ಕುಂಭ ರಾಶಿಯಲ್ಲಿ ಬುಧ ಸಂಕ್ರಮಣ – Mercury Transit in Aquarius in Kannada

ಬುಧ ಗ್ರಹವು ಮಾರ್ಚ್ 6, 2022 ರಂದು, ಕುಂಭ ರಾಶಿಗೆ ಸಾಗಲಿದೆ. ಈ ಲೇಖನದ ಮೂಲಕ ಎಲ್ಲಾ ಹನ್ನೆರಡು ರಾಶಿಗಳ ಮೇಲೆ ಈ ಸಂಚಾರದ ಪರಿಣಾಮವನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ಸಾಗಣೆಯು ಹನ್ನೆರಡು ರಾಶಿಗಳ ಸ್ಥಳೀಯರ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ತರಲಿದೆ. 6 ಮಾರ್ಚ್, 2022 ರಂದು, 11 ಗಂಟೆ 31 ನಿಮಿಷಕ್ಕೆ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತದೆ . ಮುಂದಿನ ವರ್ಷದ ವರೆಗೆ ಇದೇ ರಾಶಿಯಲ್ಲಿ ನೆಲೆಗೊಂಡಿರಲಿದೆ. 

ಬುಧವು ಬ್ಯಾಂಕಿಂಗ್, ಅಕೌಂಟೆನ್ಸಿ, ಮಾರ್ಕೆಟಿಂಗ್, ಕಂಪ್ಯೂಟರ್, ನಟನೆ, ಹಾಸ್ಯ ಮತ್ತು ಸಂಗೀತವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಸಂಚಾರದಿಂದಾಗಿ ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿಯ ಬಗ್ಗೆ ಪರಿಗಣಿಸುವ ಸಂಪೂರ್ಣ ಸಾಧ್ಯತೆಯೂ ಇದೆ. ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳದೆ ಬುಧ ಸಂಚಾರವು ಎಲ್ಲಾ ರಾಶಿಗಳ ಮೇಲೆ ಏನು ಪರಿಣಾಮ ಬೀರಲಿದೆ  ಎಂಬುದನ್ನು ತಿಳಿಯೋಣ. 

ಮೇಷ/Aries

ಬುಧ ಗ್ರಹವು ಮೇಷ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಆರನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ನಿಮ್ಮ ಹನ್ನೊಂದನೇ ಮನೆಗೆ ಗೋಚರಿಸುತ್ತದೆ. 

ವೈಯಕ್ತಿಕವಾಗಿ ಮೇಷ  ರಾಶಿಚಕ್ರದ ಸ್ಥಳೀಯರ ಮಾತನಾಡುವ ಸಾಮರ್ಥ್ಯವು ಸುಧಾರಿಸಬಹುದು. ನಿಮ್ಮ ಸಂಬಂಧದ ಬಗ್ಗೆ ಮಾತನಾಡಿದರೆ, ನಿಮ್ಮ ಸುತ್ತಲಿನ ಜನರೊಂದಿಗಿನ ನಿಮ್ಮ ಸಂಬಂಧವು (ಸ್ನೇಹಿತರು, ಒಡಹುಟ್ಟಿದವರು) ಬಲಗೊಳ್ಳುವ ಸಂಪೂರ್ಣ ಸಾಧ್ಯತೆ ಇದೆ. ಪ್ರೀತಿಯ ಸಂಬಂಧವನ್ನು ಹೊಂದಿರುವ ಮೇಷ ರಾಶಿಚಕ್ರದ ಸ್ಥಳೀಯರು ತಮ್ಮ ಪ್ರೀತಿ ಜೀವನದಲ್ಲಿ ಕೆಲವು ಏರಿಳಿತಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಸಂಗಾತಿಯೊಂದಿಗಿನ ಯಾವುದೇ ರೀತಿಯ ಜಗಳ ಅಥವಾ ವಿವಾದವನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುತ್ತದೆ. 

ಆರ್ಥಿಕ ಜೀವನದ ಬಗ್ಗೆ ಮಾತನಾಡಿದರೆ, ಉದ್ಯೋಗದಲ್ಲಿ ತೊಡಗಿರುವ ಮೇಷ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಅನುಕೂಲಕರವಾಗಿರಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ನೀವು ಫಲಿತಾಂಶಗಳನ್ನು ಪಡೆಯುವಿರಿ. ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಅನೇಕ ಅವಕಾಶಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಆದಾಯದ ಅನೇಕ ಮೂಲಗಳು ಹೆಚ್ಚಾಗುವ ಸಂಪೂರ್ಣ ಸಾಧ್ಯತೆಯೂ ಇದೆ. 

ಮೇಷ ರಾಶಿಚಕ್ರದ ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಶಿಕ್ಷಣದಲ್ಲಿ ಉತ್ತಮ ಪ್ರದರ್ಶವನ್ನು ಮಾಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಬುಧ ಸಂಚಾರದ ಸಮಯದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯೂ ಪ್ರಬಲವಾಗಿದೆ. 

ಪರಿಹಾರ – ಬುಧವಾರದಂದು ಗಣೇಶ ದೇವರನ್ನು ಪೂಜಿಸುವುದು ಮೇಷ ರಾಶಿಚಕ್ರದ ಸ್ಥಳೀಯರಿಗೆ ಉತ್ತಮವೆಂದು ಸಾಬೀತಾಗುತ್ತದೆ. 

ವೃಷಭ/Taurus

ಬುಧ ಗ್ರಹವು ವೃಷಭ ರಾಶಿಚಕ್ರದ ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಈ ಸಮಯದಲ್ಲಿ  ಇದು ನಿಮ್ಮ ಹತ್ತನೇ ಮನೆಗೆ ಸಾಗಲಿದೆ. 

ವೈಯಕ್ತಿಕವಾಗಿ, ಸಂಚಾರದ ಪರಿಣಾಮದಿಂದಾಗಿ ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವು ಈ ಸಮಯದಲ್ಲಿ ಸುಧಾರಿಸುತ್ತದೆ. ಪರಿಣಾಮವಾಗಿ ಕುಟುಂಬದ ವಾತಾವರಣವು ಸಂತೋಷವಾಗಿ ಕಂಡುಬರುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ವೃಷಭ ರಾಶಿಚಕ್ರದ ಸ್ಥಳೀಯರು ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. 

ಆರ್ಥಿಕ ವಿಷಯದ ಬಗ್ಗೆ ಮಾತನಾಡಿದರೆ, ಈ ಅವಧಿಯು ನಿಮಗೆ ಸಾಕಷ್ಟು ಪ್ರಯೋಜನಕಾರಿ ಎಂದು ಸಾಬೀತಾಗಬಹುದು. ವ್ಯಾಪಾರದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ಪ್ರಯೋಜನಕಾರಿ ಒಪ್ಪಂದಗಳನ್ನು ಪಡೆಯಬಹುವುದು. ಅಲ್ಪಾವಧಿಯ ಹೂಡಿಕೆ ಮಾಡಲು ಇದು ನಿಮಗೆ ಉತ್ತಮ ಸಮಯ. ಏಕೆಂದರೆ ಈ ಸಮಯದಲ್ಲಿ ನೀವು ಉತ್ತಮ ಲಾಭವನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಉದ್ಯೋಗದಲ್ಲಿ ತೊಡಗಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ  ಉತ್ತಮ ಹಿಡಿತವನ್ನು ಹೊಂದಿರುತ್ತಾರೆ. ನಿಮ್ಮ ಪ್ರತಿಯೊಂದು ಕೆಲಸವನ್ನು ನೀವು ಸಮಯಕ್ಕಿಂತ ಮೊದಲೇ ಪೂರ್ಣಗಳಿಸಲು ಪ್ರಯತ್ನಿಸುವುವಿರಿ. ಕೌಟುಂಬಿಕ ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ಕುಟುಂಬದ ಸದಸ್ಯರ ಬೆಂಬಲವನ್ನು ಪಡೆಯುತ್ತಾರೆ. 

ಪರಿಹಾರ –  ವಿಷ್ಣು  ದೇವರನ್ನು ಪೂಜಿಸುವುದು ಮತ್ತು ಅವರ ದಶಾವತಾರ ಕಥೆಗಳನ್ನು ಕೇಳುವುದು ಅತ್ಯಂತ ಪ್ರಯೋಜನಕಾರಿ ಎಂದು  ಸಾಬೀತಾಗುತ್ತದೆ. 

ಮಿಥುನ/Gemini 

ಬುಧ ಗ್ರಹವು ಮಿಥುನ ರಾಶಿಚಕ್ರದ ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಈ ಸಮಯದಲ್ಲಿ ಇದು ಮಿಥುನ ರಾಶಿಚಕ್ರದ ಒಂಬತ್ತನೇ ಮನೆಗೆ ಸಾಗಲಿದೆ. 

ವೈಯಕ್ತಿಕವಾಗಿ, ಬುಧ ಸಂಚಾರದ ಸಮಯದಲ್ಲಿ ಮಿಥುನ ರಾಶಿಚಕ್ರದ ಜನರು ತುಂಬಾ ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸಬಹುದು.  ಈ ಅವಧಿಯಲ್ಲಿ, ಪುರಾಣ ಮತ್ತು ವಿಭಿನ್ನ ಶತಮಾನಗಳ ಬಗ್ಗೆ ಜ್ಞಾನವನ್ನು ಗಳಿಸುವತ್ತ ನಿಮ್ಮ ಒಲವು ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಸಾಮಾಜಿಕ ವಲಯ ಹೆಚ್ಚಾಗುತ್ತದೆ. ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ನೀವಿಬ್ಬರು ಉತ್ತಮ ಸಮಯವನ್ನು ಕಳೆಯಬಹದು. 

ವೃತ್ತಿಪರವಾಗಿ, ಕೆಲಸದ ಸ್ಥಳದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಿತಾಂಶಗಳನ್ನು ನೀವು ಪಡೆಯುವಿರಿ. ಆರ್ಥಿಕವಾಗಿ ಲಾಭವನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗುವಿರಿ. ವ್ಯಾಪಾರದಲ್ಲಿ ತೂಡಗಿರುವ ಜನರು ಈ ಸಮಯದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಲು ಯಾವುದೇ ದೊಡ್ಡ ಹೂಡಿಕೆಯನ್ನು ಮಾಡಬಹುದು. ವಿದೇಶ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಮಿಥುನ ರರಾಶಿಚಕ್ರದ ಜನರು ಈ ಸಮಯದಲ್ಲಿ ಉತ್ತಮ ಲಾಭವನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. ಈ ಸಮಯದಲ್ಲಿ ನಿಮ್ಮ ಸಂವಹನ ಕೌಶಲ್ಯವೂ ಸುಧಾರಿಸುತ್ತದೆ. ಬುಧನ ಸಂಚಾರದ ಪರಿಣಾಮದಿಂದಾಗಿ ಮಿಥುನ ರಾಶಿಚಕ್ರದ ಸ್ಥಳೀಯರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. 

ಪರಿಹಾರ – ಉತ್ತಮ ಗುಣಮಟ್ಟದ ಪಚ್ಛೆ ರತ್ನವನ್ನು ಚಿನ್ನದ ಉಂಗುರದಲ್ಲಿ ತಯಾರಿಸಿ ಅನಾಮಿಕ ಬೆರಳಿನಲ್ಲಿ ಧರಿಸುವುದು ನಿಮಗೆ ಪ್ರಯೋಜನಕಾರಿಯಾಗಲಿದೆ. 

ಕರ್ಕ/Cancer  

ಬುಧ ಗ್ರಹವು ಕರ್ಕ ರಾಶಿಚಕ್ರದ ಸ್ಥಳೀಯರ ಮೂರನೇ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಸಮಯದಲ್ಲಿ ಬುಧ ಗ್ರಹವು ಮಿಥುನ ರಾಶಿಚಕ್ರದ ಸ್ಥಳೀಯರ ಎಂಟನೇ ಮನೆಗೆ ಸಾಗಲಿದೆ. 

ವೈಯಕ್ತಿಕವಾಗಿ, ಈ ಸಮಯದಲ್ಲಿ ಕರ್ಕ ರಾಶಿಚಕ್ರದ ಸ್ಥಳೀಯರ ಮನಸ್ಥಿತಿಯು ಸುಧಾರಿಸುತ್ತದೆ ಮತ್ತು ಮನೋಬಲವು ಹೆಚ್ಚಾಗುತ್ತದೆ. ಇದರಿಂದಾಗಿ ಜೀವನದ ಯಾವುದೇ ಸವಾಲನ್ನು ಎದುರಿಸುವಲ್ಲಿ  ಸಾಮರ್ಥ್ಯವನ್ನು ಅನುಭವಿಸಬಹುದು. ಈ ಸಮಯದಲ್ಲಿ ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನಿಸಬಹುದು. ವೈವಾಹಿಕ ಜನರು ಈ ಸಮಯದಲ್ಲಿ ಉತ್ತಮ ಸಮಯವನ್ನು ಕಳೆಯುತ್ತಾರೆ. ಈ ಸಮಯದಲ್ಲಿ ನಿಮ್ಮ ಸುತ್ತಲಿನ ಜನರೊಂದಿಗಿನ ನಿಮ್ಮ ಸಂಬಂಧವು ಬಲಗೊಳ್ಳಬಹುದು.  ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಪ್ರದರ್ಶನ ಮಾಡುತ್ತಾರೆ. 

ವೃತ್ತಿ  ಜೀವನದ ಬಗ್ಗೆ ಮಾತನಾಡಿದರೆ, ಈ ಸಮಯದಲ್ಲಿ ವೃತ್ತಿಪರ ಜೀವನದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಏಕೆಂದರೆ ಈ ಸಂಚಾರದ ಸಮಯದಲ್ಲಿ ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಯಾವುದೇ ಪಿತೂರಿಗೆ ಬಲಿಯಾಗಬಹುದು. ಮತ್ತೊಂದೆಡೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಈ ಸಮಯವೂ ಅನುಕೂಲಕರವಾಗಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಕರ್ಕ ರಾಶಿಚಕ್ರದ ಸ್ಥಳೀಯರು ಈ ಸಂಚಾರದ ಸಮಯದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಪ್ರಬಲ ಸಾಧ್ಯತೆ ಇದೆ. ಆದರೆ ಈ ಸಮಯದಲ್ಲಿ ಯಾವುದೇ ರೀತಿಯ ಹಣಕಾಸಿನ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. 

ಪರಿಹಾರ – ತುಳಸಿ ಗಿಡವನ್ನು ನೆಟ್ಟು ಅದನ್ನು ಆರೈಕೆ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. 

ಸಿಂಹ/Simha  

ಬುಧ ಗ್ರಹವು ಸಿಂಹ ರಾಶಿಚಕ್ರದ ಸ್ಥಳೀಯರ ಎರಡನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಸಮಯದಲ್ಲಿ ಇದು ನಿಮ್ಮ ಏಳನೇ ಮನೆಗೆ ಸಾಗುತ್ತದೆ. 

ವೈಯಕ್ತಿಕವಾಗಿ, ಬುಧ ಸಂಚಾರದ ಪರಿಣಾಮದಿಂದಾಗಿ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ಜೀವನವು ಸಾಕಷ್ಟು ಸಂತೋಷದಿಂದ ತುಂಬಿರುತ್ತದೆ. ಈ ಅವಧಿಯಲ್ಲಿ ಕುಟುಂಬದ ಸದಸ್ಯರೊಂದಿಗೆ ಎಲ್ಲಾದರೂ ಹೊರಗೆ ಹೋಗಲು ಸಹ ನೀವು ಯೋಜಿಸಬಹುದು. ಇದಲ್ಲದೆ ನಿಮ್ಮ ಸಾಮಾಜಿಕ ವಲಯವು ಸಹ ಹೆಚ್ಚಾಗುತ್ತದೆ. ಇದರಿಂದಾಗಿ ನಿಮ್ಮ ಸುತ್ತಲಿನ ವಾತಾವರಣವು ಧನಾತ್ಮಕವಾಗಿರುತ್ತದೆ. 

ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಮಯವೂ ಅನುಕೂಲಕರವಾಗಿರುತ್ತದೆ ಎಂದು ಸಾಬೀತಾಗಬಹುದು. ಮಾರ್ಕೆಟ್ನಲ್ಲಿ ನಿಮ್ಮ ಪ್ರತಿಷ್ಠೆ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ತೊಡಗಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಹೊಸ ಎತ್ತರವನ್ನು ಮುಟ್ಟುವಲ್ಲಿ ಯಶಸ್ವಿಯಾಗಬಹುದು. ಸ್ವಂತ ವ್ಯಾಪಾರವನ್ನು ಮಾಡುತ್ತಿರುವ ಜನರು ತಮ್ಮ ವ್ಯಾಪಾರವನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ರಚಿಸಬಹುದು ಮತ್ತು ಇದರಿಂದಾಗಿ ಸಾಕಷ್ಟು ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. 

ಪರಿಹಾರ – ಪ್ರತದಿನ ಬೆಳಿಗ್ಗೆ ಗಜೇಂದ್ರ ಮೋಕ್ಷ ಸ್ತೋತ್ರಂ ಅನ್ನು ಪಠಿಸುವುದು ನಿಮಗೆ ಪ್ರಯೋಜನಕಾರಿ. 

ಕನ್ಯಾ/Virgo 

ಬುಧ ಗ್ರಹವು ಕನ್ಯಾ ರಾಶಿಚಕ್ರದ ಸ್ಥಳೀಯರ ಮೊದಲನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಆರನೇ ಮನೆಗೆ ಪ್ರವೇಶಿಸುತ್ತದೆ.  

ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ  ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗೆ ಒಳಗಾಗಬಹುದು. ದೀರ್ಘಕಾಲದ ರೋಗಕ್ಕೆ ಒಳಗಾಗಿರುವ ಜನರ ರೋಗವು ಇನ್ನಷ್ಟು ಹೆಚ್ಚಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಸಮಯ ಸಾಕಷ್ಟು ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿರುವ ಕನ್ಯಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಂಚಾರವು ಅನುಕೂಲಕರವಾಗಿರುತ್ತದೆ ಮತ್ತು ತಮ್ಮ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. 

ಆರ್ಥಿಕ ವಿಷಯದ ಬಗ್ಗೆ ಮಾತನಾಡಿದರೆ,  ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ. ಈ ಸಮಯದಲ್ಲಿ ಯಾವುದೇ ರೀತಿಯ ಹಣಕಾಸಿನ ಹೂಡಿಕೆಯನ್ನು ತಪ್ಪಿಸವುದು ನಿಮಗೆ ಉತ್ತಮ.  ವೃತ್ತಿಪರವಾಗಿ, ಕೆಲಸದ ಸ್ಥಳದಲ್ಲಿ ಯಾವುದೇ ವಿಷಯದಿಂದಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ವಿವಾದದ ಸಾಧ್ಯತೆ ಇದೆ.  ತಮ್ಮ ಕೆಲಸವನ್ನು ಬದಲಾಯಿಸಲು ಯೋಜಿಸುತ್ತಿರುವ ಜನರು ಈ ಸಮಯದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. 

ಪರಿಹಾರ – ನಪುಂಸಕರಿಗೆ ಹಸಿರು ಬಣ್ಣದ ಬಟ್ಟೆಗಳ ದಾನ ಮಾಡಿ. 

ತುಲಾ/Libra 

ಬುಧ ಗ್ರಹವು ತುಲಾ ರಾಶಿಚಕ್ರದ ಹನ್ನೆರಡನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಈ ಸಮಯದಲ್ಲಿ ಇದು ತುಲಾ ರಾಶಿಚಕ್ರದ ಐದನೇ ಮನೆಗೆ ಸಾಗುತ್ತದೆ. 

ವೈಯಕ್ತಿಕವಾಗಿ, ಪ್ರೀತಿಯ ಸಂಬಂಧದಲ್ಲಿರುವ ತುಲಾ ರಾಶಿಚಕ್ರದ ಸ್ಥಳೀಯರ ಸಂಬಂಧವು ಬಲಗೊಳ್ಳುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುವಿರಿ. ವಿವಾಹಿತರು ತಮ್ಮ ಮಕ್ಕಳು ಮತ್ತು ಪೋಷಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. 

ವೃತ್ತಿಪರವಾಗಿ, ಈ ಅವಧಿಯು ಅನುಕೂಲಕರವಾಗಿರಲಿದೆ. ಕೆಲಸದಲ್ಲಿ ಸತ್ತಲದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದಲ್ಲದೆ ತುಲಾ ರಾಶಿಚಕ್ರದ ಸ್ಥಳೀಯರು ತಮ್ಮ ಕೆಲಸದ ಸ್ಥಳದಲ್ಲಿ ಬಡ್ತಿ ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. ಶಿಕ್ಷಣದ ಬಗ್ಗೆ ಮಾತನಾಡಿದರೆ, ತುಲಾ ರಾಶಿಚಕ್ರದ ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಿರುವ ಸಾಧ್ಯತೆ ಇದೆ. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಿರುವ ವಿದ್ಯಾರ್ಥಿಗಳು ಈ ಅವಧಿಯಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ.  ಇದಲ್ಲದೆ ತುಲಾ ರಾಶಿಚಕ್ರದ ಜನರು ಆಧ್ಯಾತ್ಮಿಕತೆಯತ್ತ ಹೆಚ್ಚು ಒಲವು ಹೊಂದಿರುತ್ತಾರೆ. 

ಪರಿಹಾರ – ಬುಧವಾರದಂದು ಹಸಿರು ಬಣ್ಣದ ಬಳೆಗಳನ್ನು ದಾನ ಮಾಡುವುದು ನಿಮಗೆ ಉತ್ತಮ. 

ವೃಶ್ಚಿಕ/Scorpio  

ಬುಧ ಗ್ರಹವು ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಸಮಯದಲ್ಲಿ ಇದು ನಿಮ್ಮ ನಾಲ್ಕನೇ ಮನೆಗೆ ಸಾಗುತ್ತದೆ. ಪರಿಣಾಮವಾಗಿ ಸಂಚಾರದ ಸಮಯದಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯುತ್ತೀರಿ. 

ವೈಯಕ್ತಿಕವಾಗಿ, ವೃಶ್ಚಿಕ ರಾಶಿಚಕ್ರದ ಸ್ಥಳೀಯರ ಕುಟುಂಬದ ವಾತಾವರಣವು ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧವು ಸೌಹಾರ್ದಯುತವಾಗಿರುತ್ತದೆ. ಈ ಸಮಯದಲ್ಲಿ ಕುಟುಂಬಕ್ಕಾಗಿ ನಿಮ್ಮ ಹಣವನ್ನು ನೀವು ಖರ್ಚು ಮಾಡಬಹುದು. ಇದರ ಹೊರತಾಗಿಯೂ ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯವು ಹದಗೆಡುವ ಸಾಧ್ಯತೆಯೂ ಇದೆ. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲು ನಿಮಗೆ ಸಲಹೆ ನೀಡಲಾಗುತ್ತದೆ. 

ವೃತ್ತಿಪರ ಜೀವನದ ಬಗೆ ಮಾತನಾಡಿದರೆ, ಯಾವುದೇ ರೀತಿಯ ವ್ಯಾಪಾರದಲ್ಲಿ ತೊಡಗಿರುವ ಜನರಿಗೆ ಈ ಸಮಯವು ಅನುಕೂಲಕರವಾಗಿರುತ್ತದೆ. ಸರ್ಕಾರಿ ಉದ್ಯೋಗದಲ್ಲಿ ತೊಡಗಿರುವ ಜನರು ಈ ಸಮಯದಲ್ಲಿ ವರ್ಗಾವಣೆಯನ್ನು ಪಡೆಯಬಹುದು. ಇದಲ್ಲದೆ ಯಾವುದೇ ಹೂಡಿಕೆಯಲ್ಲಿ ಕುಟುಂಬದ ಬೆಂಬಲವನ್ನು ನೀವು ಪಡೆಯುತ್ತೀರಿ. ಆರ್ಥಿಕವಾಗಿ, ಈ ಸಮಯದಲ್ಲಿ ಪೂರ್ವಜರ ಆಸ್ತಿಯ ಮೂಲಕ ನೀವು ಲಾಭವನ್ನು ಪಡೆಯಬಹುದು. ವಿದ್ಯಾರ್ಥಿಗಳು ಈ ಸಮಯದಲ್ಲಿ ತಮ್ಮ ಅಧ್ಯಯನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಕಠಿಣ ಪರಿಶ್ರಮ ಮಾಡಲು ಸೂಚಿಸಲಾಗುತ್ತದೆ. 

ಪರಿಹಾರ – ಪ್ರತಿದಿನ ಬೆಳಿಗ್ಗೆ ನಿಯಮಿತವಾಗಿ ವಿಷ್ಣುಸಹಸ್ರನಾಮವನ್ನು ಪಠಿಸುವುದು ನಿಮಗೆ ಉತ್ತಮ.  

ಧನು/Sagittarius 

ಬುಧ ಗ್ರಹವು ಧನು ರಾಶಿಚಕ್ರದ ಏಳನೇ ಮತ್ತು ಹತ್ತನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ಧನು ರಾಶಿಚಕ್ರದ ಮೂರನೇ ಮನೆಗೆ ಸಾಗುತ್ತದೆ.  ಈ ಅವಧಿಯಲ್ಲಿ ಕಠಿಣ ಪರಿಶ್ರಮ ಮತ್ತು ನಿಮ್ಮ ಪ್ರಯತ್ನಗಳು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. 

ಧನು ರಾಶಿಚಕ್ರದ ಸ್ಥಳೀಯರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ವಿವಾಹಿತ ಜನರು ತಮ್ಮ ಜೀವನ ಸಂಗಾತಿಯೊಂದಿಗಿನ ಸಮಬಂಧದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಕಾಳಜಿ ವಹಿಸಬೇಕು.  ಈ ಸಮಯದಲ್ಲಿ ನಿಮ್ಮ ಒಡಹುಟ್ಟಿದವರು, ಸ್ನೇಹಿತರು ಮತ್ತು ಪರಿಚಿತ ಜನರೊಂದಿಗೆ ಎಲ್ಲಾದರೂ ಹೊರಗೆ ಹೋಗಲು ನೀವು ಅಲ್ಪ ದೂರದ ಪ್ರಯಾಣಗಳನ್ನು ಯೋಜಿಸಬಹುದು. 

ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಈ ಅವಧಿಯಲ್ಲಿ ವೃತ್ತಿಪರರು ತಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಆದಾಯವೂ ಹೆಚ್ಚಾಗಬಹುದು ಮತ್ತು ನೀವು ಬಡ್ತಿ ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಸಂವಹನ ಕೌಶಲ್ಯವು ಸುಧಾರಿಸುತ್ತದೆ. ಇದರಿಂದಾಗಿ ವ್ಯಾಪಾರದಲ್ಲಿ ತೊಡಗಿರುವ ಧನು ರಾಶಿಚಕ್ರದ ಜನರು ಹೊಸ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಬಹುದು. 

ಪರಿಹಾರ – ಸಮುದ್ರಪಾಲ ಗಿಡಮೂಲಿಕೆಯನ್ನು ಹಸಿರು ಬಟ್ಟೆಯಲ್ಲಿ ಸುತ್ತಿ ಕೆಲಸ ಮಾಡುವ ಸ್ಥಳದಲ್ಲಿ ಬುಧವಾರದಂದು ನಿಮ್ಮ ಕೈಯ ಪಕ್ಕದಲ್ಲಿ ಧರಿಸಿ. 

ಮಕರ/Capricorn  

ಬುಧ ಗ್ರಹವು ಮಕರ ರಾಶಿಚಕ್ರದ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದೆ. ಸಂಚಾರದ ಈ ಸಮಯದಲ್ಲಿ ಇದು ನಿಮ್ಮ ಎರಡನೇ ಮನೆಗೆ ಪ್ರವೇಶಿಸುತ್ತದೆ. 

ವೈಯಕ್ತಿಕವಾಗಿ, ಸಂಚಾರದ ಪರಿಣಾಮದಿಂದಾಗಿ ನಿಮ್ಮ ತಾಯಿಯೊಂದಿಗಿನ ಸಂಬಂಧವು ಹದಗೆಡಬಹುದು. ಇದರಿಂದಾಗಿ ಈ ಸಮಯದಲ್ಲಿ ನಿಮ್ಮ ಧ್ವನಿಯನ್ನು ಸುಧಾರಿಸಲು ನಿಮಗೆ ಸೂಚಿಸಲಾಗುತ್ತದೆ. ಈ ಸಮಯದಲ್ಲಿ ಪೂರ್ವಜರ ಮೂಲಕ ನೀವು ಹಣಕಾಸು ಅಥವಾ ಯಾವುದೇ ವಸ್ತುವನ್ನು ಪಡೆಯುವ ಸಾಧ್ಯತೆಯೂ ಇದೆ. ಆರ್ಥಿಕವಾಗಿ, ಈ ಅವಧಿಯಲ್ಲಿ ಯಾವುದೇ ರೀತಿಯ ಹೂಡಿಕೆಯು ನಿಮಗೆ ಲಾಭವನ್ನು ನೀಡುವ ಸಾಧ್ಯತೆಯೂ ಇದೆ. ಇದಲ್ಲದೆ ನಿಮಗಾಗಿ ಮನೆಯನ್ನು ಖರೀದಿಸುವ ಸಂಪೂರ್ಣ  ಸಾಧ್ಯತೆಯೂ ಇದೆ. 

ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಕೆಲಸದ ಸ್ಥಳದಲ್ಲಿ ನಿಮ್ಮ ಸಂವಹನ ಕೌಶಲ್ಯವು ಸುಧಾರಿಸುತ್ತದೆ. ಇದರಿಂದಾಗಿ ಗ್ರಾಹಕರನ್ನು ಆಕರ್ಷಿಸುವಲ್ಲಿ ನೀವು ಯಶಸ್ವಿಯಾಗಬಹುದು. ಇದು ನಿಮ್ಮ ಆದ್ಯವನ್ನು ಹೆಚ್ಚಿಸುತ್ತದೆ. ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಹೊಸ ಯೋಜನೆಗಳನ್ನು ಯೋಜಿಸಬಹುದು. ಈ ಅವಧಿಯಲ್ಲಿ ಅದೃಷ್ಟವು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸುತ್ತದೆ. 

ಪರಿಹಾರ – ಬುಧವಾರದಂದು ದೇವಸ್ಥಾನ ಅಥವಾ ಅಗತ್ಯವಿರುವ ಜನರಿಗೆ ಹಸಿರುಬೇಳೆ ದಾನ ಮಾಡುವುದು ನಿಮಗೆ ಉತ್ತಮ. 

ಕುಂಭ/Aquarius  

ಬುಧ ಗ್ರಹವು ಕುಂಭ ರಾಶಿಚಕ್ರದ ಐದನೇ ಮತ್ತು ಎಂಟನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ಕುಂಭ ರಾಶಿಚಕ್ರದ ಲಗ್ನದ ಮನೆ ಅಂದರೆ ಮೊದಲನೇ ಮನೆಗೆ ಪ್ರವೇಶಿಸಲಿದೆ. ಪರಿಣಾಮವಾಗಿ ಕುಂಭ ರಾಶಿಚಕ್ರದ ಸ್ಥಳೀಯರು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದಾರೆ.  

ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದರೆ, ಪ್ರೀತಿಯ ಸಂಬಂಧವನ್ನು ಹೊಂದಿರುವ ಕುಂಭ ರಾಶಿಚಕ್ರದ ಜನರ ಪ್ರೀತಿಯ ಜೀವನವು ಈ ಸಮಯದಲ್ಲಿ ಸಾಕಷ್ಟು ಉತ್ತಮವಾಗಿರಲಿದೆ. ಏಕೆಂದರೆ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಉತ್ತಮ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವಿವಾಹಿತ ಜನರು ಜೀವನ ಸಂಗಾತಿಯೊಂದಿಗಿನ ತಮ್ಮ ಸಂಬಂಧವನ್ನು ಸುಧಾರಿಸುತ್ತಾರೆ. ಕುಂಭ ರಾಶಿಚಕ್ರದ ಸ್ಥಳೀಯರಿಗೆ ಈ ಸಮಯವೂ ಉತ್ತಮವಾಗಿರುತ್ತದೆ. ನಿಮ್ಮ ಮಕ್ಕಳು ಈ ಸಮಯದಲ್ಲಿ ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ಯಶಸ್ವಿಯಾಗುವ ಸಂಪೂರ್ಣ ಸಾಧ್ಯತೆಯೂ ಇದೆ. 

ವೃತ್ತಿಪರ ಜೀವನದ ಬಗ್ಗೆ ಮಾತನಾಡಿದರೆ, ಕುಂಭ ರಾಶಿಚಕ್ರದ ಜನರು ಈ ಸಮಯದಲ್ಲಿ ತಮ್ಮ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಲಾಗುತ್ತದೆ, ಏಕೆಂದರೆ ಈ ಅವಧಿಯಲ್ಲಿ ನಿಮಗೆ ಹಾನಿಯಾಗಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಇದು ಉತ್ತಮ ಸಮಯ. ಈ  ಸಮಯದಲ್ಲಿ  ನಿಮ್ಮ ಸಾಮಾಜಿಕ ವಲಯ ಹೆಚ್ಚಾಗಬಹುದು. ಇದರಿಂದಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆಯೂ ಇದೆ. ಆದಾಗ್ಯೂ, ಬೆಟ್ಟಿಂಗ್ ನಂತಹ ಕ್ರಿಯೆಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. 

ಪರಿಹಾರ – ಬುಧವಾರದಂದು ಹಸುವಿಯಿಗೆ ಹಸಿರು ಹುಲ್ಲು ತಿನ್ನಿಸುವುದು ನಿಮಗೆ ಉತ್ತಮ. 

ಮೀನ/Pisces  

ಬುಧ ಗ್ರಹವು ಮೀನ ರಾಶಿಚಕ್ರದ ನಾಲ್ಕನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದೆ ಮತ್ತು ಸಂಚಾರದ ಸಮಯದಲ್ಲಿ ಇದು ಮೀನ ರಾಶಿಚಕ್ರದ ಹನ್ನೊಂದನೇ ಮನೆಗೆ ಪ್ರವೇಶಿಸುತ್ತದೆ. 

ವೈಯಕ್ತಿಕವಾಗಿ, ಮೀನ ರಾಶಿಚಕ್ರದ ಸ್ಥಳೀಯರು ತಮ್ಮ ಜೀವನ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸ್ವಲ್ಪ ಅಂತರವನ್ನು ಮತ್ತು ಕೆಲವು ಗೊಂದಲವನ್ನು ಎದುರಿಸಬೇಕಾಗಬಹುದು. ಇದಕ್ಕೆ ಕಾರಣ ಕೆಲಸದ ಹೊರೆಯಾಗಿರಬಹುದು. ಈ ಸಮಯದಲ್ಲಿ ನಿಮ್ಮ ವೈಯಕ್ತಿಕ ವೆಚ್ಚಗಳು ಸಹ ಹೆಚ್ಚಾಗುತ್ತವೆ.  ಈ ಸಮಯದಲ್ಲಿ ದೀರ್ಘ ಪ್ರಯಾಣವನ್ನು ಸಹ ನೀವು ಮಾಡುವಿರಿ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವ ಮೀನ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಉತ್ತಮ ಸುದ್ಧಿಯನ್ನು ತರಬಹುದು. 

 ವೃತ್ತಿಪರವಾಗಿ, ಈ ಸಮಯದಲ್ಲಿ ನಿಮ್ಮ ಆದಾಯವು ಹೆಚ್ಚಾಗುವ ಸಂಪೂರ್ಣ ಸಾಧ್ಯತೆ ಇದೆ. ಇದು ನಿಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತದೆ. ಸ್ವಂತ ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ವ್ಯಾಪಾರದಲ್ಲಿ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಕಾಣುವ ಸಾಧ್ಯತೆ ಇದೆ. ಪಾಲುದಾರಿಕೆಯ ವ್ಯಾಪಾರದಲ್ಲಿ ತೊಡಗಿರುವ ಜನರು ತಮ್ಮ ಕೆಲಸದ ಸ್ಥಳದಲ್ಲಿ ಎಚ್ಚರಿಕೆಯಿಂದಿರಲು ಸೂಚಿಸಲಾಗುತ್ತದೆ. ಈ ಸಮಯದಲ್ಲಿ ಉತ್ತಮ ಡೀಲಿಂಗ್ ಗಳನ್ನು ಪಡೆಯುವಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗಬಹುದು. 

ಪರಿಹಾರ – ಪ್ರತಿದಿನ ನಿಯಮಿತವಾಗಿ ಬುಧ ಬೀಜ ಮಂತ್ರವನ್ನು ಪಠಿಸುವುದು ನಿಮಗೆ ಉತ್ತಮ. 

ಈ ಲೇಖನವು ನಿಮ್ಮ ಮುಂಬರುವ ಸಮಯವನ್ನು ಸರಿಪಡಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ . ಧನ್ಯವಾದ!

For more, find us on Instagram. Read your Weekly Horoscope.

 1,473 

Posted On - March 8, 2022 | Posted By - Anita Saini | Read By -

 1,473 

are you compatible ?

Choose your and your partner's zodiac sign to check compatibility

your sign
partner's sign

Connect with an Astrologer on Call or Chat for more personalised detailed predictions.

Our Astrologers

21,000+ Best Astrologers from India for Online Consultation