವನ್ನು ಅನುಸರಿಸುವುದು ನಿಮಗೆ ಉತ್ತಮ.  ವಾಸ್ತುಶಾಸ್ತ್ರದ ಪ್ರಕಾರ, ಶನಿವಾರದಂದು ಪೊರಕೆಗಳನ್ನು ಖರೀದಿಸಲು ಅಥವಾ ಬದಲಾಯಿಸಲು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ ಕೃಷ್ಣ ಪಕ್ಷದಂದು ನೀವು ಹೊಸ ಪೊರಕೆಯನ್ನು ಖರೀದಿಸುವುದು ಉತ್ತಮ, ಇದಕ್ಕೆ ವಿರುದ್ಧವಾಗಿ  ಶುಕ್ಲ ಪಕ್ಷದಂದು ಅದನ್ನು ಖರೀದಿಸುವುದು ಒಳ್ಳೆಯದಲ್ಲ. 

ಇದರ ಹೊರತಾಗಿ ಸಂಜೆಯ ವೇಳೆ ಪೊರಕೆಯನ್ನು ಬಳಸಬಹುದೇ ಎಂಬುದು ಸಹ ಒಂದು ಪ್ರಶ್ನೆ

ಆಸ್ಟ್ರೋಟಾಕ್ ನ ಪರಿಣಿತ ಜ್ಯೋತಿಷಿಗಳ ಪ್ರಕಾರ, ದಿನದ ಮೊದಲ ನಾಲ್ಕು ಗಂಟೆಗಳು ಮನೆಯನ್ನು ಸ್ವಚ್ಛಗೊಳಿಸಲು ಉತ್ತಮವಾಗಿರುತ್ತವೆ ಅಂದರೆ ಸೂರ್ಯೋದಯದ ಸಮಯ. ಮತ್ತೊಂದೆಡೆ, ದಿನದ ಕೊನೆಯ ನಾಲ್ಕು ಗಂಟೆಗಳಲ್ಲಿ ನೀವು ಮನೆಯನ್ನು ಸ್ವಚ್ಛಗೊಳಿಸಲು   ಪೊರಕೆಯನ್ನು ಬಳಸಬಾರದು ಅಂದರೆ ಸೂರ್ಯಾಸ್ತದ ಸಮಯ. 

ಸಾಮಾನ್ಯವಾಗಿ ಯಾವುದೇ ಕೆಲಸದಲ್ಲಿ ತೊಡಗಿರುವ ಜನರು ಬೆಳಿಗ್ಗೆ ಅಥವಾ ದಿನದ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ಸಾಯಂಕಾಲ ಮನೆಗೆ ಬಂದ ನಂತರ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಅಂತಹ ಸಂದರ್ಭದಲ್ಲಿ ಪೊರಕೆಯ ಬದಲು ನೀವು ಒದ್ದೆಯಾದ ಬಟ್ಟೆಯನ್ನು ಬಳಸುವ ಮೂಲಕ ಮನೆಯನ್ನು ಸ್ವಚ್ಛಗೊಳಿಸಬಹುದು. ಇದರ ಹೊರತಾಗಿ ಪೊರಕೆಯನ್ನು ಬಳಸಲೇ ಬೇಕೆಂಬ ಸನ್ನಿವೇಶದಲ್ಲಿ ಮನೆಯ ಕಸವನ್ನು ಮನೆಯಿಂದ ಹೊರಗೆ ಎಸೆಯಬಾರದು ಎಂದು ಸಲಹೆ ನೀಡಲಾಗುತ್ತದೆ. ಬೆಳಿಗ್ಗೆ ಅದನ್ನು ಎಸೆಯಬಹುದು. 

ನೆನಪಿಡುವ ಇತರ ಸಲಹೆಗಳು

  • ಯಾರಾದರೂ ಮನೆಯಿಂದ ಹೊರಹೋದ ತಕ್ಷಣವೇ ಮನೆಯಲ್ಲಿ ಕಸ ಗುಡಿಸಬಾರದು. ಏಕೆಂದರೆ ಇದು ಯಾವುದೇ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಪರಿಗಣಿಸಲಾಗಿದೆ. 
  • ನೀವು ಮನೆಯನ್ನು ಬದಲಾಯಿಸಿದರೆ, ಹೊಸ ಮನೆಯನ್ನು ಸ್ವಚ್ಛಗೊಳಿಸಲು ಹೊಸ ಪೊರಕೆಯನ್ನು ಬಳಸಲು ಸೂಚಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಮಾಡುವುದು ಉತ್ತಮ ಹೆಜ್ಜೆ. 
  • ಮನೆಯಲ್ಲಿ ಕಸ ಗುಡಿಸುವಾಗ ಪೊರಕೆಯಿಂದ ನಿಮ್ಮ ಕಾಲುಗಳ ಧೂಳನ್ನು ಒರಸುವುದನ್ನು ತಪ್ಪಿಸಿ. ಏಕೆಂದರೆ ವಾಸ್ತು ಶಾಸ್ತ್ರದ ಪ್ರಕಾರ ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿ ಕೋಪಗೊಳ್ಳುತ್ತಾರೆ ಎಂದು ನಂಬಲಾಗುತ್ತದೆ. 
  • ವಾಸ್ತುಶಾಸ್ತ್ರದ ಪ್ರಕಾರ ದೀಪಾವಳಿ ಪರ್ವದಲ್ಲಿ  ಪೊರಕೆಯನ್ನು ಖರೀದಿಸುವ ನಂಬಿಕೆಯೂ ಇದೆ. 

ಈ ಲೇಖನವು ನಿಮಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಎಂದು ನಾವು ಭಾವಿಸುತ್ತೇವೆ. ಧನ್ಯವಾದ!

 3,889 

Posted On - March 14, 2022 | Posted By - Anita Saini | Read By -

 3,889 

are you compatible ?

Choose your and your partner's zodiac sign to check compatibility

your sign
partner's sign

Connect with an Astrologer on Call or Chat for more personalised detailed predictions.

Our Astrologers

21,000+ Best Astrologers from India for Online Consultation